AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಸುಪ್ರೀಂಕೋರ್ಟ್​​ ಗ್ರೀನ್ ಸಿಗ್ನಲ್

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ವಿವಾದ ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ನಿರ್ದೇಶನ ನೀಡಿದೆ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಸುಪ್ರೀಂಕೋರ್ಟ್​​ ಗ್ರೀನ್ ಸಿಗ್ನಲ್
ಸುಪ್ರೀಂಕೋರ್ಟ್
ಹರೀಶ್ ಜಿ.ಆರ್​.
| Updated By: ರಮೇಶ್ ಬಿ. ಜವಳಗೇರಾ|

Updated on: Jul 29, 2024 | 3:04 PM

Share

ಬೆಂಗಳೂರು,(ಜುಲೈ 29): ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದ್ದು, ವರದಿ ಆಧರಿಸಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ಬಗ್ಗೆ ನಿರ್ದೇಶನ ನೀಡಿದೆ. ಜಿಲ್ಲಾ ನ್ಯಾಯಾಧೀಶರು ಸಮಿತಿಯ ಭಾಗವಾಗಿರತಕ್ಕದ್ದು ಅಥವಾ ಎಡಿಜೆ ಶ್ರೇಣಿಗಿಂತ ಕಡಿಮೆಯಿಲ್ಲದ ಯಾವುದೇ ಸದಸ್ಯರನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ಇಂದು (ಜುಲೈ 29) ಆದೇಶ ಹೊರಡಿಸಿದೆ.

ಸಮಿತಿಗೆ ನೇಮಕಗೊಂಡವರು ನ್ಯಾಯಮೂರ್ತಿ ಶ್ರೀಕೃಷ್ಣರೊಂದಿಗೆ ಸಮಾಲೋಚಿಸಬಹುದು. ಸಮಾಲೋಚಿಸಿ ಸಮಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಅಲ್ಲದೇ ಅಧ್ಯಕ್ಷರು ಆಯ್ಕೆಯ ಮತವನ್ನು ಹೊಂದಿರುತ್ತಾರೆ . ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನ ಹೊರತುಪಡಿಸಿ ಸದಸ್ಯರು ಸಲಹೆ ನೀಡಬಹುದು. ಅಧ್ಯಕ್ಷರ ನಿರ್ಧಾರದ ಮೇಲೆ ಇತರ ಸದಸ್ಯರು ವೀಟೋ ಅಧಿಕಾರ ಚಲಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಇದನ್ನೂ ಓದಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ

ಇನ್ನು ಸರ್ಕಾರ ನಾಲ್ವರು ಖಾಸಗಿ ಸದಸ್ಯರನ್ನು ನೇಮಕ ಮಾಡಬಹುದು. ಆದ್ರೆ, ನಾಲ್ವರು ಖಾಸಗಿ ಸದಸ್ಯರು ಉಪಧಿವಾಂತರಾಗಿರಬೇಕು ಎಂದು ಕಲೆ ಸಲಹೆ ಸೂಚನೆಗಳನ್ನು ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್​ಗೆ ಮುಂದೂಡಿದೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಗರ್ಭಗುಡಿಯ ನಂದಿ ಮಂಟಪ ಪೂಜೆ ಹಾಗೂ ತೀರ್ಥ-ಪ್ರಸಾದ ವಿತರಣೆ ವಿಷಯಕ್ಕೆ ಸಂಬಂಧಿಸಿ ಇದೇ 2024, ಮೇ ತಿಂಗಳಲ್ಲಿ ಉಪಾಧಿವಂತ ಎರಡು ಕುಟುಂಬಗಳ ನಡುವೆ ವಾದ-ವಿವಾದವಾಗಿತ್ತು. ಕೆಲ ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ಪೂಜೆ, ತೀರ್ಥ ಪ್ರಸಾದ ವಿತರಣೆ ಕರ್ತವ್ಯ ನಿರ್ವಹಿಸಿ ಇನ್ನೊಂದು ಮನೆತನಕ್ಕೆ ಅವಕಾಶ ನೀಡದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಸಮುಖದಲ್ಲೂ ಸಭೆ ನಡೆದಿತ್ತು, ಎರಡೂ ಕುಟುಂಬದವರು ವಾಗ್ವಾದ ನಡೆಸಿದ್ದರಿಂದ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಅಲ್ಲದೇ ಪ್ರಸಾದ ಮಾರಾಟ ಮಾಡುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ನಿರ್ದೇಶಿಸಿದ್ದರು.

ಬಳಿಕ ಮಹಾಬಲೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಾಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಮೇಲುಸ್ತವಾರಿ ಸಮಿತಿಯ ಸಭೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ಪೂಜಾ ವಿಷಯಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಆದೇಶ ಪಡೆದವರ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ​

2021ರ ಏಪ್ರಿಲ್ 19ರಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ ಎ.ಎಸ್. ಬೋಬಡೆ ನೇತೃತ್ವದ ತ್ರಿಸದಸ್ಯ ಪೀಠ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಅಧಿಕಾರವನ್ನು ನಿವೃತ್ತ ನ್ಯಾಯಾಧೀಶ ಬಿ.ಎನ್​ ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಹಸ್ತಾಂತಿಸುವಂತೆ ಮಧ್ಯಂತರ ಆದೇಶ ನೀಡಿತ್ತು. ಈ ಸಮಿತಿಯಲ್ಲಿ ಒಟ್ಟು ಎಂಟು ಜನ ಸದಸ್ಯರಿದ್ದು, ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಮಟಾ ಉಪ ಸಹಾಯಕ ಆಯುಕ್ತ, ಇಬ್ಬರು ಗಣ್ಯರು ಹಾಗೂ ಇಬ್ಬರು ಉಪಾಧಿವಂತರು ಇರುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ