Viral Video: ರಸ್ತೆ ಬದಿಯಲ್ಲಿ ಪಾನಿಪುರಿ ಸವಿದ ಗಜರಾಜ; ವಿಡಿಯೋ ಇಲ್ಲಿದೆ ನೋಡಿ
ಆನೆಗಳು ಹೆಚ್ಚಾಗಿ ಹಣ್ಣುಗಳನ್ನು ತಿನ್ನಲು ತುಂಬಾನೇ ಇಷ್ಟಪಡುತ್ತವೆ. ಅದ್ರಲ್ಲೂ ಬಾಳೆಹಣ್ಣು ಮತ್ತು ಕಬ್ಬು ಅಂದ್ರೆ ತುಂಬಾನೆ ಇಷ್ಟ. ಆದ್ರೆ ಇಲ್ಲೊಂದು ಆನೆಗೆ ಮಾತ್ರ ಯುವತಿಯರಂತೆ ಪಾನಿಪುರಿ ತಿನ್ನುವುದೆಂದರೆ ಬಲು ಇಷ್ಟವಂತೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗಜರಾಜ ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುವ ರೀತಿಯನ್ನು ಕಂಡು ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
ಪಾನಿಪುರಿ, ಗೋಲ್ಗಪ್ಪ ಭಾರತದ ಅತ್ಯಂತ ಜನಪ್ರಿಯ ಬೀದಿಬದಿ ಆಹಾರಗಳಾಗಿವೆ. ಅದ್ರಲ್ಲೂ ಈ ಪಾನಿಪುರಿ ಯುವತಿಯರ ಆಲ್ ಟೈಮ್ ಫೇವರೆಟ್ ಸ್ಟ್ರೀಟ್ ಫುಡ್ ಅಂತಾನೇ ಹೇಳ್ಬಹುದು. ಈ ಹೆಂಗಳೆಯರು ಪ್ರತಿನಿತ್ಯ ಸಂಜೆ ಹೊತ್ತಿನಲ್ಲಿ ಬೀದಿಬದಿಗಳಲ್ಲಿರುವ ಪಾನಿಪುರಿ ಸ್ಟಾಲ್ ಗಳಿಗೆ ಹೋಗಿ ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೊ ಅಂತ ಹೇಳಿ ಬಾಯಿ ಚಪ್ಪರಿಸಿಕೊಂಡು ಪಾನಿಪುರಿಯನ್ನು ಸವಿಯುತ್ತಾರೆ. ಹೀಗೆ ಹೆಚ್ಚಿನವರು ಅನ್ಕೊಳ್ಳೋದು ಏನಂದ್ರೆ ಈ ಪಾನಿಪುರಿ, ಗೋಲ್ಗಪ್ಪವನ್ನು ಕೇವಲ ಯುವತಿಯರು ಮಾತ್ರ ಇಷ್ಟ ಪಟ್ಟು ತಿನ್ನುತ್ತಾರೆ ಅಂತ. ಆದ್ರೆ ಏನ್ಗೊತ್ತ ಯುವತಿಯರಿಗೆ ಮಾತ್ರವಲ್ಲ ಕಣ್ರಿ, ಇಲ್ಲೊಂದು ಗಜರಾಜನಿಗೂ ಪಾನಿಪುರಿಯಂದ್ರೆ ಸಖತ್ ಇಷ್ಟವಂತೆ. ಈ ಕುರಿತ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗಜರಾಜ ಪಾನಿಪುರಿಯನ್ನು ಸವಿಯುವ ಪರಿಯನ್ನು ನೋಡಿ ನೆಟಟ್ಟಿಗರು ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಆನೆಗಳು ಹಣ್ಣುಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತವೆ. ಅದ್ರಲ್ಲೂ ಅವುಗಳಿಗೆ ಬಾಳೆಹಣ್ಣು ಮತ್ತು ಕಬ್ಬು ಎಂದರೆ ಪಂಚ ಪ್ರಾಣ. ಆದ್ರೆ ನೀವು ಯಾವತ್ತಾದ್ರೂ ಆನೆ ಪಾನಿಪುರಿಯನ್ನು ಸವಿದಿರೋದನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ. ಈ ವಿಡಿಯೋವನ್ನು ವಿಸ್ಮಯ (@vismaya8) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಮುದ್ದಾದ ಆನೆಯೊಂದು ರಸ್ತೆ ಬದಿಯ ಪಾನಿಪುರಿ ಸ್ಟಾಲ್ ಒಂದರ ಬಳಿ ನಿಂತು, ಬಯ್ಯ ಏಕ್ ಪ್ಲೇಟ್ ಪಾನಿಪುರಿ ದೇದೋ ಅಂತ ಹೇಳಿ ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುವಂತಹ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿಯನ್ ಮಾರಾಟ ನಿಷೇಧ
ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇದು ಪಕ್ಕಾ ಹೆಣ್ಣಾನೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಆನೆಯನ್ನು ಹಾಳು ಮಾಡಿಬಿಟ್ರʼ ಅಂತ ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾನಿಪುರಿ ಆನೆಗಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದನ್ನೆಲ್ಲಾ ಪ್ರಾಣಿಗಳಿಗೆ ಕೊಡಬಾರದುʼ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಗಜರಾಜ ಪಾನಿಪುರಿ ತಿನ್ನುವ ದೃಶ್ಯವನ್ನು ನೋಡಲು ತುಂಬಾ ತಮಾಷೆಯಾಗಿದೆ ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ