Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ 18.90 ಲಕ್ಷಕ್ಕೆ ಹರಾಜಾಯ್ತು ಹೈದರಾಬಾದ್​ನ ಚಿನ್ನದ ಲೇಪಿತ ಬಾಲಾಪುರ ಗಣೇಶನ ಲಡ್ಡು

Viral News: ಮೊದಲಿಗೆ 1,116 ರೂಪಾಯಿಯಿಂದ ಹರಾಜು ಪ್ರಕ್ರಿಯೆ ಆರಂಭವಾಯಿತು. ಹರಾಜು ಪ್ರಕ್ರಿಯೆಯಲ್ಲಿ ನೂರಾರು ಭಕ್ತರು ಸೇರಿದ್ದು ಅಧಿಕ ಮೌಲ್ಯಕ್ಕೆ ಗಣೇಶನ ಫೇಮಸ್ ಲಡ್ಡು ಹರಾಜಾಗಿದೆ.

ಈ ವರ್ಷ 18.90 ಲಕ್ಷಕ್ಕೆ ಹರಾಜಾಯ್ತು ಹೈದರಾಬಾದ್​ನ ಚಿನ್ನದ ಲೇಪಿತ ಬಾಲಾಪುರ ಗಣೇಶನ ಲಡ್ಡು
Follow us
TV9 Web
| Updated By: shruti hegde

Updated on:Sep 20, 2021 | 11:42 AM

ಹೈದರಾಬಾದ್​ನಲ್ಲಿ ಫೇಮಸ್ ಆಗಿರುವ 21ಕೆಜಿಯ ಬಾಲಾಪುರ ಗಣೇಶನ ಲಡ್ಡು ಭಾನುವಾರ ಹರಾಜು ಪ್ರಕ್ರಿಯೆಯಲ್ಲಿ 18.90 ಲಕ್ಷಕ್ಕೆ ಮಾರಾಟಾಗಿದೆ. ಆಂಧ್ರ ಪ್ರದೇಶದ ಎಮ್​ಎಲ್​ಸಿ ರಮೇಶ್ ಯಾದವ್, ಲಡ್ಡುವನ್ನು ಖರೀದಿಸಿದ್ದಾರೆ. ಲಡ್ಡು ಸುಮಾರು 21 ಕೆಜಿಯಷ್ಟಿದ್ದು, ಚಿನ್ನ ಲೇಪಿತ ಫೇಮಲ್ ಲಡ್ಡುವಾಗಿದೆ.

ಮೊದಲಿಗೆ 1,116 ರೂಪಾಯಿಯಿಂದ ಹರಾಜು ಪ್ರಕ್ರಿಯೆ ಆರಂಭವಾಯಿತು. ಹರಾಜು ಪ್ರಕ್ರಿಯೆಯಲ್ಲಿ ನೂರಾರು ಭಕ್ತರು ಸೇರಿದ್ದು ಅಧಿಕ ಮೌಲ್ಯಕ್ಕೆ ಗಣೇಶನ ಫೇಮಸ್ ಲಡ್ಡು ಹರಾಜಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಈ ಲಡ್ಡುವನ್ನು ಉಡುಗೊರೆಯಾಗಿ ನೀಡುವುದಾಗಿ ರಮೇಶ್ ಯಾದವ್ ಹೇಳಿದ್ದಾರೆ.

2020ರಲ್ಲಿಕೊವಿಡ್ 19 ಸಾಂಕ್ರಾಮಿಕ ನಿರ್ಬಂಧಗಳಿಂದ ಹರಾಜು ಪ್ರಕ್ರಿಯೆ ನಡೆಸಲಿಲ್ಲ. ಅದರ ಬದಲಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ನೀಡಲಾಗಿತ್ತು. ಅದಕ್ಕೂ ಮೊದಲು 2019ರಲ್ಲಿ ಬಾಲಾಪುರ ನಿವಾಸಿ ಕೊಲಾನ್ ರೆಡ್ಡಿ ಎಂಬುವವರು ಹರಾಜನ್ನು ಗೆದ್ದಿದ್ದರು. ಆಗ ಲಡ್ಡು 17.60 ಲಕ್ಷಕ್ಕೆ ಮಾರಾಟವಾಗಿತ್ತು.

ಪ್ರತೀವರ್ಷ ಲಡ್ಡು ಹರಾಜಿನ ಬಳಿಕ ಗಣೇಶ ವಿಸರ್ಜನಾ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆಗೆ ಹಲವು ಭಾಗಗಳಿಂದ ಬಂದ ಭಕ್ತರು ಸೇರುತ್ತಾರೆ. ಪ್ರಾರಂಭದಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಬಾಲಾಪುರ ಗಣೇಶ ಉತ್ಸವ ಸಮಿತಿ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದೆ. 1994ರಲ್ಲಿ ಮೊದಲಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಲಡ್ಡು 450 ರೂಪಾಯಿಗೆ ಮಾರಾಟವಾಗಿತ್ತು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಪ್ರತೀ ವರ್ಷ ರಾಜಕಾರಣಿಗಳು, ಉದ್ಯಮಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಕುಟುಂಬ ಸ್ನೇಹತರೊಂದಿಗೆ ಲಡ್ಡುವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ.

ಇದನ್ನೂ ಓದಿ:

ತಿರುಪತಿ ಲಡ್ಡುಗಳಿಗೆ ಶತಮಾನಗಳ ಇತಿಹಾಸವಿದೆ, ಪ್ರಸಾದದ ರೂಪದಲ್ಲಿ ಸಿಗುವ ಲಡ್ಡು ದೇವಸ್ಥಾನದ ಅಡುಗೆ ಕೋಣೆಯಲ್ಲಿ ತಯಾರಾಗುತ್ತದೆ

Tirupati Laddu History: ತಿರುಪತಿ ಲಡ್ಡುವನ್ನು ಹೇಗೆ ತಯಾರು ಮಾಡುತ್ತಾರೆ? ಇತಿಹಾಸವೇನು? ಕುತೂಹಲಕಾರಿ ಸಂಗತಿ ಇಲ್ಲಿದೆ

(This year 2021 gold planet balapur ganesha Laddu Auction RS 18.90 Lakh)

Published On - 9:08 am, Mon, 20 September 21

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ