ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಫೋಟೋಗಳು, ವಿಡಿಯೋಗಳು ಹರಿದಾಡುತ್ತಲೇ ಇರ್ತವೆ. ಅದರಲ್ಲಿಯೂ ಈ ಪ್ರಾಣಿಗಳ ತುಂಟಾಟದ ವಿಡಿಯೋಗಳು ಜನರ ಮನ ಗೆಲ್ಲುವುದು ಹೆಚ್ಚು. ತಮಾಷೆಯ ವಿಡಿಯೋಗಳು ಒಂದು ಕಡೆ ಆದ್ರೆ, ಸವಾಲೊಡ್ಡುವ ಚಾಲೆಂಜ್ಗಳೂ ಸಹ ನೆಟ್ಟಿಗರಿಗೆ ಕ್ರೇಸ್ ಉಂಟು ಮಾಡುತ್ತವೆ. ಅಂಥಹದ್ದೇ ಒಂದು ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಹಿಮ ಚಿರತೆಯೊಂದಿದೆ. ಆದರೆ ಎಲ್ಲಿದೆ? ಎಂಬುದನ್ನು ಹುಡುಕುವುದೇ ದೊಡ್ಡ ಸವಾಲಿನ ಕೆಲಸ. ನಿಮ್ಮ ಕಣ್ಣಿಗೆ ಸವಾಲೊಡ್ಡುವ ಈ ಪ್ರಶ್ನೆಗೆ ಉತ್ತರ ಹುಡುಕುವಿರಾ?
ಸಾಮಾನ್ಯವಾಗಿ ಒಗಟುಗಳನ್ನು ಬಿಡಿಸಿ ಆಟವನ್ನು ಆಡುತ್ತಲೇ ಇರುತ್ತೇವೆ. ಅದು ನಿಮ್ಮ ಬುದ್ಧಿ ಶಕ್ತಿಗೆ ಸವಾಲುವೊಡ್ಡಿದರೆ, ಇಂತಹ ಚಿತ್ರಪಟಗಳಲ್ಲಿ ಕಾಣದೇ ಇರುವುದನ್ನು ಹುಡುಕುವುದು ನಿಮ್ಮ ಕಣ್ಣಿಗೆ ಸವಾಲೊಡ್ಡುತ್ತವೆ. ಸವಾಲು ಅಂದಾಕ್ಷಣ ಸುಮ್ಮನಿರೋಕಾಗತ್ಯೇ? ಹುಡುಕಿಯೇ ಹುಡುಕ್ತೇನೆ.. ಎಂದು ಚಾಲೆಂಜ್ಆಗಿ ಸ್ವೀಕರಿಸಿದವರೂ ಇದ್ದಾರೆ. ಕೆಲವರು ಹಿಮ ಚಿರತೆಯನ್ನು ಹುಡುಕಲು ಯಶಸ್ವಿಯಾದ್ರೆ ಇನ್ನು ಕೆಲವರು ಡೊಡ್ಡ ಬಂಡೆಗಳನ್ನು ಗುರುತಿಸಿ ಹಿಮ ಚಿರತೆ ಇದೆ.. ಎಂದು ತಪ್ಪಾಗಿ ಹೇಳಿದವರೂ ಇದ್ದಾರೆ. ನೀವು ಚಿರತೆಯನ್ನು ಹುಡುಕ ಬಲ್ಲಿರಾ?
Phantom cat….!They are called ghost of the mountains.
If you can locate. @ryancragun pic.twitter.com/sG5nMyqM0S— Ramesh Pandey (@rameshpandeyifs) July 13, 2021
ಡೊಡ್ಡದಾದ ಬಂಡೆಗಳ ಪರ್ವತ. ಈ ಮಧ್ಯೆ ಅಲ್ಲೆಲ್ಲೋ ಹಿಮ ಚಿರತೆ ಅಡಗಿ ಕುಳಿತಿದೆ. ಆದರೆ ಚಿರತೆ ಇರುವುದಂತೂ ಸತ್ಯ. ಆದರೆ ಎಲ್ಲಿದೆ? ಇದೇ ಸವಾಲು. ಕಷ್ಟವನ್ನು ಇಷ್ಪಟ್ಟು ಮಾಡಲು ಮುಂದಾದ ಜನರಲ್ಲಿ ಕೆಲವರು ಸೋತಿದ್ದಾರೆ. ಇನ್ನು ಕೆಲವರು ಗೆದ್ದಿದ್ದಾರೆ. ನಿಮಗೆ ಸವಾಲಾದರೆ ನೀವು ಸೋಲುತ್ತೀರೋ? ಗೆಲ್ಲುತ್ತೀರೋ?
ನೆಟ್ಟಿಗರಂತೂ ಚಿತ್ರವನ್ನು ಉಲ್ಟಾ-ಪಲ್ಟಾ ತಿರುಗಿಸಿಯೆಲ್ಲಾ ನೋಡಿದ್ದಾಗಿದೆ. ಕೆಲವರು ಚಿರತೆಯನ್ನು ಕಂಡು ಹಿಡಿದೇ ಬಿಟ್ರು! ಇನ್ನು ಕೆಲವರು ಹರಸಾಹಸ ಪಡುತ್ತಿದ್ದಾರೆ. ಈ ಪ್ರಾಣಿಯನ್ನು ಪ್ಯಾಂಟಮ್ ಕ್ಯಾಟ್ ಎಂದೂ ಕರೆಯುತ್ತಾರೆ. ಟ್ವಿಟರ್ನಲ್ಲಿ ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆ ಅವರು ಹಂಚಿಕೊಂಡ ಫೋಟೋ ಇದೀಗ ಫುಲ್ ವೈರಲ್ ಆಗಿದೆ.
Correct me if I am wrong. pic.twitter.com/VE3927mPTZ
— Deepika (@Deepika_3099) July 14, 2021
ಇದನ್ನೂ ಓದಿ:
Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್ ಏನಾಯ್ತು?
Viral Photo: ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ? ಅವು ಎಲ್ಲಿವೆ? ಎಂದು ಗುರುತಿಸುವುದೇ ನಿಮ್ಮ ಸವಾಲು
Published On - 2:22 pm, Thu, 15 July 21