Viral Video: ಚಿನ್ನದ ಬಣ್ಣದ ಕನ್ನಡಕ ಧರಿಸಿ ಕಂಪ್ಯೂಟರ್ ಮುಂದೆ ಕುಳಿತ ಬೆಕ್ಕು; ವಿಡಿಯೋ ನೋಡಿ

| Updated By: ganapathi bhat

Updated on: Oct 08, 2021 | 9:54 PM

ಬೆಕ್ಕಿಗಾಗಿಯೇ ಸಣ್ಣ ಕನ್ನಡಕ ಮಾಡಲಾಗಿದೆ. ಅದನ್ನು ಧರಿಸಿ ಅದು ಅಚ್ಚುಕಟ್ಟಾಗಿ ಕುಳಿತುಕೊಂಡಿದೆ. ಮತ್ತೊಮ್ಮೆ ಬೆಕ್ಕು ಹಾಗೇ ಕುಳಿತು ಕಂಪ್ಯೂಟರ್ ದಿಟ್ಟಿಸುತ್ತಿರುವುದು ಕಾಣುತ್ತದೆ. ವೈರಲ್ ವಿಡಿಯೋ ನೋಡಿ.

Viral Video: ಚಿನ್ನದ ಬಣ್ಣದ ಕನ್ನಡಕ ಧರಿಸಿ ಕಂಪ್ಯೂಟರ್ ಮುಂದೆ ಕುಳಿತ ಬೆಕ್ಕು; ವಿಡಿಯೋ ನೋಡಿ
ಕಂಪ್ಯೂಟರ್ ಮುಂದೆ ಕುಳಿತ ಬೆಕ್ಕು
Follow us on

ಸಾಕುಪ್ರಾಣಿಗಳ ಬಗ್ಗೆ ಒಲವು ಹೊಂದಿರುವವರು ಅನೇಕ ಮಂದಿ. ಬೆಕ್ಕು, ನಾಯಿ ಎಂದರೆ ಪಂಚಪ್ರಾಣ ಎಂದು ಹೇಳುವವರು ನಮ್ಮ ನಡುವೆ ಬಹಳಷ್ಟು ಜನರು ಸಿಗಬಹುದು. ಬೆಕ್ಕು, ನಾಯಿಯನ್ನು ಅಸಡ್ಡೆಯಿಂದ ಕಾಣುವ ಸಮಯ ಇದಲ್ಲ. ಅಥವಾ ಅದನ್ನು ಪ್ರಾಣಿ ಎಂದು ಕಡೆಗಣಿಸುವುದು ಕೂಡ ಈಗ ಇಲ್ಲ. ಈಗ ನಾಯಿ, ಬೆಕ್ಕಿಗೂ ಮನುಷ್ಯರಂತೆಯೇ ಮನೆಗಳಲ್ಲಿ ಅನುಕೂಲ ಮಾಡಿಕೊಡುವುದು ಇದೆ. ಮಲಗಲು ಹಾಸಿಗೆ, ತಿನ್ನಲು ಬಗೆಬಗೆಯ ತಿಂಡಿಗಳು ಹೀಗೆ. ಅಷ್ಟೇ ಏಕೆ ಸಾಕುಪ್ರಾಣಿಗಳಿಗಾಗಿಯೇ ಸಾಮಾಜಿಕ ಜಾಲತಾಣದ ಖಾತೆಗಳೂ ತೆರೆದಾಗಿರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ನಾಯಿ, ಬೆಕ್ಕುಗಳ ಜೊತೆಗಿನ ವಿಡಿಯೋ, ಫೋಟೊ ಹಂಚಿಕೊಳ್ಳುವುದು ಕೂಡ ಇರುತ್ತದೆ. ಇಲ್ಲಿ ಅಂತಹುದೇ ಒಂದು ಸಾಕುಪ್ರಾಣಿಯ ವಿಶೇಷ ಘಟನೆಯೊಂದನ್ನು ಹೇಳಿದ್ದೇವೆ. ಈ ವಿಡಿಯೋದಲ್ಲಿ ಬೆಕ್ಕೊಂದು ಕಂಪ್ಯೂಟರ್ ಮುಂದೆ ಕುಳಿತು, ಕನ್ನಡಕ ಧರಿಸಿ ಹಾಯಾಗಿ ಪೋಸ್ ಕೊಟ್ಟಿದೆ. ತುಂಬಾ ಕಲಿತ, ವಿದ್ಯಾವಂತ ಬೆಕ್ಕಿನಂತೆ ಥಟ್ಟನೆ ಗೋಚರಿಸುತ್ತದೆ! ಈ ವಿಡಿಯೋ ನೋಡಿ ನಿಮ್ಮ ಮುಖದಲ್ಲಿ ನಗು ಮಿಂಚದೇ ಇರಬಹುದೇ?

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಬೆಕ್ಕು ಕಂಪ್ಯೂಟರ್ ಮುಂದೆ ಕಷ್ಟಪಟ್ಟು ಕೆಲಸ ಮಾಡುತ್ತಿರುವ ವಿಡಿಯೋ ಹಾಗೂ ಎರಡು ಫೋಟೊಗಳನ್ನು ಇಲ್ಲಿ ಹಂಚಲಾಗಿದೆ. ವಿಡಿಯೋದಲ್ಲಿ ಬೆಕ್ಕು ಯಾರದೋ ತೊಡೆಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಬೆಕ್ಕಿಗಾಗಿಯೇ ಸಣ್ಣ ಕನ್ನಡಕ ಮಾಡಲಾಗಿದೆ. ಅದನ್ನು ಧರಿಸಿ ಅದು ಅಚ್ಚುಕಟ್ಟಾಗಿ ಕುಳಿತುಕೊಂಡಿದೆ. ಮತ್ತೊಮ್ಮೆ ಬೆಕ್ಕು ಹಾಗೇ ಕುಳಿತು ಕಂಪ್ಯೂಟರ್ ದಿಟ್ಟಿಸುತ್ತಿರುವುದು ಕಾಣುತ್ತದೆ. ವೈರಲ್ ವಿಡಿಯೋ ನೋಡಿ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆದ ಬಳಿಕ, 24,000 ಕ್ಕೂ ಅಧಿಕ ಜನರು ನೋಡಿದ್ದಾರೆ, ಇನ್ನಷ್ಟು ಜನರು ನೋಡುತ್ತಿದ್ದಾರೆ. ಪೋಸ್ಟ್​ಗೆ ಆಸಕ್ತಿಕರ ಕಮೆಂಟ್​ಗಳು ಕೂಡ ಬಂದಿವೆ. ಬಹಳಷ್ಟು ಜನರು ಹಾರ್ಟ್ ಇಮೋಜಿಗಳ ಮೂಲಕ ಪ್ರೀತಿ ಸುರಿದಿದ್ದಾರೆ.

ಇದನ್ನೂ ಓದಿ: Viral Video: ಮರಿ ಆನೆಯನ್ನು ರಕ್ಷಿಸಿ ತಾಯಿಯ ಬಳಿ ಸೇರಿಸಿದ ತಮಿಳುನಾಡು ರಕ್ಷಣಾ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋವಿದು

ಇದನ್ನೂ ಓದಿ: Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್​ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ

Published On - 9:53 pm, Fri, 8 October 21