AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಶಾಲೆಗೆ ಹೋಗೋದು ಬಿಟ್ಟು, ಗಲ್ಲಿಯಲ್ಲಿ ರೊಮ್ಯಾನ್ಸ್‌ ಮಾಡ್ತಾ ನಿಂತ ಸ್ಟೂಡೆಂಟ್ಸ್‌; ವಿಡಿಯೋ ವೈರಲ್‌

ಹದಿಹರೆಯದ ಮಕ್ಕಳು ಪ್ರೀತಿ ಪ್ರೇಮದ ಬಲೆಗೆ ಸಿಕ್ಕಿ ದಾರಿ ತಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಹೂಸ್ಕೂಲ್‌ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗೋದನ್ನು ಬಿಟ್ಟು ರಾಜಾರೋಷವಾಗಿ ಬೀದಿಯಲ್ಲಿ ಕಿಸ್ಸಿಂಗ್‌, ಹಗ್ಗಿಂಗ್‌ ಎನ್ನುತ್ತಾ ರೊಮ್ಯಾನ್ಸ್‌ ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Viral: ಶಾಲೆಗೆ ಹೋಗೋದು ಬಿಟ್ಟು, ಗಲ್ಲಿಯಲ್ಲಿ ರೊಮ್ಯಾನ್ಸ್‌ ಮಾಡ್ತಾ ನಿಂತ  ಸ್ಟೂಡೆಂಟ್ಸ್‌; ವಿಡಿಯೋ ವೈರಲ್‌
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Oct 06, 2024 | 6:30 PM

Share

ಈಗೀಗ ಹದಿ ಹರೆಯದ ಮಕ್ಕಳು ಕೂಡಾ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ಓದಿನ ಕಡೆ ಗಮನ ಕೊಡದೆ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇನ್ನೂ ಕೆಲವರು ಚಿಕ್ಕ ವಯಸ್ಸಿಗೆಯೇ ಅತಿರೇಕದ ವರ್ತನೆಯನ್ನು ತೋರುತ್ತಿರುತ್ತಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹೂಸ್ಕೂಲ್‌ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗೋದನ್ನು ಬಿಟ್ಟು ರಾಜಾರೋಷವಾಗಿ ಬೀದಿಯಲ್ಲಿ ಕಿಸ್ಸಿಂಗ್‌, ಹಗ್ಗಿಂಗ್‌ ಎನ್ನುತ್ತಾ ರೊಮ್ಯಾನ್ಸ್‌ ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಓದೋ ವಯಸ್ಸಲ್ಲಿ ಓದೋದು ಬಿಟ್ಟು ಇಲ್ಲಿಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮ, ರೊಮ್ಯಾನ್ಸ್‌ ಅಂತಾ ಕಾಲ ಕಳೆದಿದ್ದಾರೆ. ಈ ಕುರಿತ ವಿಡಿಯೋವನ್ನು MojClips ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಗಳಿಬ್ಬರು ರೊಮ್ಯಾನ್ಸ್‌ ಮಾಡ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಶಾಲಾ ಸಮವಸ್ತ್ರ ಹಾಗೂ ಬೆನ್ನಲ್ಲಿ ಬ್ಯಾಗ್‌ ಧರಿಸಿದ್ದ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗದೆ ಬೀದಿಯ ಮೂಲೆಯಲ್ಲಿ ನಿಂತು ಯಾರು ಇತ್ತ ಕಡೆ ಬರದಿರುವುದನ್ನು ಗಮನಿಸಿ ಕಿಸ್‌, ಹಗ್ಗಿಂಗ್‌ ಅಂತ ರೊಮ್ಯಾನ್ಸ್‌ ಮಾಡುತ್ತಾ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್​​; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ

ಅಕ್ಟೋಬರ್‌ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಂಥಾ ಅಸಹ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಓದೋ ವಯಸ್ಸಿನಲ್ಲಿ ಈ ಹುಚ್ಚಾಟ ಬೇಕಿತ್ತಾ ಎಂದು ಛೀಮಾರಿ ಹಾಕಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ