Viral: ಬುರ್ಕಾ ಧರಿಸಿ ಚಿನ್ನದ ಅಂಗಡಿಗೆ ಬಂದ ಇಬ್ಬರು ಮಹಿಳೆಯರು; 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

|

Updated on: Aug 02, 2024 | 10:42 AM

ಚಿನ್ನ ಖರೀದಿಸುವವರಂತೆ ನಾಟಕವಾಡಿ, ಬಳಿಕ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವ ದರೋಡೆಕೋರ ಮಹಿಳೆಯರ ಚಿತ್ರಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸದ್ಯ, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Viral: ಬುರ್ಕಾ ಧರಿಸಿ ಚಿನ್ನದ ಅಂಗಡಿಗೆ  ಬಂದ ಇಬ್ಬರು ಮಹಿಳೆಯರು; 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ
Follow us on

ಉತ್ತರಪ್ರದೇಶ: ಬುರ್ಕಾ ಧರಿಸಿ ಚಿನ್ನದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು ಪ್ರಾರಂಭದಲ್ಲಿ ಚಿನ್ನ ಖರೀದಿಸುವವರಂತೆ ನಾಟಕವಾಡಿದ್ದಾರೆ. ಬಳಿಕ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಕ್ಕೆ ಕನ್ನ ಹಾಕಿದ್ದು, ಯಾರಿಗೂ ತಿಳಿಯದಂತೆ ದೋಚಿ ಪರಾರಿಯಾಗಿದ್ದಾರೆ. ಸದ್ಯ ಮಹಿಳೆಯರಿಬ್ಬರು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಪ್ರದೇಶದ ಸಂಭಾಲ್‌ನಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯಲ್ಲಿ ಭಾಗಿಯಾಗಿರುವ ದರೋಡೆಕೋರ ಮಹಿಳೆಯರ ಚಿತ್ರಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸದ್ಯ, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ದರೋಡೆಕೋರ ಮಹಿಳೆಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಾಸ್ತವವಾಗಿ, ಗುರುವಾರ ಮಧ್ಯಾಹ್ನ, ನಗರದ ಮುಖ್ಯ ಮಾರುಕಟ್ಟೆಯಲ್ಲಿರುವ ಮೊಹಲ್ಲಾ ಸೇಠೋನ್ ಗಲಿ ನಿವಾಸಿ ಶಿವಕುಮಾರ್ ಅಗರ್ವಾಲ್ ಅವರ ಆಭರಣ ಮಳಿಗೆಗೆ ಮಹಿಳೆಯೊಬ್ಬರು ಬಂದು ಕಾಲುಂಗುರವನ್ನು ತೋರಿಸಲು ಕೇಳಿದ್ದಾರೆ. ಶಿವಕುಮಾರ್ ಮಹಿಳೆಗೆ ಕಾಲುಂಗುರವನ್ನು ತೋರಿಸುವ ವೇಳೆ, ಇನ್ನೂ ಇಬ್ಬರು ಮಹಿಳೆಯರನ್ನು ಶೋರೂಮ್‌ಗೆ ಬಂದಿದ್ದಾರೆ.

ಇದನ್ನೂ ಓದಿ: Viral Video: ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ನುಂಗಲೆತ್ನಿಸಿದ 15 ಅಡಿ ಉದ್ದದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್

ಈ ವೇಳೆ ಮೊದಲು ಬಂದ ಮಹಿಳೆ ಕೌಂಟರ್ ಬಳಿ ಕುಳಿತಿದ್ದು, ಶಿವಕುಮಾರ್ ಚಿನ್ನಾಭರಣ ತೆಗೆಯಲು ಎದ್ದ ತಕ್ಷಣ ಕೌಂಟರ್ ನಲ್ಲಿಟ್ಟಿದ್ದ ಬಾಕ್ಸ್ ಕದ್ದಿದ್ದಾರೆ. ಇದಾದ ಬಳಿಕ ಮೂವರೂ ಮಹಿಳೆಯರು ಏನನ್ನೂ ಖರೀದಿಸದೆ ಒಬ್ಬೊಬ್ಬರಾಗಿ ತೆರಳಿದ್ದಾರೆ. ಉದ್ಯಮಿ ನೋಡಿದಾಗ ಕೌಂಟರ್ ನಲ್ಲಿ ಬಾಕ್ಸ್ ಕಾಣೆಯಾಗಿತ್ತು. ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವುದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Fri, 2 August 24