Viral Video: ಜಾನಪದ ಸಂಪತ್ತಿನ ಒಂದು ಭಾಗ ಕಝಕ್ ನೃತ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಜಾನಪದ ನೃತ್ಯದ ಒಂದು ಭಾಗವಾದ ಕಝಕ್ ನೃತ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆದ್ದರಿಂದ ಏನಿದು ಕಝಕ್ ನೃತ್ಯ, ಎಲ್ಲಿ ಜನಪ್ರಿಯವಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಅದರಂತೆ ಇದೀಗ ಜಾನಪದ ನೃತ್ಯದ ಒಂದು ಭಾಗವಾದ ಕಝಕ್ ನೃತ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ನೃತ್ಯ ಪ್ರದರ್ಶನ ವಿಭಿನ್ನವಾಗಿ ಕಾಣಿಸಿದರೂ ಕೂಡ ಈ ನೃತ್ಯಕ್ಕೆ ಅದರದ್ದೇ ಆದ ವಿಶೇಷ ಇತಿಹಾಸವಿದೆ. ಆದ್ದರಿಂದ ಏನಿದು ಕಝಕ್ ನೃತ್ಯ, ಎಲ್ಲಿ ಜನಪ್ರಿಯವಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಏನಿದು ಕಝಕ್ ನೃತ್ಯ?
ಕಝಕ್ ಜಾನಪದ ನೃತ್ಯವು ಸಾಂಪ್ರದಾಯಿಕ ಕಝಕ್ ಸಂಸ್ಕೃತಿಯನ್ನು ಆಧರಿಸಿದೆ. 17 ನೇ ಮತ್ತು 18 ನೇ ಶತಮಾನಗಳಲ್ಲಿ, ಇದನ್ನು ಉಕ್ರೇನ್‌ನಾದ್ಯಂತ ಮತ್ತು ಫ್ರಾನ್ಸ್, ಪೋಲೆಂಡ್ ಮತ್ತು ರಷ್ಯಾ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾಯಿತು. ಈ ನೃತ್ಯ ಪ್ರಕಾರ ಹೇಗಿದೆ ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Traditional Kazakh dance pic.twitter.com/d4gXpUe8wI
— Science girl (@gunsnrosesgirl3) October 6, 2024
ಇದನ್ನೂ ಓದಿ: ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ವಿಡಿಯೋ ವೈರಲ್
@gunsnrosesgirl3 ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಸಾಂಪ್ರದಾಯಿಕ ಕಝಕ್ ನೃತ್ಯದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಕೆಲವೇ ಗಂಟೆಳಲ್ಲಿ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ