ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ
ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಯಲ್ಲಿ ಬಿಸಾಕಿದ ಹಳಸಿದ ಆಹಾರ ತಿಂದು ಬದುಕುತ್ತಿದ್ದ ಪುಟ್ಟ ಬಾಲಕಿ ಇಂದು ಡಾಕ್ಟರ್ ಆಗಿದ್ದಾಳೆ. ಹೌದು ಹಿಮಾಚಲ ಪ್ರದೇಶದ ಟಿಬೆಟನ್ ನಿರಾಶ್ರಿತರ ಶಿಬಿರದ ವಿದ್ಯಾರ್ಥಿನಿ ಪಿಂಕಿ ಹರ್ಯಾನ್ ಈಗ ದೇಶದ ಗಮನಸೆಳೆದಿದ್ದಾಳೆ.
ಬಡತನ ಜೀವನಕ್ಕೆ ಹೊರತು ಕಲಿಕೆಗಲ್ಲ, ತಾಯಿ ಸರಸ್ವತಿಯನ್ನು ಒಲಿಸಿಕೊಂಡು ಬಡತನವನ್ನು ಮೆಟ್ಟಿ ನಿಂತು ಸಾಧನೆಗೈದ ಹಲವು ವಿದ್ಯಾರ್ಥಿಗಳ ಜೀವನದ ಸ್ಫೂರ್ತಿದಾಯಕ ಕಥೆಗಳನ್ನು ನೀವು ಕೇಳಿರಬಹುದು. ಇದೀಗ ಇದಕ್ಕೊಂದು ಉತ್ತಮ ನಿದರ್ಶನ ಎಂಬಂತೆ ಯುವತಿಯೊಬ್ಬಳ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಯಲ್ಲಿ ತಿಂದು ಬಿಸಾಕಿದ ಹಳಸಿದ ಆಹಾರ ತಿಂದು ಬದುಕುತ್ತಿದ್ದ ಪುಟ್ಟ ಬಾಲಕಿ ಇಂದು ಡಾಕ್ಟರ್ ಆಗಿದ್ದಾಳೆ. ಹೌದು ಹಿಮಾಚಲ ಪ್ರದೇಶದ ಟಿಬೆಟನ್ ನಿರಾಶ್ರಿತರ ಶಿಬಿರದ ವಿದ್ಯಾರ್ಥಿನಿ ಪಿಂಕಿ ಹರ್ಯಾನ್ ದೇಶದ ಗಮನಸೆಳೆದಿದ್ದಾಳೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮೆಕ್ಲಿಯೋಡ್‌ಗಂಜ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಪಿಂಕಿ ಹರಿಯಾಣ, ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈ ಪುಟ್ಟ ಬಾಲಕಿಯನ್ನು ಗಮನಿಸಿದ ಹಿಮಾಚಲ ಪ್ರದೇಶದ ಧರ್ಮಶಾಲಾ ಮೂಲದ ದತ್ತಿ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಟಿಬೆಟ್ ಸನ್ಯಾಸಿ ಲೊಬ್ಸೆಂಗ್ ಜಮ್ಯಾಂಗ್ ವಿದ್ಯಾಭ್ಯಾಸ ನೀಡಲು ಮುಂದಾಗಿದ್ದಾರೆ. ಈ ಕುರಿತು ಮಗುವನ್ನು ನಿರಾಶ್ರಿತರ ಶಿಬಿರಕ್ಕೆ ಸೇರಿಸುವಂತೆ ಲೊಬ್ಸೆಂಗ್ ಜಮ್ಯಾಂಗ್ ಆಕೆಯ ಪೋಷಕರಲ್ಲಿ ಕೇಳಿಕೊಂಡಿದ್ದರು. ಆದರೆ ಆಕೆಯ ತಂದೆ ಕಾಶ್ಮೀರಿ ಲಾಲ್‌ರ ಮನವೊಲಿಸುವುದು ಸುಲಭವಾಗಿರಲಿಲ್ಲ.ಸತತ ಪ್ರಯತ್ನದ ಬಳಿಕ ಕೊನೆಗೂ ಆಕೆಗೆ ಶಿಕ್ಷಣ ಕೊಡಿಸಲು ಕಾಶ್ಮೀರಿ ಲಾಲ್ ಒಪ್ಪಿಕೊಂಡರು.
#WATCH | Dharamshala: “I was 4.5 years old when I came to the hostel and before that, my mother and I used to beg…In 2004 Guru ji selected me and I am grateful for that…I am also grateful to my parents that they gave me a chance to get my education…,” says Pinki Haryan,… https://t.co/czbhOFjfHB pic.twitter.com/HTQEg7HsoE
— ANI (@ANI) October 4, 2024
ಇದನ್ನೂ ಓದಿ: ವಿದೇಶದಲ್ಲಿ ಇಂಜಿನಿಯರ್ ಆಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿ ಇಂದು ಬೀದಿಬದಿ ಜೀವನ; ಪತ್ನಿಯಿಂದಲೇ ಈ ಸ್ಥಿತಿ!
ಬಳಿಕ ಅಧ್ಯಯನದಲ್ಲಿ ಸದಾ ಮುಂದಿದ್ದ ಪಿಂಕಿ, ತನ್ನ ಪಿಯುಸಿ ಪೂರ್ಣಗೊಳಿಸಿದ ನಂತರ, NEET ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಭೇದಿಸಿದಳು. 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದು ಈಗ MBBS ಪದವಿಯನ್ನು ಪೂರ್ಣಗೊಳಿಸಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ