Kathak : ರೆಮಾ ಮತ್ತು ಸೆಲೆನಾ ಗೊಮೇಝ್ನ ಕಾಮ್ ಡೌನ್ (Calm Down) ಪ್ರಪಂಚದಾದ್ಯಂತ ಅನೇಕರ ಹೃದಯವನ್ನು ಕದ್ದಿದೆ. ಸಾಕಷ್ಟು ಜನರು ಸೃಜನಶೀಲವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೆಲವರು ಶಾಸ್ತ್ರೀಯ ನೃತ್ಯಪದ್ಧತಿಯನ್ನು ಅಳವಡಿಸಿ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ. ಈ ಹಿಂದೆ ನರ್ತಕಿಯೊಬ್ಬರು ಈ ಹಾಡಿಗೆ ಕಥಕ್ ನೃತ್ಯ ಅಳವಡಿಸಿ ಪ್ರಸ್ತುಪಡಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಇದೀಗ ಇದೇ ಹಾಡಿಗೆ ಕಥಕ್ನಲ್ಲಿ ನೃತ್ಯತಂಡವು ನೆಟ್ಟಿಗರ ಗಮನ ಸೆಳೆಯುತ್ತಿದೆ. ನೃತ್ಯಕಲಾವಿದ ಕುಮಾರ್ ಶರ್ಮಾ ಸಾರಥ್ಯದಲ್ಲಿ ಈ ತಂಡ ಆಕರ್ಷಕವಾಗಿ ಹೆಜ್ಜೆ ಹಾಕಿದೆ.
ಕಥಕ್ ಬೋಲ್ಗಳ ಹಿನ್ನೆಲೆಯಲ್ಲಿ ಈ ಹಾಡು ಕೇಳಬರುತ್ತದೆ. ತಬಲಾದಲ್ಲಿ ಜಯಂತ ಪಟ್ನಾಯಕ್ ಸಾಥ್ ನೀಡಿದ್ದಾರೆ. ಕುಮಾರ್ ಶರ್ಮಾ, ಅನ್ಮೋಲ್ ಸೂದ್, ರಾಹುಲ್ ಶರ್ಮಾ, ಯಾಷಿಕಾ ಚೂಮರ್, ಮೇಘನಾ ಠಾಕೂರ್, ಖುಷ್ಬೂ ಗುಪ್ತಾ, ಸ್ಮೃತಿ ಭಂಡಾರಿ, ಜಿದ್ನ್ಯಾಸಾ ಕುರ್ತಾಡ್ಕರ್, ನಂದಿನಿ ಸೋನಾವನೆ, ಏನಾಕ್ಷಿ, ಯೋಗೇಶ ಥಾಂಬ್ರೆ ಮತ್ತು ಹೃದಯ ಪರಶ್ ಇಲ್ಲಿ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ : Viral Video: ರಿಚ್ಚಿ ಸಿನೆಮಾದ ಅಂಕಿತಾ ಕುಂಡು ಹಾಡಿರುವ ‘ಮೊಗದಲ್ಲಿ’ ನಾಳೆ ಬಿಡುಗಡೆ
ಆ. 4ರಂದು ಈ ವಿಡಿಯೋ ಅನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ. ಈತನಕವೂ ಸುಮಾರು 22,000 ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಇದಕ್ಕಿವೆ. ಅದ್ಭುತವಾದ ನೃತ್ಯಸಂಯೋಜನೆ. ಇದನ್ನು ಈ ರೀತಿಯಾಗಿ ಪ್ರಸ್ತುತಪಡಿಸಬಹುದು ಎಂಬ ಆಲೋಚನೆಯೇ ಬಂದಿರಲಿಲ್ಲ ನೋಡಿ ಎಂದು ಒಬ್ಬರು ಹೇಳಿದ್ದಾರೆ. ಒಬ್ಬೊಬ್ಬರ ಮುಖಭಾವವು ಎಷ್ಟೊಂದು ತಾಜಾತನದಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ವೊರ್ಲಿ ಲಿಂಕ್ನಿಂದ ಗೇಟ್ವೇ ಆಫ್ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್
ಈ ಹಾಡಿಗೆ ಮಾಡಿದ ಎಷ್ಟೋ ರೀಲ್ಸ್ ನೋಡಿದ್ದೇನೆ ಆದರೆ ಇಷ್ಟೊಂದು ಲೀಲಾಜಾಲ ನರ್ತನ, ಪರಿಪೂರ್ಣತೆಯನ್ನು ಎಲ್ಲಿಯೂ ನೋಡಿರಲಿಲ್ಲ. ಬಹಳ ಚೆನ್ನಾಗಿ ಈ ಸಂಯೋಜನೆ ಮಾಡಿದ್ದೀರಿ. ಎಲ್ಲ ಕಲಾವಿದರೂ ಅತ್ಯಂತ ಶ್ರದ್ಧೆಯಿಂದ ಇದನ್ನು ನಿರ್ವಹಿಸಿದ್ದಾರೆ ಎಂದಿದ್ದಾರೆ ಮಗದೊಬ್ಬರು. ಇದು ನನ್ನ ಕಣ್ಣಿಗೆ ಕಿವಿಗೆ ಹಬ್ಬದಂತೆ ಭಾಸವಾಗಿದೆ. ನೀವು ಮತ್ತಷ್ಟು ಇಂಥ ಫ್ಯೂಷನ್ ಮಾಡಿ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:32 am, Tue, 8 August 23