AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಮೊಟೊ ವ್ಯಾಪಾರಿಗೆ 30 ಲಕ್ಷ ರೂ ಉಂಡೇನಾಮ! ಹಣದ ಬದಲಿಗೆ ಬಿಳಿ ಹಾಳೆ ಕಳುಹಿಸಿ ವಂಚನೆ

ವ್ಯಾಪಾರಿಯಿಂದ ಮೂರು ಲೋಡ್​ ಟಮೊಟೊ ಪಡೆದು ಬದಲಿಗೆ 30 ಲಕ್ಷ ರೂ. ಹಣ ನೀಡದೆ ವಂಚನೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿ ಮಾರುಕಟ್ಟೆಗೆ ಟಮೊಟೊ ಕಳುಹಿಸಲಾಗಿತ್ತು.

ಟಮೊಟೊ ವ್ಯಾಪಾರಿಗೆ 30 ಲಕ್ಷ ರೂ ಉಂಡೇನಾಮ! ಹಣದ ಬದಲಿಗೆ ಬಿಳಿ ಹಾಳೆ ಕಳುಹಿಸಿ ವಂಚನೆ
ಟಮೊಟೊ ವ್ಯಾಪಾರಿಗೆ 30 ಲಕ್ಷ ರೂ ಉಂಡೇನಾಮ! ಹಣದ ಬದಲಿಗೆ ಬಿಳಿ ಹಾಳೆ ಕಳುಹಿಸಿ ವಂಚನೆ
Jagadisha B
| Edited By: |

Updated on: Jul 29, 2024 | 3:03 PM

Share

ಬೆಂಗಳೂರು, ಜುಲೈ 29: ವ್ಯಾಪಾರಿಯೊಬ್ಬರಿಂದ ಮೂರು ಲೋಡ್ ಟಮೊಟೊ (tomato) ಪಡೆದು 30 ಲಕ್ಷ ರೂ. ಹಣ ನೀಡದೆ ವಂಚನೆ (Fraud) ಮಾಡಿರುವಂತಹ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಟ್ಟು 32 ಲಕ್ಷ ರೂ. ಪೈಕಿ 20 ಲಕ್ಷ ರೂ. ಕಳುಹಿಸಿದ್ದ ಆರೋಪಿಗಳು, ಕಳುಹಿಸಿದ್ದ 20 ಲಕ್ಷ ರೂ. ಹಣದಲ್ಲೂ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ. ಸದ್ಯ ಸಂಜಯ್ ಮತ್ತು ಮುಕೇಶ್ ಎಂಬುವವರ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಆದಿತ್ಯ ದೂರು ದಾಖಲಿಸಿದ್ದಾರೆ.

ಆದಿತ್ಯ ಷಾ ಎಂಬುವವರು ಕೋಲಾರದ ಎಪಿಎಂಸಿ ಮಾರುಕಟೆಯಲ್ಲಿ ಟಮೊಟೊ ವ್ಯಾಪಾರಸ್ಥರಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ಮಾರ್ಕೆಟ್​ನ ಮುಕೇಶ್​ ಎಂಬುವವರಿಗೆ ಆದಿತ್ಯಾ ಷಾ ಮೂರು ಲೋಡ್ ಟಮೊಟೊ ಕಳುಹಿಸಿದ್ದರು.

ಇದನ್ನೂ ಓದಿ: ಪೊಲೀಸ್​ ಇನ್ಸ್​ಪೆಕ್ಟರ್​ ಎಂದು ನಂಬಿಸಿ ವಂಚನೆ ಆರೋಪ; ಬೆಸ್ಕಾಂ ಅಧಿಕಾರಿ​​ ಬಂಧನ

ಮುಕೇಶ್ ಬೆಂಗಳೂರಿನ ಸಂಜಯ್​ ಎಂಬಾತನ ಬಳಿ ಹಣ ಕಳುಹಿಸುವುದಾಗಿ ಹೇಳಿದ್ದ. ಅದರಂತೆಯೇ ಕಳೆದ ತಿಂಗಳು 15 ರಂದು ಸಂಜಯ್​ ವೈಟ್ ಫೀಲ್ಡ್ ಬಳಿ ಹಣದ ಬ್ಯಾಗ್​​ ತೆಗೆದುಕೊಂಡು ಬಂದಿದ್ದ. 20 ಲಕ್ಷ ರೂ. ಹಣ ಇದೇ ಅಂತ ಬ್ಯಾಗ್​ ತೆಗೆದು ಹಣ ತೋರಿಸಿದ್ದ.

ಇದನ್ನೂ ಓದಿ: ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಬಳಿಕ ಮನೆ ಬಾಗಿಲು ಮುರಿದು ಕಳ್ಳತನ

ಹಣ ನೋಡಿದ್ದ ಆದಿತ್ಯಾ 500 ಮುಖ ಬೆಲೆಯ ನೋಟಿನ ಮೇಲೆ ಆಕ್ಸಿಸ್ ಬ್ಯಾಂಕ್​​ ಸೀಲ್‌ ಕವರ್ ನೋಡಿ ಮನೆಗೆ ಹಣ ತೆಗೆದಕೊಂಡು ಹೊಗಿದ್ದರು. ಮನೆಗೆ ಹೋಗಿ ಹಣ ಏಣಿಕೆ ಮಾಡುವಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣದ ಕಂತೆ ಮೇಲೆ ಮತ್ತು ಕೆಳಗೆ ಅಸಲಿ ನೋಟುಗಳಿದ್ದು, ಮಧ್ಯದಲ್ಲಿ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ.

ಕೃಷ್ಣಾ ನದಿ‌ ಹಿನ್ನೀರಿನಲ್ಲಿ ಕೊಚ್ಚಿಹೋಗಿದ್ದ ರೈತ ಶವವಾಗಿ ಪತ್ತೆ

ಬಾಗಲಕೋಟೆ: ಕೃಷ್ಣಾ ನದಿ‌ ಹಿನ್ನೀರಿನಲ್ಲಿ ಕೊಚ್ಚಿಹೋಗಿದ್ದ ಸಿದ್ದಪ್ಪ ಶವವಾಗಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ನಡೆದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿರಬೂರು ಗ್ರಾಮದ ಬಳಿ ರೈತ ಸಿದ್ದಪ್ಪ ಅಡೊಳ್ಳಿ(65) ಶವ ಪತ್ತೆ ಆಗಿದೆ. ಜು.27ರಂದು ಜಮೀನಿಗೆ ಹೋದಾಗ ರೈತ ನದಿಯಲ್ಲಿ ಕೊಚ್ಚಿ ಹೋಗಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.