Fact Check: 9 ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌ & ರಿಲೇಷನ್​​​​​ಶಿಪ್​​​ ಬಗ್ಗೆ ಪಾಠ ಇರೋದು ನಿಜನಾ?

|

Updated on: Feb 06, 2024 | 11:06 AM

ಸಿಬಿಎಸ್ ಇ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಡೇಟಿಂಗ್, ಪ್ರೀತಿ, ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇವು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಮಾಹಿತಿಯನ್ನು ಸಿಬಿಎಸ್‌ಇ ಅಧಿಕೃತ ಟ್ವಿಟರ್​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Fact Check: 9 ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌ & ರಿಲೇಷನ್​​​​​ಶಿಪ್​​​ ಬಗ್ಗೆ ಪಾಠ ಇರೋದು ನಿಜನಾ?
CBSE Clarifies About Viral Dating Chapter Controversy
Follow us on

CBSE ಪಠ್ಯಕ್ರಮಕ್ಕೆ ಸಂಬಂಧಿಸಿದ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿತ್ತು. ಇದರ ಪ್ರಕಾರ ಸಿಬಿಎಸ್ ಇ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಡೇಟಿಂಗ್, ಪ್ರೀತಿ, ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಎಲ್ಲಾ ಆರೋಪಗಳಿಗೆ ಸಿಬಿಎಸ್‌ಇ ಟ್ವೀಟ್ ​​ ಮೂಲಕ ಉತ್ತರ ನೀಡಿದೆ. ಮಕ್ಕಳ ಪಠ್ಯ ಪುಸ್ತಕದಲ್ಲಿ ಪ್ರೀತಿ, ಪ್ರೇಮ ಹಾಗೂ ಡೇಟಿಂಗ್​​​ಗೆ ಸಂಬಂಧಿಸಿದ ಮಾಹಿತಿ ಇರುವುದು ಸಂಪೂರ್ಣ ಸುಳ್ಳು ಎಂದು CBSE HQ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಬಹಿರಂಗಪಡಿಸಿದೆ.

ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಫೇಕ್​​​ ನ್ಯೂಸ್​​ಗಳು ಇದೀಗಾ ಶಿಕ್ಷಣ ಕ್ಷೇತ್ರದಲ್ಲೂ ಕಂಡುಬಂದಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಪ್ರೇಮ, ಡೇಟಿಂಗ್​​​ಗೆ ಸಂಬಂಧಿಸಿದ ವಿಷಯ 9 ನೇ ತರಗತಿ ಪಠ್ಯ ಪುಸ್ತಕದಲ್ಲಿ ಇದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇವು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬ ಮಾಹಿತಿಯನ್ನು ಸಿಬಿಎಸ್‌ಇ ಅಧಿಕೃತ ಟ್ವಿಟರ್​​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತ ಪೋಸ್ಟ್​​​ ಇಲ್ಲಿದೆ ನೋಡಿ;

ಇದನ್ನೂ ಓದಿ: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ

ವಾಸ್ತವವಾಗಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಗಗನ್‌ದೀಪ್ ಕೌರ್ ಬರೆದ ‘ಎ ಗೈಡ್ ಟು ಸೆಲ್ಫ್-ಅವೇರ್ನೆಸ್ ಅಂಡ್ ಎಂಪವರ್‌ಮೆಂಟ್’ ಪುಸ್ತಕದ್ದಾಗಿದೆ. ಈ ಪುಸ್ತಕವನ್ನು Zee Ram Books Pvt Ltd Educational Publishers ಪ್ರಕಟಿಸಿದೆ. CBSE ಯಾವುದೇ ಸಂದರ್ಭದಲ್ಲೂ ಖಾಸಗಿ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸುವುದಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ