Dairy Milk: 1990ರ ಡೈರಿಮಿಲ್ಕ್ ಚಾಕೊಲೇಟ್ ಜಾಹೀರಾತು ಹೊಸ ರೂಪದಲ್ಲಿ ಬಿಡುಗಡೆ! ಮನಸೋತ ನೆಟ್ಟಿಗರು

| Updated By: ganapathi bhat

Updated on: Sep 19, 2021 | 5:41 PM

Cadbury Dairy Milk: ಹಳೆಯ ಕ್ಯಾಡ್ಬರಿ ಡೈರಿಮಿಲ್ಕ್ ಜಾಹೀರಾತು ವಿಡಿಯೋ ಹೊಸ ರೂಪದಲ್ಲಿ ಜನರ ಮುಂದೆ ಬಂದಿದೆ. ಜಾಹೀರಾತಿನಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಲಾಗಿದೆ.

Dairy Milk: 1990ರ ಡೈರಿಮಿಲ್ಕ್ ಚಾಕೊಲೇಟ್ ಜಾಹೀರಾತು ಹೊಸ ರೂಪದಲ್ಲಿ ಬಿಡುಗಡೆ! ಮನಸೋತ ನೆಟ್ಟಿಗರು
Follow us on

ಕ್ಯಾಡ್ಬರಿ ಡೈರಿಮಿಲ್ಕ್ ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟ್ಟ ಮಕ್ಖಳಿಂದ ಹಿಡಿದು, ದೊಡ್ಡವರ ವರೆಗೂ ಡೈರಿಮಿಲ್ಕ್ ಅಂದ್ರೆ ಎಲ್ಲರಿಗೂ ಇಷ್ಟ. ಡೈರಿಮಿಲ್ಕ್ ಚಾಕೊಲೇಟ್ ಮಾತ್ರವಲ್ಲ ಅದರ ಜಾಹೀರಾತು ಕೂಡ ಸದಾ ನೆನಪಲ್ಲಿ ಉಳಿಯುವಂಥದ್ದು. ಮೆಲ್ಲಮೆಲ್ಲನೆ ಡೈರಿಮಿಲ್ಕ್ ಚಾಕೊಲೇಟ್ ಸವಿಯುತ್ತಾ ಸ್ವಾದಕ್ಕೆ ಮನಸೋಲುವ ಚಿತ್ರಣ ಎಲ್ಲರಿಗೂ ನೆನಪಲ್ಲಿ ಉಳಿಯುವಂಥದ್ದು. 1990 ರ ಡೈರಿಮಿಲ್ಕ್ ಜಾಹೀರಾತು ವಿಡಿಯೋ ನಿಮಗೆ ನೆನಪಿರಬಹುದು. ಅದರಲ್ಲಿ ಹುಡುಗಿಯೊಬ್ಬಳು ಕ್ರಿಕೆಟ್ ಪಂದ್ಯ ನೋಡುತ್ತಾ ಡೈರಿಮಿಲ್ಸ್ ತಿನ್ನುತ್ತಿರುತ್ತಾಳೆ. ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್​ಮನ್ ಸಿಕ್ಸರ್ ಬಾರಿಸಿ ಪಂದ್ಯ ಗೆಲ್ಲಿಸುತ್ತಾನೆ. ಆಗ ಆ ಹುಡುಗಿ ಚಾಕೊಲೇಟ್ ಕೈಯಲ್ಲಿ ಹಿಡಿದು ಡ್ಯಾನ್ಸ್ ಮಾಡುತ್ತಾ ಮೈದಾನದ ಒಳಗೆ ಬರುತ್ತಾಳೆ.

ಈ ಹಳೆಯ ಜಾಹೀರಾತನ್ನು ಉಲ್ಲೇಖಿಸಲು ಹೊಸತೊಂದು ಕಾರಣವಿದೆ. ಹಳೆಯ ಜಾಹೀರಾತು ವಿಡಿಯೋ ಹೊಸ ರೂಪದಲ್ಲಿ ಜನರ ಮುಂದೆ ಬಂದಿದೆ. ಜಾಹೀರಾತಿನಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಲಾಗಿದೆ. ಹಳೆಯ ವಿಡಿಯೋದಲ್ಲಿ ಹುಡುಗ ಬ್ಯಾಟಿಂಗ್ ಮಾಡುತ್ತಿರುತ್ತಾನೆ ಹಾಗೂ ಹುಡುಗಿ ಚಾಕೊಲೇಟ್ ತಿನ್ನುತ್ತಿರುತ್ತಾಳೆ. ಇದೀಗ ಬಿಡುಗಡೆ ಆಗಿರುವ ಜಾಹೀರಾತಿನಲ್ಲಿ ಹುಡುಗಿ ಬ್ಯಾಟಿಂಗ್ ಮಾಡುತ್ತಿರುತ್ತಾಳೆ ಮತ್ತು ಹುಡುಗ ಚಾಕೊಲೇಟ್ ಸವಿಯುತ್ತಾ ಕುಳಿತಿರುತ್ತಾನೆ.

ಹುಡುಗಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿದ ತಕ್ಷಣ ಹುಡುಗ ಕುಣಿಯುತ್ತಾ, ಗಾರ್ಡ್ ತಡೆದರೂ ಅದನ್ನು ನಿರ್ಲಕ್ಷಿಸಿ ಮೈದಾನದ ಒಳಗೆ ಬರುತ್ತಾನೆ. ಹುಡುಗನ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಈಗ ಮಹಿಳೆಯರ ಕ್ರಿಕೆಟ್ ತಂಡಗಳು ಕೂಡ ತಯಾರಾಗಿವೆ. ಮಹಿಳೆಯರು ತಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಪುರುಷರು ಅದನ್ನು ಪ್ರೋತ್ಸಾಹಿಸುವುದು ಕೂಡ ನಡೆಯುತ್ತಿದೆ. ಈ ಬದಲಾದ ಕಾಲಘಟ್ಟ ಹಾಗೂ ಸನ್ನಿವೇಶದಲ್ಲಿ ಹಳೆಯ ಜಾಹೀರಾತಿನ ಈ ಹೊಸ ರೂಪ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ಯಾಡ್ವರಿ ಡೈರಿಮಿಲ್ಕ್ ಹಳೆಯ ಮತ್ತು ಹೊಸ ಜಾಹೀರಾತು ಎರಡನ್ನೂ ಇಲ್ಲಿ ನೀಡಲಾಗಿದೆ..

ಜಾಹೀರಾತನ್ನು ಹಂಚಿಕೊಂಡ ಕ್ಯಾಡ್ಬರಿ, ಹುಡುಗಿಯರನ್ನು ಪ್ರೋತ್ಸಾಹಿಸಲು ಕ್ಯಾಡ್ಬರಿ ಡೈರಿಮಿಲ್ಕ್ ಜೊತೆಗೂಡಿ ಎಂದು ಹೇಳಿದೆ. ಯುವಸಮುದಾಯಕ್ಕೆ ಹಲವು ಹುಡುಗಿಯರು ಯಶಸ್ಸಿನ ಪಾಠವಾಗಿ ಮತ್ತು ಶಕ್ತಿಯುತ ಮಾದರಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಕ್ಯಾಡ್ಬರಿ ಬರೆದುಕೊಂಡಿದೆ.

ಈ ಹೊಸ ಜಾಹೀರಾತು ಕೂಡ 1990 ರಲ್ಲಿ ಬಿಡುಗಡೆಯಾದ ಜಾಹೀರಾತಿನ ರೂಪದಲ್ಲೇ ಇದ್ದರೂ ಸಣ್ಣ ಆದರೆ ಬಹಳ ಮುಖ್ಯ ಬದಲಾವಣೆ ಮಾಡಿಕೊಳ್ಳಲಾಗಿದೆ. ಹುಡುಗನ ಸ್ಥಾನದಲ್ಲಿ ಹುಡುಗಿ ಇದ್ದಾಳೆ. ಹಾಗೂ ಅದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲಾಗಿದೆ. ಈ ವಿಡಿಯೋ ಈಗ ಹಳೆಯ ನೆನಪುಗಳನ್ನು ಮತ್ತೆ ನೆನೆಯುವಂತೆ ಮಾಡಿದೆ. ಹಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಅಜ್ಜಿಯ ಅಭಿನಯಕ್ಕೆ ನೆಟ್ಟಿಗರೆಲ್ಲಾ ಫಿದಾ! ವಿಡಿಯೋ ವೈರಲ್

ಇದನ್ನೂ ಓದಿ: ಮೈಸೂರು: ರೆಡ್ ಬುಲ್ ಪಕ್ಷಿ ಮರಿಗಳಿಗೆ ಆಹಾರ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್​