Age reversal ಎಂಬುದು ಸಾಧ್ಯವಾ? ವಯಸ್ಸು 45 -ಹದಿಹರೆಯ ಹಂಬಲಿಸಿ ದಿನಕ್ಕೆ 111 ಮಾತ್ರೆ ತಗೋತಿದ್ದಾನೆ

|

Updated on: Sep 26, 2023 | 11:59 AM

ಅಸಲಿಗೆ ಈ ಏಜ್​ ರಿವರ್ಸಲ್​​ ಸಾಧ್ಯವಾದೀತಾ? ಅಬ್ಬಬ್ಬಾ ಅಂದರೆ ದೀರ್ಘಾಯುಷ್ಯ ಸಿದ್ಧಿಸಿಕೊಳ್ಳಬಹುದು. ನಮ್ಮ ರಸಋಷಿಗಳು, ಮುನಿಗಳು, ಮೌನಿಗಳು ಪುರಾಣಪುರುಷರನ್ನು ನಾವು ಕೇಳಿಬಲ್ಲೆವು -ಅವರು ನೂರಾರು ವರ್ಷ ಬದುಕಿದ್ದರಂತೆ ಅಂತಾ. ಆದರೆ ವಯಸ್ಸು ಚಿಕ್ಕದಾಗುವುದು ಅಂದರೆ ಅದು ಅಸಾಧ್ಯದ ಮಾತೇ ಸರಿ. ಅದು ನಿಸರ್ಗಕ್ಕೆ ಅಸಹಜವೂ, ವಿರುದ್ಧವೂ ಆಗುತ್ತದೆ, ಅಲ್ಲವೇ!? ಆದರೂ ಅಮೆರಿಕದ ಈ ಜಾನ್ಸನ್​ ತೆವಲು ಎಂತಹುದು ನೋಡಿ!

Age reversal ಎಂಬುದು ಸಾಧ್ಯವಾ? ವಯಸ್ಸು 45 -ಹದಿಹರೆಯ ಹಂಬಲಿಸಿ ದಿನಕ್ಕೆ 111 ಮಾತ್ರೆ ತಗೋತಿದ್ದಾನೆ
ಇವಯ್ಯನಿಗೆ 45ರ ವಯಸ್ಸು -ಹದಿಹರೆಯ ಹಂಬಲಿಸಿ ದಿನಕ್ಕೆ 111 ಮಾತ್ರೆ ತಗೋತಿದ್ದಾನೆ
Follow us on

ಬ್ರಿಯಾನ್ ಜಾನ್ಸನ್, ಅಮೆರಿಕದ ಕೋಟ್ಯಧಿಪತಿ ಉದ್ಯಮಿ (Bryan Johnson, US billionaire). ವರ್ಷಕ್ಕೆ 2 ದಶಲಕ್ಷ ಡಾಲರ್​​ಗಿಂತಲೂ ಹೆಚ್ಚು ಹಣ ಖರ್ಚು ಮಾಡುತ್ತಾರೆ ಇವರ ಮನದ ಬಯಕೆ-ಕೋರಿಕೆ ಒಂದೇ. ತನ್ನ ವಯಸ್ಸನ್ನು ಈಗಿರುವ 45 ವರ್ಷಕ್ಕಿಂತ ಹದಿನೆಂಟಕ್ಕೆ (ಹಿಂ)ತಿರುಗಿಸಬೇಕು (age reversal) ಎಂದು. ಆತನ ಇಂತಹ ತೀವ್ರ ಆರೋಗ್ಯ ಕಸರತ್ತು ನೋಡಿ ಮಹಿಳೆಯರು ಹೌಹಾರಿದ್ದಾರೆ. ಯಪ್ಪಾ ಇವನೊಂದಿಗೆ ಡೇಟಿಂಗ್ ಮಾಡುವುದು ಕಠಿಣ. ಇವಯ್ಯನ ಸಹವಾಸವೇ ಬೇಡ ನಮಗೆ ಎಂದು ಮಾರು ದೂರ ಉಳಿದಿದ್ದಾರೆ. ಅಸಲಿಗೆ ಈ ಏಜ್​ ರಿವರ್ಸಲ್​​ ಸಾಧ್ಯವಾದೀತಾ? ಅಬ್ಬಬ್ಬಾ ಅಂದರೆ ದೀರ್ಘಾಯುಷ್ಯ ಸಿದ್ಧಿಸಿಕೊಳ್ಳಬಹುದು. ನಮ್ಮ ರಸಋಷಿಗಳು, ಮುನಿಗಳು, ಮೌನಿಗಳು ಪುರಾಣಪುರುಷರನ್ನು ನಾವು ಕೇಳಿಬಲ್ಲೆವು -ಅವರು ನೂರಾರು ವರ್ಷ ಬದುಕಿದ್ದರಂತೆ ಅಂತಾ. ಆದರೆ ವಯಸ್ಸು ಚಿಕ್ಕದಾಗುವುದು ಅಂದರೆ ಅದು ಅಸಾಧ್ಯದ ಮಾತೇ ಸರಿ. ಅದು ನಿಸರ್ಗಕ್ಕೆ ಅಸಹಜವೂ, ವಿರುದ್ಧವೂ ಆಗುತ್ತದೆ, ಅಲ್ಲವೇ!?

ಸೆವೆನ್ ಬಾರ್ಟ್ಲೆಟ್‌ರ “ಡೈರಿ ಆಫ್ ಎ ಸಿಇಒ” ಪಾಡ್‌ಕ್ಯಾಸ್ಟ್‌ನಲ್ಲಿ 45 ವರ್ಷದ ಬ್ರಿಯಾನ್ ಜಾನ್ಸನ್ ತಾನು ಏಕಾಂಗಿಯಾಗಿ ಉಳಿದಿರುವುದನ್ನು ದೃಢಪಡಿಸಿದ್ದಾರೆ. ತನ್ನ ವಿಲಕ್ಷಣ ತನವನ್ನು ಒಪ್ಪಿಕೊಳ್ಳುವ ಪಾಲುದಾರಳನ್ನು ಹುಡುಕುವುದು ಕಠಿಣವಾಗಿದೆ ಎಂದೂ ಆತ ಒಪ್ಪಿಕೊಂಡಿದ್ದಾನೆ. ಇನ್ನು ಇವಯ್ಯನಿಗೆ 17 ವರ್ಷದ ಒಬ್ಬ ಮಗ ಸಹ ಇದ್ದಾನೆ. “ನನ್ನ ಮಗ ಮತ್ತು ನಾನು ಮನೆಯಲ್ಲಿ ವ್ಯಾವಹಾರಿಕ ಪ್ರೋಟೋಕಾಲ್ ಹೊಂದಿದ್ದೇವೆ, ಅಲ್ಲಿ ಯಾವುದೇ ತಂದೆ-ಮಗನ ಔಪಚಾರಿಕತೆಯ ವಿನಿಮಯವಿರುವುದಿಲ್ಲ ಎಂದು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಾರೆ ಈ ಜಾನ್ಸನ್​​ ಅಪ್ಪ!

“ಪ್ರಾಜೆಕ್ಟ್ ಬ್ಲೂಪ್ರಿಂಟ್” ಮೂಲಕ ಈಗಾಗಲೇ ತನ್ನ ಎಪಿಜೆನೆಟಿಕ್ ವಯಸ್ಸನ್ನು 5.1 ವರ್ಷಗಳಷ್ಟು (Anti-Aging Technique) ಕಡಿಮೆಗೊಳಿಸಿದೆ ಎಂದು ಹೇಳಿಕೊಳ್ಳುವ ಜಾನ್ಸನ್ ಕ್ಯಾಲಿಫೋರ್ನಿಯಾ ಮೂಲದ ಟೆಕ್ ಬಿಲಿಯನೇರ್ ಎಂದು ಪ್ರಸಿದ್ಧರಾಗಿದ್ದಾರೆ. ಈ ಅಮರ ಜೀವಿ ಕಟ್ಟುನಿಟ್ಟಾಗಿ ದೇಹಾ ಆರೋಗ್ಯ ದಿನಚರಿಯನ್ನು ಅನುಸರಿಸುತ್ತಾರೆ. ಸಸ್ಯಾಹಾರಿ ಆಹಾರವನ್ನು (vegan diet) ಮಾತ್ರವೇ ಅನುಸರಿಸುತ್ತಾರೆ. ವಯಸ್ಸಿನ ಹಿಮ್ಮುಖದ ಕಲ್ಪನೆಯ ಖಯಾಲಿಗೆ ಸಿಲುಕಿರುವ ಜಾನ್ಸನ್ ಮತ್ತೆ ಹದಿನೆಂಟರ ಯುವಕ ಆಗಲು ಬಯಸಿದ್ದಾರೆ. ಅದನ್ನು ಸಾಧಿಸಲು ಆರೋಗ್ಯ ವೃತ್ತಿಪರರು, ವೈದ್ಯರು ಮತ್ತು ಹಲವಾರು ಯಂತ್ರಗಳ ಮೊರೆಹೋಗಿದ್ದಾರೆ ಜಾನ್ಸನ್​!

ಆತನ ಕಟ್ಟುನಿಟ್ಟಿನ ದಿನಚರಿ ಎಂದರೆ ಆತ ರಾತ್ರಿ 8.30ಕ್ಕೆಲ್ಲಾ ಮಲಗಿಬಿಡುತ್ತಾನಂತೆ. ಬೆಳಗಿನ 6 ಗಂಟೆಯಿಂದ 11 ರವರೆಗೆ ದಿನಕ್ಕೆ 2,250 ಕ್ಯಾಲೊರಿಗಳನ್ನು ಸೇವಿಸುತ್ತಾನೆ. ನಾಲ್ಕರಿಂದ ಐದು ಗಂಟೆಗಳ ಕಾಲ ‘ಏಕಾಗ್ರಚಿತ್ತದೊಂದಿಗೆ ಕೇಂದ್ರೀಕೃತ ಆಲೋಚನೆ’ ಗಾಗಿ ಮೀಸಲಿಡುತ್ತಾನೆ. ಇನ್ನು ಈತ ಡ್ರಿಂಕ್ಸ್​​ ತೆಗೆದುಕೊಳ್ಳುವುದಿಲ್ಲ. ಹೆಣ್ಮಕ್ಕಳ ಸಹವಾಸ ಮಾಡುವುದಿಲ್ಲ. ಆದರೆ ತಪ್ಪದೆ ದಿನಕ್ಕೆ 111 ಮಾತ್ರೆಗಳನ್ನು ನುಂಗುತ್ತಾನೆ! ಈ ಕಟ್ಟುನಿಟ್ಟಿನ ಕಟ್ಟುಮಸ್ತಾದ ದೇಹ ಹೊಂದುವುದರ ಮಾಯಾ ಜಿಂಕೆಯ ಬೆನ್ನೇರಿ ನಾನು ಒಬ್ಬಂಟಿಯಾಗಿಬಿಟ್ಟಿದ್ದೇನೆ ಎಂದು ಹಲಬುತ್ತಾನೆ ಬ್ರಿಯಾನ್ ಜಾನ್ಸನ್.

ಜಾನ್ಸನ್ ಮತ್ತು ಅವರ ಪಾಲುದಾರರು ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸಲು ಆದ್ಯತೆ ನೀಡುತ್ತಾರೆ. ಏಕೆಂದರೆ ಅವರ ಸಂಪೂರ್ಣ ದಿನಚರಿಯು ರಾತ್ರಿಯ ನಿದ್ರೆಯ ಸುತ್ತ ಕೇಂದ್ರೀಕೃತವಾಗಿರುತ್ತದೆ. ಅವರ ವೇಕ್ ಈವೆಂಟ್‌ಗಳು ತುಂಬಾ ದುಬಾರಿಯಾಗಿವೆ. ಒಮ್ಮೆ ಅವರು ಎಚ್ಚರಗೊಂಡರೆ ಮತ್ತೆ ನಿದ್ರೆಗೆ ಜಾರುವುದು ತುಂಬಾನೇ ಕಷ್ಟ. ಆದ್ದರಿಂದ ನೀವು ಇನ್ನೊಬ್ಬ ವ್ಯಕ್ತಿಯ ಜೊತೆ ಸಮಯ ಕಳೆಯಬೇಕು ಅಂದುಕೊಂಡರೆ ಅದು ಅತ್ಯಂತ ಸವಾಲಿನ ಸಂಗತಿಯಾಗುತ್ತದೆ ಎಂದು ಅವರು ತಮ್ಮ ಸದ್ಯತದ ಸ್ಥಿತಿಯನ್ನು ತೋಡಿಕೊಂಡಿದ್ದಾರೆ. ನಾನು ಯಾವುದೇ ಸಾಂಸ್ಕೃತಿಕ ರೂಢಿಗಳಿಗೆ ವಿರುದ್ಧವಾಗಿದೆ. ಹೆಚ್ಚಿನ ಜನರು ಸ್ನೇಹಿತರೊಂದಿಗೆ ಹೊರಗೆ ಹೋಗಲು ಬಯಸುತ್ತಾರೆ, ಮತ್ತು ಅದರಿಂದ ತಮ್ಮ ಮಲಗುವ ಸಮಯ ದಿನಚರಿ ಹಾಳಾಗುತ್ತದೆ ಎನ್ನುತ್ತಾರೆ ಜಾನ್ಸನ್​.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:23 am, Tue, 26 September 23