AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲೂರು ಚನ್ನಕೇಶವ ದೇಗುಲದಲ್ಲಿ ಭಕ್ತರು, ಆಡಳಿತ ಮಂಡಳಿ ನಡುವೆ ಜಟಾಪಟಿ; ಉತ್ಸವದಲ್ಲಿ ಅಡ್ಡೆಹೊರುವ ಬಗ್ಗೆ ಗಲಾಟೆ

Belur Chennakeshava Temple: ಸೆಪ್ಟೆಂಬರ್ 28ರ ಸಂಜೆ ಆಯೋಜಿಸಲಾಗಿದ್ದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ಅನಂತ ಪದ್ಮನಾಭ ಉತ್ಸವಕ್ಕೆ ಅಡ್ಡೆ ಹೊರಬೇಕಿದ್ದ ಅಡ್ಡೆಗಾರರು ಗೈರಾಗಿದ್ದರು. ಆದರೆ ಈಗ ಸಂಪ್ರದಾಯ ಮುರಿದು ಬೇರೆಯವರಿಂದ ಅಡ್ಡೆ ಹೊರಿಸಲಾಗಿದೆ ಎಂದು ಅಡ್ಡೆಗಾರರು ಆಕ್ರೋಶ ಹೊರ ಹಾಕಿದ್ದಾರೆ.

ಬೇಲೂರು ಚನ್ನಕೇಶವ ದೇಗುಲದಲ್ಲಿ ಭಕ್ತರು, ಆಡಳಿತ ಮಂಡಳಿ ನಡುವೆ ಜಟಾಪಟಿ; ಉತ್ಸವದಲ್ಲಿ ಅಡ್ಡೆಹೊರುವ ಬಗ್ಗೆ ಗಲಾಟೆ
ಹಾಸನ ಚನ್ನಕೇಶವಸ್ವಾಮಿ ದೇಗುಲದ ಭಕ್ತರು, ಆಡಳಿತ ಮಂಡಳಿ ನಡುವೆ ಜಟಾಪಟಿ
ಮಂಜುನಾಥ ಕೆಬಿ
| Updated By: ಆಯೇಷಾ ಬಾನು|

Updated on: Sep 30, 2023 | 12:33 PM

Share

ಹಾಸನ, ಸೆ.30: ಇತ್ತೀಚೆಗೆ ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರಿದ್ದ ಐತಿಹಾಸಿಕ ಬೇಲೂರು ಚನ್ನಕೇಶವಸ್ವಾಮಿ ದೇಗುಲದ (Belur Chennakeshava Temple) ಭಕ್ತರು ಹಾಗೂ ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆದಿದೆ. ಅಡ್ಡೆಗಾರರಿಗೆ ಅಗೌರವ ಆರೋಪದಲ್ಲಿ ಅನಂತಪದ್ಮನಾಭ ಉತ್ಸವದಲ್ಲಿ ಅಡ್ಡೆಹೊರಲು ನಿರಾಕರಿಸಲಾಗಿದೆ. ಹೀಗಾಗಿ ದೇವಾಲಯದ ಆಡಳಿತಾಧಿಕಾರಿ ಹಾಗು ತಹಸೀಲ್ದಾರ್ ಎಂ.ಮಮತಾ ವಿರುದ್ದ ಅಡ್ಡೆಗಾರರು ತಿರುಗಿಬಿದಿದ್ದಾರೆ. ಇನ್ನು ಚನ್ನಕೇಶವಸ್ವಾಮಿ ಅನಂತ ಪದ್ಮನಾಭ ಉತ್ಸವದಂದು ಅಡ್ಡೆಗಾರರು ಗೈರಾಗಿದ್ದು ಅಧಿಕಾರಿಗಳೇ ಅಡ್ಡೆ ಹೊತ್ತಿದ್ದಾರೆ.

ಸೆಪ್ಟೆಂಬರ್ 28ರ ಸಂಜೆ ಆಯೋಜಿಸಲಾಗಿದ್ದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ಅನಂತ ಪದ್ಮನಾಭ ಉತ್ಸವಕ್ಕೆ ಅಡ್ಡೆ ಹೊರಬೇಕಿದ್ದ ಅಡ್ಡೆಗಾರರು ಗೈರಾಗಿದ್ದರು. ಆದರೆ ಈಗ ಸಂಪ್ರದಾಯ ಮುರಿದು ಬೇರೆಯವರಿಂದ ಅಡ್ಡೆ ಹೊರಿಸಲಾಗಿದೆ ಎಂದು ಅಡ್ಡೆಗಾರರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ವರ್ಷ ಅಡ್ಡ ಹೊರುತ್ತಿದ್ದ ಅಡ್ಡೆಗಾರರು ಗೈರಾದ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗು ದೇಗುಲದ ಸಿಬ್ಬಂದಿ ಶ್ರೀ ಚನ್ನಕೇಶವ ದೇವರ ಅಡ್ಡೆ ಹೊತ್ತಿದ್ದರು.

ತಹಶೀಲ್ದಾರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಇನ್ನು ಅಧಿಕಾರಿಗಳು ಅಡ್ಡೆ ಹೊರುವ ಮುನ್ನ ದೇವಾಲಯದೊಳಗೆ ಟ್ರ್ಯಾಕ್ಟರ್ ತಂದು ಅನಂತ ಪದ್ಮನಾಭ ಉತ್ಸವ ಮಾಡಲು ಮುಂದಾಗಿದ್ದಕ್ಕೆ ತಹಶೀಲ್ದಾರ್ ವಿರುದ್ಧ ಅಸಮಧಾನ ಭುಗಿಲೆದ್ದಿದೆ. ತಹಶೀಲ್ದಾರ್ ವಿರುದ್ಧ ಆಗಮೀಕರು, ಅರ್ಚಕರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಅಡ್ಡೆ ಹೊತ್ತಿದ್ದರು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯ ಮುರಿಯಲಾಗಿದೆ ಎಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಗುರುವಾರ ದೇಗುಲದ ಆವರಣದಲ್ಲೇ ಅಡ್ಡೆಗಾರರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:  ಯುನೆಸ್ಕೋ ಪಟ್ಟಿಗೆ ಸೇರಿದ ಹೊಯಸ್ಸಳರ ವಾಸ್ತುಶಿಲ್ಪ: ಇವರ ಕಾಲದ 3 ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ತಿಳಿಯಿರಿ

ಪ್ರತಿ ವರ್ಷ ಭಕ್ತಿಭಾವದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅನಂತ ಪದ್ಮನಾಭ ಉತ್ಸವ ನಡೆಯುತ್ತಿತ್ತು. ಈ ವೇಳೆ ಎಂಟು ಮೂಲೆ ನಾಡ ಅಡ್ಡೆಗಾರರು ದೇವರ ಅಡ್ಡೆ ಹೊರುತ್ತಿದ್ದರು. ನಾಲ್ಕು ಬೀದಿಗಳಿಗೆ ತೆರಳಿ ಉತ್ಸವ ನಡೆಯುತ್ತಿತ್ತು. ಆದರೆ ಅಡ್ಡೆಗಾರರ ಬಹಿಷ್ಕಾರದಿಂದ ದೇವಸ್ಥಾನದ ಪ್ರಾಂಗಣದೊಳಗೆ ಅನಂತ ಪದ್ಮನಾಭ ಉತ್ಸವ ನಡೆದಿದೆ. ಅಧಿಕಾರಿಗಳು ಹಾಗೂ ಅಡ್ಡೆಗಾರರ ನಡುವಿನ ತಿಕ್ಕಾಟದ ವೀಡಿಯೊ ವೈರಲ್ ಆಗಿದೆ.

ಹಾಸನ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ