viral video: ಕಥಕ್​ನಲ್ಲಿ ‘ಬೇಬಿ ಕಾಮ್​ ಡೌನ್’; ಇಂಥ ಪ್ರಯೋಗಗಳು ನಡೆಯಲಿ ಎನ್ನುತ್ತಿರುವ ನೆಟ್ಟಿಗರು

|

Updated on: Jul 04, 2023 | 1:06 PM

Calm Down : ನೈಜೀರಿಯನ್​ ಗಾಯಕರು ಹಾಡಿದ ಈ ಹಾಡಿಗೆ ಭಾರತೀಯ ನೃತ್ಯಪ್ರಕಾರವನ್ನು ಅಳವಡಿಸಿ ಪ್ರದರ್ಶಿಸಬಹುದು ಎಂಬ ವಿಚಾರವೇ ಹೊಳೆದಿರಲಿಲ್ಲ, ಇದು ಅದ್ಭುತ! ಎಂದು ಕೊಂಡಾಡುತ್ತಿದ್ದಾರೆ ನೆಟ್ಟಿಗರು. ನೀವೇನು ಹೇಳುತ್ತೀರಿ?

viral video: ಕಥಕ್​ನಲ್ಲಿ ಬೇಬಿ ಕಾಮ್​ ಡೌನ್; ಇಂಥ ಪ್ರಯೋಗಗಳು ನಡೆಯಲಿ ಎನ್ನುತ್ತಿರುವ ನೆಟ್ಟಿಗರು
ಕಾಮ್​ ಡೌನ್ ಹಾಡಿಗೆ ಕಥಕ್ ನೃತ್ಯ.
Follow us on

Calm Down: ನೈಜೀರಿಯಾದ ಕಲಾವಿದ ರೆಮಾ (Rema) ಕಳೆದ ವರ್ಷ ಬಿಡುಗಡೆ ಮಾಡಿದ ಆಲ್ಬಮ್​ ರೇವ್​ ಆ್ಯಂಡ್​ ರೋಸಸ್​ (Rave and Roses) ಈ ಹಾಡನ್ನು ಕೇಳಿದರೆ ಸಾಕು, ಕೂಸುಗಳಿಂದ ಹಿಡಿದು ಮುಪ್ಪಾನುಮುದಕರವರೆಗೂ ಇದರ ಲಯಕ್ಕೆ ಸ್ಪಂದಿಸತೊಡಗುತ್ತಾರೆ. ಇದೊಂದು ಬೀಟ್​ ಓರಿಯೆಂಟೆಡ್​ ಟ್ಯೂನ್. ಮನಸ್ಸಿನಿಂದ ಮನಸ್ಸು ತಲುಪುವ ಕಲೆ ಅಥವಾ ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎನ್ನುವುದಕ್ಕೆ ಈ ಹಾಡು ಒಂದು ಉದಾಹರಣೆ ಎನ್ನಬಹುದು. ಜಗತ್ತಿನಾದ್ಯಂತ ಅನೇಕರು ತಮ್ಮದೇ ಆದ ಕಲ್ಪನಾ ಶಕ್ತಿಯಲ್ಲಿ ಅಥವಾ ಆಯಾ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ಯುವತಿಯರು ಕಥಕ್​ನಲ್ಲಿ (Kathak) ‘ಕಾಮ್​ ಡೌನ್​’ ಪ್ರಸ್ತುತಪಡಿಸಿದ್ದಾರೆ.

ಈ ವಿಡಿಯೋ ಅನ್ನು ಸೈಲಿ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಈ ಪಾಶ್ಚಾತ್ಯ ಸಂಗೀತದ ಹಾಡನ್ನು ಹೀಗೆ ಕಥಕ್​ ಶೈಲಿಯಲ್ಲಿ ಅಳವಡಿಸಬಹುದು ಎನ್ನು ಕಲ್ಪನೆಯೇ ಇರಲಿಲ್ಲ ನೋಡಿ. ಬಹಳ ಸುಂದರವಾಗಿ ಸಂಯೋಜಿಸಿದ್ದಾರೆ ಹಾಗೇ ಪ್ರದರ್ಶನವೂ ಚೆನ್ನಾಗಿದೆ ಎಂದಿದ್ದಾರೆ ಅನೇಕರು. ಈ ವಿಡಿಯೋ ಅನ್ನು ವರ್ಣಿಸಲು ಪದಗಳೇ ಇಲ್ಲ ಎಂದು ಕೆಲವರು ಪ್ರಶಂಸಿಸಿದ್ದಾರೆ. ಈ ಹಾಡಿನ ಮೂಲ ವಿಡಿಯೋ ಈ ಕೆಳಗಿದೆ ನೋಡಿ.

ಈಗಾಗಲೇ ಸುಮಾರು 9 ಲಕ್ಷ ಜನರು ಕಥಕ್​ ಶೈಲಿಯಲ್ಲಿ ಪ್ರಸ್ತುಪಡಿಸಿದ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಅತ್ಯಂತ ಬುದ್ಧಿವಂತಿಕೆಯಿಂದ ಇದನ್ನು ನಿರ್ವಹಿಸಿದ್ದೀರಿ. ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ನೃತ್ಯಪ್ರಕಾರದಲ್ಲಿ ಈ ಹೊಸ ಪರಿಮಳವನ್ನು ಒಗ್ಗಿಸಿದ್ದು ಬಹಳ ಅದ್ಭುತವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇಂಥ ಪ್ರಯೋಗಗಳು ಆಗಾಗ ನಡೆಯುತ್ತಿರಬೇಕು. ಈ ಎಲ್ಲ ಪ್ರಯೋಗಗಳಿಗೂ ಸಾಮಾಜಿಕ ಜಾಲತಾಣಗಳು ಅತ್ಯುತ್ತಮ ವೇದಿಕೆಯಾಗಿವೆ ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

 

Published On - 12:58 pm, Tue, 4 July 23