ಚಲಿಸುತ್ತಿದ್ದ ಕಾರನ್ನೇ ಒದ್ದು ಉದ್ಧಟತನ ಮೆರೆದ ಯುವಕರು, ವಿಡಿಯೋ ವೈರಲ್
ಮಾರೇನ ಹಳ್ಳಿ ಫ್ಲೈ ಓವರ್ ಮೇಲೆ ಬೈಕ್‌ನಲ್ಲಿ ಬಂದ ಕೆಲ ಪುಂಡರು ಚಲಿಸುತ್ತಿದ್ದ ಕಾರನ್ನು ಕಾಲಿನಿಂದ ಒದ್ದು ಉದ್ಧಟತನ ಮೆರೆದಿದ್ದರು. ಸದ್ಯ ಈ ಪುಂಡರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ.
ಬೆಂಗಳೂರು, ಜುಲೈ.29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಬೈಕ್ ವೀಲಿಂಗ್ ಮಾಡೋದು, ಹೆದ್ದಾರಿಗಳಲ್ಲಿ ಸವಾರರನ್ನು ಚೇಡಿಸುವಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಸದ್ಯ ಇದೀಗ ಮಾರೇನಹಳ್ಳಿ ಫ್ಲೈ ಓವರ್ ಮೇಲೆ ಬೈಕ್‌ಗಳಲ್ಲಿ ಬಂದ ಯುವಕರ ಗುಂಪು ಕಾರೊಂದನ್ನು ಟಾರ್ಗೆಟ್ ಮಾಡಿ ಆಕ್ರಮಣಕಾರಿಯಾಗಿ ವರ್ತನೆ ಮಾಡಿದ್ದ ಪುಂಡರನ್ನು ಪೊಲೀಸರು (Bengaluru Police) ಬಂಧಿಸಿ ಎಡೆಮುರಿ ಕಟ್ಟಿದ್ದಾರೆ.
ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಚಲಿಸುತ್ತಿದ್ದ ಕಾರೊಂದನ್ನು ಟಾರ್ಗೆಟ್ ಮಾಡಿ ಕಾರು ಚಾಲಕನಿಗೆ ಬೈಯುತ್ತ, ಹೆದರಿಸುತ್ತ ಕಾರನ್ನು ಕಾಲಿನಿಂದ ಹೊಡೆದು ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಅಲ್ಲದೆ ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಯುವಕರು ಕೂಡ ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿ ಚಾಲಕನಿಗೆ ಹೆದರಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ ಬೆಂಗಳೂರು ಪೊಲೀಸರು, ಈ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರನ್ನು ಕರೆಯಲು ಬರುತ್ತಿರುವ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ
“ರಸ್ತೆ ಮೇಲೆ ಗಾಡಿ ಓಡಿಸುತ್ತಾ ಸಿಕ್ಕ ಥ್ರಿಲ್ ಠಾಣೆಗೆ ಬಂದ ತಕ್ಷಣವೇ ಬದಲಾಗುತ್ತೆ! ಸ್ಟಂಟ್‌ಗಳೆಲ್ಲ ಸಿನಿಮಾಗಳಲ್ಲಿ ಚನ್ನಾಗಿರುತ್ತವೆ, ನಮ್ಮ ರಸ್ತೆಗಳ ಮೇಲಲ್ಲ!” ಎಂದು ಶೀರ್ಷಿಕೆ ನೀಡಿ ಬೆಂಗಳೂರು ಪೊಲೀಸರು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ್ದಾರೆ.
Thrills on the roads can quickly turn into chills at the station! Stunts belong in movies, not on our streets!#WeServeWeProtect pic.twitter.com/4AUCR15r4f
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 26, 2024
ಈ ವೀಡಿಯೊವನ್ನು ಜುಲೈ 26 ರಂದು ಪೋಸ್ಟ್ ಮಾಡಲಾಗಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅನೇಕ ಮಂದಿ ಇದನ್ನು ಶೇರ್ ಮಾಡುತ್ತಿದ್ದು 11,000 ಲೈಕ್‌ಗಳು ಬಂದಿವೆ. ಜೊತೆಗೆ ಅನೇಕರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ