ಯುನೆಸ್ಕೋ ಪಟ್ಟಿಗೆ ಸೇರಿದ ಹೊಯಸ್ಸಳರ ವಾಸ್ತುಶಿಲ್ಪ: ಇವರ ಕಾಲದ 3 ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ತಿಳಿಯಿರಿ
ಹೊಯ್ಸಳರು ಸಂಗೀತ, ನೃತ್ಯ, ಕಲೆ ಮತ್ತು ಶಿಲ್ಪಕಲೆ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ವಾಸ್ತುಶಿಲ್ಪಗಳು ದೇಶದ ಐತಿಹ್ಯವನ್ನು ಎತ್ತಿ ಹಿಡಿಯುತ್ತವೆ. 10 ನೇ ಮತ್ತು 14 ನೇ ಶತಮಾನದ ನಡುವೆ ದಕ್ಷಿಣ ಭಾರತದಲ್ಲಿ ಮೂರೂವರೆ ಶತಮಾನಗಳ ಕಾಲ ಹೊಯ್ಸಳರು ಆಳಿದರು. ಈ ಮೂರು ದೇವಾಲಯಗಳನ್ನು ಹೊಯ್ಸಳ ರಾಜರು ನಿರ್ಮಿಸಿದ್ದಾರೆ.
ಮೈಸೂರು/ಹಾಸನ: ಕರ್ನಾಟಕದಲ್ಲಿನ ಪುರಾತನ ದೇವಾಲಯಗಳು ವಿಶ್ವಕ್ಕೆ ಪ್ರಸಿದ್ಧಿಯಾಗಿವೆ. ರಾಜ್ಯದ ವಾಸ್ತುಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಇಲ್ಲಿಯ ಅರಸರು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಈ ನಾಡು ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂದಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಆದ್ದರಿಂದ ಕರ್ನಾಟಕ (Karnataka) ವಾಸ್ತುಶಿಲ್ಪಗಳ ನೆಲೆ ಎಂದು ಕರೆಯಲಾಗುತ್ತದೆ. ವಿವಿಧ ರಾಜವಂಶಗಳ ಕಾಲದಲ್ಲಿ ವಾಸ್ತುಶಿಲ್ಪಕ್ಕೆ ಗಮನಾರ್ಹ ಕೊಡುಗೆ ನೀಡಲಾಗಿದೆ. 12 ರಿಂದ 13 ನೇ ಶತಮಾನದಲ್ಲಿ ನಿರ್ಮಿಸಲಾದ ಬೇಲೂರು (Belur), ಹಳೇಬೀಡು (Halebidu) ಮತ್ತು ಸೋಮನಾಥಪುರ (Somanathapura) ದೇವಾಲಯಗಳು ರಾಜ್ಯದ ವಾಸ್ತುಶಿಲ್ಪಕ್ಕೆ ಕೈಗ್ನಡಿಯಂತಿವೆ.
ಹೊಯ್ಸಳರು ಸಂಗೀತ, ನೃತ್ಯ, ಕಲೆ ಮತ್ತು ಶಿಲ್ಪಕಲೆ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ವಾಸ್ತುಶಿಲ್ಪಗಳು ದೇಶದ ಐತಿಹ್ಯವನ್ನು ಎತ್ತಿ ಹಿಡಿಯುತ್ತವೆ. 10 ನೇ ಮತ್ತು 14 ನೇ ಶತಮಾನದ ನಡುವೆ ದಕ್ಷಿಣ ಭಾರತದಲ್ಲಿ ಮೂರೂವರೆ ಶತಮಾನಗಳ ಕಾಲ ಹೊಯ್ಸಳರು ಆಳಿದರು. ಈ ಮೂರು ದೇವಾಲಯಗಳನ್ನು ಹೊಯ್ಸಳ ರಾಜರು ನಿರ್ಮಿಸಿದ್ದಾರೆ.
ಬೇಲೂರಿನ ಚೆನ್ನಕೇಶವ ದೇವಾಲಯ
ಹಳೇಬೀಡು ಮತ್ತು ಬೇಲೂರು ಹಾಸನ ಜಿಲ್ಲೆಯ ದೇವಾಲಯ ಪಟ್ಟಣಗಳಾಗಿವೆ. ಹಾಸನದಿಂದ 38 ಕಿಮೀ ದೂರದಲ್ಲಿರುವ ಬೇಲೂರು ಪಟ್ಟಣದಲ್ಲಿರುವ ಚೆನ್ನಕೇಶವ ದೇವಾಲಯದ ಅದ್ಭುತ ವಾಸ್ತುಶಿಲ್ಪದಿಂದ ಕೂಡಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರನ್ನು ವೇಲಾಪುರ ಎಂದೂ ಕರೆಯಲಾಗುತ್ತಿತ್ತು. ಇದು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇನ್ನು ಚೆನ್ನಕೇಶವ ದೇವಾಲಯವನ್ನು ಕೇಶವ ಅಥವಾ ಬೇಲೂರಿನ ವಿಜಯನಾರಾಯಣ ದೇವಾಲಯ ಎಂದೂ ಕರೆಯಲಾಗುತ್ತದೆ. ಈ ದೇವಲಾಯದವನ್ನು ಕ್ರಿ.ಪೂ 1117ರಲ್ಲಿ ರಾಜ ವಿಷ್ಣುವರ್ಧನ ನಿರ್ಮಿಸಿದರು.
ಇದನ್ನೂ ಓದಿ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ ಹೊಯ್ಸಳ ದೇವಾಲಯಗಳು, ಮೋದಿ ಸಂತಸ
ಹೊಯ್ಸಳರ ದೊರೆ ವಿಷ್ಣುವರ್ಧನನು ನಾಟ್ಯರಾಣಿ ಎಂದು ಜನಪ್ರಿಯವಾಗಿರುವ ತನ್ನ ಪತ್ನಿ ಶಾಂತಲಾಳೊಂದಿಗೆ ಈ ದೇವಾಲಯದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದನು. ಕ್ರಿ.ಪೂ 1116-1117 ವಿಷ್ಣುವರ್ಧನ ಮೈಸೂರಿನ ಕಾವೇರಿ ನದಿಯ ದಡದಲ್ಲಿರುವ ತಲಕಾಡನ್ನು ವಶಪಡಿಸಿಕೊಂಡರು. ಅದೇ ಅವಧಿಯಲ್ಲಿ ಅವರು ಶ್ರೀವೈಷ್ಣವ ಧರ್ಮವನ್ನು ಸ್ವೀಕರಿಸಿದರು. ಈ ದೇವಾಲಯವನ್ನು ಆ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಐದು ದೇವಾಲಯಗಳಿಂದ ಕೂಡಿದೆ. ಚನ್ನಕೇಶವ, ಕಪ್ಪೆ ಚೆನ್ನಿಗರಾಯ, ವೀರ ನಾರಾಯಣ, ಸೌಮ್ಯನಾಯಕಿ ಮತ್ತು ರಂಗನಾಯಕಿ ಅಥವಾ ಆಂಡಾಳ್ ದೇವಾಲಯಗಳು. ಈ ದೇವಾಲಯವನ್ನು ನಿರ್ಮಿಸಲು 103 ವರ್ಷ ಸಮಯ ತೆಗೆದುಕೊಳ್ಳಲಾಯಿತು. ಈ ನಗರವು ಹೊಯ್ಸಳರಿಂದ ಎಷ್ಟು ಗೌರವಿಸಲ್ಪಟ್ಟಿದೆಯೆಂದರೆ ಶಾಸನಗಳಲ್ಲಿ ಇದನ್ನು “ಐಹಿಕ ವೈಕುಂಠ ” (ವಿಷ್ಣುವಿನ ನಿವಾಸ) ಮತ್ತು “ದಕ್ಷಿಣ ವಾರಣಾಸಿ” ಎಂದು ಕರೆಯಲಾಗುತ್ತದೆ.
ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ
ಕ್ರಿ.ಪೂ 1121ರಲ್ಲಿ ನಿರ್ಮಿಸಲಾದ ಈ ದೇವಾಲಯವು ಶಿವನ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ನೋಡಿದವರು ಹೊಯ್ಸಳರ ವಸ್ತುಶಿಲ್ಪಕ್ಕೆ ಮಾರುಹೋಗದೆ ಇರರು. ಹೆಳೆಬೀಡು ಪಟ್ಟಣವನ್ನು ಮೂಲತಃ ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು. ಇದು 11 ನೇ ಶತಮಾನದ ಮಧ್ಯಭಾಗ ಮತ್ತು 14 ನೇ ಶತಮಾನದ ಮಧ್ಯಭಾಗದ ನಡುವೆ ಆಳಿದ ರಾಜವಂಶಗಳ ರಾಜಧಾನಿಗಳಲ್ಲಿ ಒಂದಾಗಿತ್ತು. ಹೊಯ್ಸಳೇಶ್ವರ, ದೇವಾಲಯದ ದಕ್ಷಿಣ ಭಾಗ ಮತ್ತು ಉತ್ತರ ಭಾಗದಲ್ಲಿ ಪ್ರಮುಖ ವ್ಯಾಪಾರ ಸ್ಥಳವಾಗಿತ್ತು. ಇದನ್ನು ಸೇನಾಪತಿ ಕೇತಮಲ್ಲ ನೋಡಿಕೊಳ್ಳುತ್ತಿದ್ದನು.
ಇದನ್ನು ರಾಜ ವಿಷ್ಣುವರ್ಧನ ಮತ್ತು ರಾಣಿ ನಾಟ್ಯರಾಣಿ ಶಾಂತಲಾ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ದೇವಾಲಯದ ಕಲ್ಲಿನ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ವಿವಿಧ ಕಥೆಗಳನ್ನು ಚಿತ್ರಿಸಲಾಗಿದೆ. ಹಾಗೇ ಪ್ರತಿಮಾಶಾಸ್ತ್ರದಲ್ಲಿ ಬರುವ ಗಜೇಂದ್ರ ಮೋಕ್ಷದ ಕಥೆಯನ್ನು ಕೆತ್ತಲಾಗಿದೆ.
ಮೈಸೂರಿನ ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ
ಕಾವೇರಿ ನದಿಯ ದಡದಲ್ಲಿ ಒಂದು ಕಿಮೀ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಟಿ ನರಸೀಪುರ ತಾಲೂಕಿನಲ್ಲಿರುವ ಈ ದೇವಾಲಯವನ್ನು ಕ್ರಿ.ಪೂ 1268 ರಲ್ಲಿ ನಿರ್ಮಿಸಲಾಗಿದೆ. ಇದೇ ಕಾಲದಲ್ಲಿ ಸೋಮನಾಥಪುರ ಗ್ರಾಮವೂ ನಿರ್ಮಾಣವಾಯಿತು. ಹೊಯ್ಸಳರ ಮೂರನೇ ನರಸಿಂಹ ರಾಜನ ಸಹಾಯದಿಂದ ಸೋಮನಾಥ ದಂಡನಾಯಕನು ನಿರ್ಮಿಸಿದನು. ಪ್ರವೇಶದ್ವಾರದಲ್ಲಿರುವ ಶಾಸನವು ಅದರ ಇತಿಹಾಸವನ್ನು ಹೇಳುತ್ತದೆ. ಇದು ಹೊಯ್ಸಳರು ನಿರ್ಮಿಸಿದ ಕೊನೆಯ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಇನ್ನೂ ಅನೇಕ ದೇವಾಲಯಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ