ಮೆದುಳಿಗೆ ಕೆಲಸ ನೀಡುವ ಒಗಟಿನ ಆಟಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ಒಗಟಿನ ಆಟಗಳು ಆಟಗಳು ಮನರಂಜನೆಯನ್ನು ನೀಡುವುದರ ಜೊತೆಗೆ ಮೆದುಳನ್ನು ಚುರುಕುಗೊಳಿಸಲು ಇರುವ ಒಂದು ಮೋಜಿನ ವ್ಯಾಯಾಮ ಮಾರ್ಗವಾಗಿದೆ. ಹೆಚ್ಚಿನ ಜನರು ಈ ಕುತೂಹಲಕಾರಿ ಆಟವನ್ನು ಆಡಲು ಇಷ್ಟಪಡುತ್ತಾರೆ. ಬಿಡುವಿಲ್ಲದ ಕೆಲಸದ ನಡುವೆ ತ್ವರಿತ ಬಿಡುವು ಪಡೆದುಕೊಂಡು ಮನಸ್ಸನ್ನು ರಿಫ್ರೇಶ್ ಮಾಡಬೇಕೆಂದು ಬಯಸುತ್ತೀರಾ? ಹಾಗಾದರೆ ಈ ಸವಾಲಿನ ಆಟವನ್ನು ಭೇದಿಸಿ. ಫೇಸ್ಬುಕ್ನಲ್ಲಿ ವೈರಲ್ ಆಗಿರುವ ಈ ಒಗಟಿನ ಆಟವು ಡ್ರ್ಯಾಗನ್ ಗಳ ಮಧ್ಯೆ ಇರುವ ಮೂರು ಮೊಸಳೆಗಳನ್ನು ಹುಡುಕಲು ಸವಾಲು ಹಾಕುತ್ತದೆ.
ಈ ಒಗಟಿನ ಆಟದ ಚಿತ್ರವನ್ನು ಹಂಗೇರಿಯ ಗ್ರಾಫಿಕ್ಸ್ ಕಲಾವಿದ ಗೆರ್ಗೆಲಿ ಡುಡಾಸ್ (@Gergely dudas) ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಡ್ರ್ಯಾಗನ್ ಗಳ ಮಧ್ಯೆ ಇರುವ ಮೂರು ಮೊಸಳೆಗಳನ್ನು ಹುಡುಕಬಹುದೇ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ ವೈರಲ್ ಆಗಿರುವ ಈ ಒಗಟಿನ ಚಿತ್ರದಲ್ಲಿ ನೀವು ಡ್ರ್ಯಾಗನ್ ಗಳ ಗುಂಪನ್ನು ನೋಡಬಹುದು. ಜೊತೆಗೆ ಮೂರು ಮೊಸಳೆಗಳು ಅವುಗಳ ನಡುವೆ ಅವಿತು ಕುಳಿತಿದೆ. ಮೊಸಳೆಗಳು ಹಾಗೂ ಡ್ರ್ಯಾಗನ್ಗಳ ಬಣ್ಣ ಒಂದೇ ಆಗಿರುವುದರಿಂದ ಅವುಗಳನ್ನು ಕಂಡುಹಿಡಿಯುವುದು ಸಾಕಷ್ಟು ಸವಾಲಿನದ್ದಾಗಿದೆ.
ಇದನ್ನೂ ಓದಿ: Viral Brain Teaser: ಮರದ ದಿಮ್ಮಿಗಳ ರಾಶಿಯ ನಡುವೆ ಅಡಗಿರುವ ಬೆಕ್ಕನ್ನು ನೀವು ಗುರುತಿಸಬಲ್ಲಿರಾ?
ಜೂನ್ 6ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾದ ಒಗಟಿನ ಆಟವು ಲೈಕ್ಸ್ ಮತ್ತು ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಾನು ಎರಡು ಮೊಸಳೆಗಳನ್ನು ಕಂಡುಹಿಡಿದೆ. ಆದರೆ ಮೂರನೆಯದು ನಿಜವಾಗಿಯೂ ಮೊಸಳೆಯೇ ಎನ್ನುವುದು ನನಗೆ ಖಚಿತವಾಗಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಮೂರು ಮೊಸಳೆಗಳನ್ನು ಕಂಡುಹಿಡಿದೆ. ಈ ಒಗಟನ್ನು ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಸವಾಲು ಸ್ವಲ್ಪ ಕಷ್ಟಕರವಾಗಿತ್ತು, ಆದರೂ ಕೊನೆಯಲ್ಲಿ ಸರಿಯಾದ ಉತ್ತರವನ್ನು ಕಂಡುಕೊಂಡೆ’ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ