Viral Video: ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ನುಂಗಲೆತ್ನಿಸಿದ 15 ಅಡಿ ಉದ್ದದ ಹೆಬ್ಬಾವು; ಶಾಕಿಂಗ್ ವಿಡಿಯೋ ವೈರಲ್
ಮಧ್ಯಪ್ರದೇಶದ ಗ್ರಾಮಸ್ಥನ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಆ ಹೆಬ್ಬಾವು ಅವನನ್ನು ಜೀವಂತವಾಗಿ ನುಂಗಲು ಪ್ರಯತ್ನಿಸಿದೆ. ಆ ವ್ಯಕ್ತಿ ಸಹಾಯಕ್ಕಾಗಿ ಗೋಗರೆಯುತ್ತಿರುವ ವಿಡಿಯೋ ಇಲ್ಲಿದೆ.
ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಗ್ರಾಮದಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ 15 ಅಡಿ ಹೆಬ್ಬಾವು ವ್ಯಕ್ತಿಯೊಬ್ಬನನ್ನು ಜೀವಂತವಾಗಿ ನುಂಗಲು ಯತ್ನಿಸಿದ್ದು, ಗ್ರಾಮಸ್ಥರು ಮಧ್ಯಪ್ರವೇಶಿಸಿ ಆತನನ್ನು ರಕ್ಷಿಸಿದ್ದಾರೆ. ಈ ನಾಟಕೀಯ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಪ್ರದೇಶದಲ್ಲಿ ಆತ ವಿಶ್ರಾಂತಿ ಪಡೆಯುತ್ತಿದ್ದಾಗ ಭಾರೀ ಗಾತ್ರದ ಹೆಬ್ಬಾವು ಸುತ್ತಿಕೊಂಡಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಹಾಯಕ್ಕಾಗಿ ಆತ ಕೂಗಿಕೊಂಡಿದ್ದರಿಂದ ಸ್ಥಳೀಯರು ಧಾವಿಸಿ ಪ್ರಾಣ ಉಳಿಸಿದ್ದಾರೆ.
ಸ್ಥಳೀಯರು ಧೈರ್ಯ ಮಾಡಿ ಆ ವ್ಯಕ್ತಿಯ ಬಳಿ ಹೋಗಿ ಹಾವನ್ನು ಹಿಡಿದು, ಎಳೆದು ಆತನ ಕುತ್ತಿಗೆಯಿಂದ ಬಿಡಿಸಿದ್ದಾರೆ. ನಂತರ ಆ ಹಾವನ್ನು ಹೊಡೆದು ಕೊಂದಿದ್ದಾರೆ. ಹೆಬ್ಬಾವನ್ನು ಕೊಂದ ಗ್ರಾಮಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಪ್ರಾಣಿಗಳು ಮಾನವನ ಜೀವಕ್ಕೆ ತಕ್ಷಣದ ಅಪಾಯವನ್ನುಂಟುಮಾಡುವ ಪ್ರಕರಣಗಳಲ್ಲಿ ಅಂತಹ ಕ್ರಮಗಳನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Jabalpur: A huge python tried to grab and swallow a man who was went to Poop at open place, villagers came and saved his life. pic.twitter.com/NAUgeDzY5M
— Ghar Ke Kalesh (@gharkekalesh) July 25, 2024
ಇದನ್ನೂ ಓದಿ: ಚಲಿಸುತ್ತಿದ್ದ ಕಾರನ್ನೇ ಒದ್ದು ಉದ್ಧಟತನ ಮೆರೆದ ಯುವಕರು, ವಿಡಿಯೋ ವೈರಲ್
ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಚಂದ್ರ ಕುಶ್ವಾಹ ಈ ಘಟನೆಯ ಕುರಿತು ಪ್ರತಿಕ್ರಿಯಿಸಿ, ಹೆಬ್ಬಾವು ಮನುಷ್ಯನ ಕುತ್ತಿಗೆಗೆ ಸುತ್ತಿಕೊಂಡು ಅವನ ಜೀವಕ್ಕೆ ಅಪಾಯವನ್ನುಂಟುಮಾಡಿತ್ತು. ಅಂತಹ ಮಾರಣಾಂತಿಕ ಸಂದರ್ಭಗಳಲ್ಲಿ ಪಾರಾಗಲು ಪ್ರಾಣಿಗಳನ್ನು ಕೊಲ್ಲಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಈ ಸಂದರ್ಭಗಳಲ್ಲಿ, ಮಾನವ ಜೀವವನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳ ಮೇಲೆ ಯಾವುದೇ ಕಾನೂನು ಪರಿಣಾಮಗಳನ್ನು ವಿಧಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ