AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕ ಇರುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ, ಭಾನುವಾರ ಮಾನಸಿಕ ದುರ್ಬಲತೆ, ಪ್ರೇಮದಲ್ಲಿ ಕೋಪ, ವಿದ್ಯಾಭ್ಯಾಸಕ್ಕೆ ತೊಡಕು ಇವು ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕ ಇರುವುದು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 20, 2025 | 1:05 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ : ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ಸಿದ್ಧ, ಕರಣ: ಭದ್ರ, ಸೂರ್ಯೋದಯ – 06:17 am, ಸೂರ್ಯಾಸ್ತ – 06:46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:13 – 18:46, ಯಮಘಂಡ ಕಾಲ 12:32 – 14:05, ಗುಳಿಕ ಕಾಲ 15:39 – 17:13

ಮೇಷ ರಾಶಿ: ಅನ್ಯರ ವೈಷಮ್ಯವನ್ನು ಸರಿಮಾಡಲು ಪ್ರಯತ್ನ. ಯಾರಾದರೂ ನಿಂದಿಸಿ ನಿಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಯಸಬಹುದು. ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಬಾಕಿ ಹಣ ಮತ್ತೆ ನಿಮ್ಮತ್ತ ಬರುತ್ತದೆ. ಕುಟುಂಬಕ್ಕೆ ವಿಶೇಷ ಯೋಜನೆ ರೂಪಿಸಿ. ಕರೆಯದೇ ಎಲ್ಲಿಗೂ ಹೋಗುವ ಇಚ್ಛೆ ತೋರಿಸಲಾರಿರಿ. ಅನಿರೀಕ್ಷಿತ ಆಮಂತ್ರಣದಿಂದ ಉತ್ಸಾಹ. ಸಂಗಾತಿಯಿಂದ ಪ್ರೀತಿಯ ಮೆಲುಕು. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕವು ಇರುವುದು. ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ನಿಮ್ಮಲ್ಲಿರುವ ಒಳ್ಳೆಯದನ್ನು ನಿಜವಾಗಿಯೂ ಪ್ರಶಂಸಿಸಲು ನಿಮ್ಮಿಬ್ಬರಿಗೂ ಸ್ವಲ್ಪ ಅಂತರದ ಅಗತ್ಯವಿದೆ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನಿಟ್ಟುಕೊಳ್ಳುವುದು ಸೂಕ್ತ.

ವೃಷಭ ರಾಶಿ: ಸಣ್ಣ ಹುಲ್ಲುಕಡ್ಡಿಯೂ ಆಪತ್ತಿನಿಂದ ರಕ್ಷಿಸುವುದು. ವಾಸ್ತವದಲ್ಲಿ ಬದುಕುವುದು ಮುಖ್ಯ. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ಕೋಪ ಅಧಿಕವಾಗಲಿದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ಇತರರ ಬಗ್ಗೆ ದ್ವೇಷ ಭಾವನೆ ಬೇಡ, ಅದು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ವ್ಯಾಪಾರದಲ್ಲಿ ಹಾನಿ ಸಾಧ್ಯತೆ, ಜಾಣತನದಿಂದ ಹಣ ವ್ಯಯಿಸಿ. ಮನೆಯ ಬದಲಾವಣೆಗೆ ಆಪ್ತರ ಸಲಹೆ ಕೇಳಿ. ಸಂಗಾತಿಗೆ ನಿಮ್ಮ ಗಂಭೀರತೆಯನ್ನು ಸ್ಪಷ್ಟಪಡಿಸಿ. ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯ ವಿಷಯಗಳನ್ನು ಜವಾಬ್ದಾರಿಯಿಂದ ಪೂರೈಸಿ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಮನಸ್ಸಿನ ಭಾರವು ನಿಮ್ಮ ಕೆಲಸವನ್ನು ನಿಲ್ಲಿಸುವುದು.

ಮಿಥುನ ರಾಶಿ: ಹಲವು ನಕಾರಾತ್ಮಕ ಸುದ್ದಿಗಳ ನಡುವೆ ಒಂದು ಶುಭ ವಾರ್ತೆ, ಉತ್ತೇಜನ ನೀಡುವುದು. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ಮಾನಸಿಕ ಭಯವನ್ನು ನೀಗಿಸಿ ಧೈರ್ಯದಿಂದ ನಡೆದುಕೊಳ್ಳಿ. ಹಿರಿಯರ ಆಶೀರ್ವಾದದಿಂದ ಹಣಕಾಸು ಲಾಭ. ಅಹಂಕಾರದಿಂದ ನೀವೇ ದೂರಾಗುವಿರಿ. ಸ್ನೇಹಿತ ಜೊತೆ ಪ್ರವಾಸದ ಯೋಜನೆ ಉತ್ಸಾಹವನ್ನು ತುಂಬುತ್ತದೆ. ಸಂಗಾತಿಯ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ‌. ಇದರ ಜೊತೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ವಿವಾದವಾಗುವ ವಿಚಾರದಲ್ಲಿ ನೀವು ದೂರವಿರುವಿರಿ. ಉದ್ಯೋಗಾವಕಾಶಗಳನ್ನು ಬಿಡುವಿರಿ. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ನಿಮ್ಮ ಏಕಾಗ್ರತೆಗೆ ಭಂಗಬರಬಹುದು.

ಕರ್ಕಾಟಕ ರಾಶಿ: ವೈರಿಗಳ ಜಯದಿಂದ ನಿಮಗೆ ಕೋಪ. ಸೋಲಿಸಬೇಕೆಂಬ ತಂತ್ರಗಾರಿಕೆ ವಿಫಲ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ನಿಮ್ಮ ಸಂತೋಷದ ಸ್ವಭಾವ ಇತರರನ್ನೂ ಪ್ರೇರೇಪಿಸುತ್ತದೆ. ನಿಮ್ಮ ಮನಸ್ಸಿಗೆ ತೃಪ್ತಿ ಕೊಟ್ಟರೆ ಅಂತಹ ಕೆಲಸವನ್ನು ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ವ್ಯರ್ಥ ಖರ್ಚನ್ನು ನಿಯಂತ್ರಿಸಿ. ಕುಟುಂಬದಿಂದ ಬಲವಾದ ಬೆಂಬಲ ಸಿಗುತ್ತದೆ. ಸಂಗಾತಿಯಿಂದ ಅಲ್ಪಮಟ್ಟದ ನಿರಾಶೆ ಬರಬಹುದು. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆ. ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಪ್ರಯತ್ನಿಸಿದ ಕಾರ್ಯಗಳಿಗೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಮಹಿಳೆಯರ ಸಂಘವು ಹೆಚ್ಚಾಗಬಹುದು. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ.

ಸಿಂಹ ರಾಶಿ: ತಿಳಿವಳಿಕೆ ಇಲ್ಲದೇ ಮಿತ್ರರು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಾಲದು. ನಿಮ್ಮದಲ್ಲದ ಕೆಲಸವನ್ನು ನೀವೆ ಮಾಡಿದ್ದು ಎಂದು ಹೇಳಿಕೊಳ್ಳುವಿರಿ. ಹಣವನ್ನು ಉಳಿಸಿ ಹೂಡಿಕೆ ಮಾಡುತ್ತೇನೆ ಎಂಬುದು ಆಗದು. ಮಕ್ಕಳ ಜೊತೆ ಸಮಯವನ್ನು ಸಂತೋಷದಿಂದ ಕಳೆಯಬಹುದು. ಒತ್ತಡದ ದಿನದವನ್ನು ಮರೆಯಲು ಸಂತೋಷಕೂಟ ಮಾಡುವಿರಿ. ಹಣದ ವ್ಯಯವನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಕುಟುಂಬದ ಸಲಹೆ ಅನುಸರಿಸಿ. ಭರವಸೆಗಳು ಇತ್ಯರ್ಥವಾಗದೆ ಪ್ರೀತಿಯಲ್ಲಿ ಅಸಮಾಧಾನ ಆಗುವುದು. ಸಮಯವನ್ನು ನಿಖರವಾಗಿ ಉಪಯೋಗಿಸಿ. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ನಿಮ್ಮವರು ನಿಮ್ಮಿಂದ ಏನನ್ನಾದರೂ ಬಯಸುವರು. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇ ಹೋಗಬಹುದು.

ಕನ್ಯಾ ರಾಶಿ: ನೀವು ಪಡೆಯಬೇಕೆಂದ ವಸ್ತುವು ಯಾರದೋ ಮೂಲಕ ಕೈಸೇರಿದ್ದು ಆಕಸ್ಮಿಕ ಸಂತೋಷ ನೀಡುವುದು. ನಿಮ್ಮ ಜೊತೆಗಿನ‌ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಅದನ್ನು ಅಷ್ಟಕ್ಕೇ ನಿಲ್ಲಿಸುವ ಜಾಣ್ಮೆ ನಿಮ್ಮದು. ಸೃಜನಾತ್ಮಕ ಕೆಲಸದಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ಹಿತ. ಭೂಮಿಯ ಹೂಡಿಕೆ ಲಾಭಪ್ರದ. ಸಂಬಂಧಿಕರಿಂದ ಸಂಜೆಯ ಆಮಂತ್ರಣ ಸಿಗಬಹುದು. ಪ್ರೀತಿಯಲ್ಲಿ ಬಲವಂತ ಬೇಡ. ಸಹೋದರರೊಂದಿಗೆ ಸಂತೋಷ ಸಮಯ ಮೀಸಲಾಗುತ್ತದೆ. ಸಂಗಾತಿಯ ವರ್ತನೆ ಒತ್ತಡ ತರಬಹುದು. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಚರ್ಚೆ ಸಾಧ್ಯ. ಹೊಸ ಉತ್ಸಾಹದ ಬೀಜಗಳನ್ನು ಬಿತ್ತಲು ಇಂದು ಉತ್ತಮ ದಿನವಾಗಿದೆ. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾ ಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು.