ಟ್ರೈನ್ ಚಕ್ರಗಳಿ​ಗೆ ರಬ್ಬರ್ ಟೈರ್ ಹಾಕಿದರೆ ಅದು ಸರಾಗವಾಗಿ ಚಲಿಸುತ್ತದಾ? ಈ ವೈರಲ್ ವೀಡಿಯೊ ನೋಡಿ

|

Updated on: Nov 24, 2023 | 6:06 PM

ರೈಲ್ವೆಯು ಅಂತಹ ಗಾಲಿ ಚಕ್ರಗಳಿಗೆ ರಬ್ಬರ್ ಟೈರ್‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ರೀತಿಯ ರೈಲನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

ಟ್ರೈನ್ ಚಕ್ರಗಳಿ​ಗೆ ರಬ್ಬರ್ ಟೈರ್ ಹಾಕಿದರೆ ಅದು ಸರಾಗವಾಗಿ ಚಲಿಸುತ್ತದಾ? ಈ ವೈರಲ್ ವೀಡಿಯೊ ನೋಡಿ
ಟ್ರೈನ್ ಚಕ್ರಗಳಿ​ಗೆ ರಬ್ಬರ್ ಟೈರ್ ಹಾಕಿದರೆ ಅದು ಓಡುತ್ತಾ?
Follow us on

ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಅನೇಕಾನೇಕ ನವನವೀನ ಆವಿಷ್ಕಾರಗಳನ್ನು ಸೃಷ್ಟಿಸಿದ್ದಾನೆ. ತಂತ್ರಜ್ಞಾನದ ಸಹಾಯದಿಂದ ಅನೇಕ ಹೊಸ ವಿಷಯಗಳನ್ನು ಕಂಡುಹಿಡಿಯಲಾಗಿದೆ. ನೂರಾರು ವರ್ಷಗಳ ಹಿಂದೆ, ಮರದ ಚಕ್ರಗಳಿಂದ ಮಾಡಿದ ವಾಹನಗಳನ್ನು ಬಳಸಿ ಮಾನವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಆದರೆ ಕ್ರಮೇಣ ಜನರು ಕಬ್ಬಿಣ ಮತ್ತು ರಬ್ಬರ್‌ನಿಂದ ಮಾಡಿದ ಚಕ್ರಗಳನ್ನು ( Rubber Tyre) ಬಳಸಲು ಆರಂಭಿಸಿದರು.

ಅಂತೆಯೇ, ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವೆಗವಾಗಿ ಚಲಿಸಲು ರೈಲುಗಳನ್ನು (Train) ಕಂಡುಕೊಂಡರು. ಆರಂಭದಲ್ಲಿ ರೈಲು ಉಗಿ ಎಂಜಿನ್‌ನಲ್ಲಿ ಓಡುತ್ತಿತ್ತು. ಆದರೆ, ಈಗ ಅದು ವಿದ್ಯುತ್‌ನಿಂದ ಚಲಿಸುತ್ತದೆ. ಆದರೆ ಅದರ ಗಾಲಿಗಳು ಮಾತ್ರ ಕಬ್ಬಿಣದ್ದೇ ಆಗಿದೆ. ಈಗ ಮನುಷ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ರೈಲ್ವೆಯು ಅಂತಹ ಗಾಲಿ ಚಕ್ರಗಳಿಗೆ ರಬ್ಬರ್ ಟೈರ್‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ.

ಇದನ್ನು ಓದಿ: ತಂತ್ರಜ್ಞಾನದ ಈ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ! ಸೈಕಲ್​ ಚಕ್ರಗಳು ಗುಂಡಗೆ ಅಲ್ಲ-ಚೌಕಾಕಾರದ ಚಕ್ರಗಳ ಮೇಲೂ ಸೈಕಲ್ ಚಲಿಸುತ್ತದೆ, ವಿಡಿಯೋ ನೋಡಿ

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ ರೈಲಿಗೆ ರಬ್ಬರ್ ಟೈರ್‌ಗಳನ್ನು ಹೊಂದಿಸಲಾಗಿದೆ. ಈ ರೀತಿಯ ರೈಲನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಮೊದಲ ಸಲ ಈ ರೀತಿಯ ರೈಲನ್ನು ನೋಡಿ ನಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಬ್ಬರ್ ಟೈರ್ ಹೊಂದಿಸಿರುವ ರೈಲುಗಳಿಗೆ ವಿಶೇಷ ಟ್ರ್ಯಾಕ್‌ಗಳನ್ನು ಸ್ಥಾಪಿಸಲಾಯಿತು

ಮಾಧ್ಯಮಗಳ ಪ್ರಕಾರ ರಬ್ಬರ್ ಟೈರ್ ಇರುವ ಈ ರೈಲು ಎಲ್ಲಿಂದ ಬಂತು? ಅನ್ನೋದು ತಿಳಿದಿಲ್ಲ. ಆದರೆ, ಅದು ಯಾವುದೋ ದೇಶದ ರೈಲು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ರಬ್ಬರ್ ಟೈರ್‌ಗಳೊಂದಿಗೆ ರೈಲುಗಳು ಎಲ್ಲಿ ಓಡುತ್ತವೆ? ಈ ವೀಡಿಯೊವನ್ನು ಇಂಡಿಯಾ ಟ್ರಾವೆಲ್ಸ್ ಹೆಸರಿನ ಫೇಸ್‌ಬುಕ್ ಪುಟ ಹಂಚಿಕೊಂಡಿದೆ. ಇದರಲ್ಲಿ ವ್ಯಕ್ತಿಯೊಬ್ಬ ರಬ್ಬರ್ ಟೈರ್ ಇರುವ ರೈಲಿನ ಬಗ್ಗೆ ಮಾತನಾಡಿದ್ದಾನೆ. ವಿಶೇಷ ರೀತಿಯ ಲೋಹದ ಹಳಿಯಲ್ಲಿ ಈ ರೈಲು ಚಲಿಸುತ್ತದೆ ಎಂದೂ ವಿವರಿಸಿದ್ದಾರೆ. ನಾವು ಸಾಮಾನ್ಯ ರೈಲಿನಲ್ಲಿ ನೋಡದಂತಹ, ಟ್ರಕ್ ಮಾದರಿಯ ಬೃಹತ್​ ಟೈರ್ ಗಳನ್ನು ಈ ರೈಲಿನಲ್ಲಿ ಅಳವಡಿಸಲಾಗಿದ್ದು, ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ನೆಟಿಜನ್‌ಗಳು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಲ್ಲದೇ ಸುಮಾರು ಹತ್ತು ಸಾವಿರ ಮಂದಿ ಈ ರೈಲನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಲೈಕ್ ಮಾಡಿದ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಲವರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ರೈಲಿನಲ್ಲಿ ಕುಳಿತರೆ ಸದ್ದು ಮಾಡದೆ, ಕಾರಿನಲ್ಲಿ ಕುಳಿತಂತೆ ಭಾಸವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಲೊಕೊ ಪೈಲಟ್ ರೈಲನ್ನು ರಸ್ತೆಯಲ್ಲಿ ಓಡಿಸಬಹುದೇ..? ಎಂದು ತಮಾಷೆಯ ಎಮೋಜಿಯೊಂದಿಗೆ ಬರೆದಿದ್ದಾರೆ. ಅನೇಕ ಬಳಕೆದಾರರು ನಿಜಕ್ಕೂ ಈ ರೈಲು ಅದ್ಭುತ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ