AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿಯ ಆರ್ಭಟಕ್ಕೆ ಪಂತ್ ದಾಖಲೆ ಬ್ರೇಕ್

South Africa U19 vs India U19, 2nd Youth ODI: ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 245 ರನ್​​ ಕಲೆಹಾಕಿದರೆ, ಟೀಮ್ ಇಂಡಿಯಾ 23.3 ಓವರ್​ಗಳಲ್ಲಿ 176 ರನ್​ ಬಾರಿಸಿ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ 8 ವಿಕೆಟ್​​ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Jan 07, 2026 | 7:27 AM

Share
ವೈಭವ್ ಸೂರ್ಯವಂಶಿಯ (Vaibhav Suryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ರೆಕಾರ್ಡ್ ನಿರ್ಮಾಣವಾಗಿದ್ದು ಅಂಡರ್-19 ಪಂದ್ಯದಲ್ಲಿ. ಅದು ಸಹ ರಿಷಭ್ ಪಂತ್ ಅವರ ಭರ್ಜರಿ ದಾಖಲೆಯನ್ನು ಮುರಿದು ವೈಭವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

1 / 5
ಸೌತ್ ಆಫ್ರಿಕಾ ವಿರುದ್ಧದ ಯೂತ್ ಒಡಿಐ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಅಬ್ಬರದ ಬ್ಯಾಟಿಂಗ್​​ನೊಂದಿಗೆ ಯುವ ಎಡಗೈ ದಾಂಡಿಗ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

2 / 5
ಈ ಅರ್ಧಶತಕದೊಂದಿಗೆ ಯೂತ್ ಒಡಿಐ ಕ್ರಿಕೆಟ್​​ನಲ್ಲಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೆಸರಿನಲ್ಲಿತ್ತು.

3 / 5
2016 ರಲ್ಲಿ ನೇಪಾಳ ಅಂಡರ್-19 ತಂಡದ ವಿರುದ್ಧ ರಿಷಭ್ ಪಂತ್ ಕೇವಲ 18 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಭರ್ಜರಿ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 5
ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ ಅಂತಿಮವಾಗಿ ಕಲೆಹಾಕಿದ್ದು ಬರೋಬ್ಬರಿ 68 ರನ್​​ಗಳು. ಅದು ಕೂಡ ಕೇವಲ 24 ಎಸೆತಗಳಲ್ಲಿ. ಈ ವೇಳೆ ಅವರ ಬ್ಯಾಟ್​​ನಿಂದ ಸಿಡಿರುವುದು 10 ಭರ್ಜರಿ ಸಿಕ್ಸ್ ಹಾಗೂ 1 ಫೋರ್. ಈ ಸಿಡಿಲಬ್ಬರದ ಬ್ಯಾಟಿಂಗ್​​ ಮೂಲಕ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರವಹಿಸಿದ್ದಾರೆ.

5 / 5