ಕರ್ಮ ರಿಟರ್ನ್ಸ್​: ಬಾಲವನ್ನು ಎಳೆಯಲು ಹೋದವನನ್ನು ಒದ್ದು ಬೀಳಿಸಿದ ಒಂಟೆ; ವಿಡಿಯೋ ವೈರಲ್​​

ವ್ಯಕ್ತಿಯೊಬ್ಬ ಒಂಟೆ(camel)ಯ ಬಾಲವನ್ನು ಹಿಡಿದೆಳೆಯಲು ಯತ್ನಿಸಿದಾಗ ಒಂಟೆ ಆತನನ್ನು ಒದ್ದು ಕೆಡಗಿದ ವಿಡಿಯೋ ವೈರಲ್​ ಆಗಿದೆ.

ಕರ್ಮ ರಿಟರ್ನ್ಸ್​: ಬಾಲವನ್ನು ಎಳೆಯಲು ಹೋದವನನ್ನು ಒದ್ದು ಬೀಳಿಸಿದ ಒಂಟೆ; ವಿಡಿಯೋ ವೈರಲ್​​
ಒದೆಯುತ್ತಿರುವ ಒಂಟೆ
Edited By:

Updated on: Jan 15, 2022 | 2:59 PM

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ವೈರಲ್​ (Viral) ಆಗುತ್ತಲೇ ಇರುತ್ತವೆ. ಇದೀಗ ಕರ್ಮ ಎಲ್ಲವನ್ನೂ ವಾಪಸ್​ ನೀಡುತ್ತದೆ ಎನ್ನುವ ಕ್ಯಾಪ್ಷನ್​ ನೀಡುವ ಮೂಲಕ ಐಎಫ್ಎಸ್​ ಅಧಿಕಾರಿಯೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಒಂಟೆ(camel)ಯ ಬಾಲವನ್ನು ಹಿಡಿದೆಳೆಯಲು ಯತ್ನಿಸಿದಾಗ ಒಂಟೆ ಆತನನ್ನು ಒದ್ದು ಕೆಡಗಿದ ವಿಡಿಯೋ ವೈರಲ್​ ಆಗಿದೆ. ಭಾರತೀಯ ಅರಣ್ಯ ಇಲಾಖೆ ಅಧಿಕಾರಿ(IFS) ಸುಸಾಂತ್​ ನಂದಾ ಈ ವಿಡಿಯೋವನ್ನು ಹಂಚಿಕೊಂಡು ಕರ್ಮ ಎನ್ನುವ ಕ್ಯಾಪ್ಷನ್​ ನೀಡಿದ್ದಾರೆ. ಸಾಮಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಒಂಟೆಯೊಂದು  ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ಈ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಒಂಟೆಯ ಬಾಲವನ್ನು ಹಿಡಿದು ಎಳೆಯಲು ಕೈ ಹಾಕುತ್ತಾನೆ. ಆಗ ಒಂಟೆ ಒಂದೇ ಸಲಕ್ಕೆ ಆತನನ್ನು ತನ್ನ ಹಿಂದಿನ ಕಾಲಿನಲ್ಲಿ ಒದ್ದಿದೆ. ಒಂಟೆ ಬಲವಾಗಿ ಒದ್ದ ಪರಿಣಾಮ  ವ್ಯಕ್ತಿ ಕಾಲು ಜಾರಿ ಬಿದ್ದಿದ್ದಾನೆ. ವಿಡಿಯೋ ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ವಿಡಿಯೋ ಹಂಚಿಕೊಂಡಾಗಿನಿಂದ  70 ಸಾವಿರಕ್ಕೂ ಹೆಚ್ಚು ವೀಕ್ಷಣೆ ಹಾಗೂ 5 ಸಾವಿರ ಲೈಕ್ಸ್​ ಪಡೆದಿದೆ. ಅಲ್ಲದೆ 600 ಕ್ಕೂ ಹೆಚ್ಚು ರೀ ಟ್ವೀಟ್​ಗಳನ್ನು ಮಾಡಲಾಗಿದೆ.

ಇದನ್ನೂ ಓದಿ:

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ