ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ದೇಶಾದ್ಯಂತ ಹೆಸರು ಹೊಂದಿರುವ ಅವರು ಕೊಡಗಿನ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣ ಎಲ್ಎಲ್ಪಿ’ ಹೆಸರಿನಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈವರೆಗೆ 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ.
ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು (Kodagu) ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ದೇಶಾದ್ಯಂತ ಹೆಸರು ಹೊಂದಿರುವ ಅವರು ಕೊಡಗಿನ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣ ಎಲ್ಎಲ್ಪಿ’ ಹೆಸರಿನಲ್ಲಿ ಆದಾಯ ತೆರಿಗೆ (Income Tax) ಪಾವತಿ ಮಾಡುತ್ತಿದ್ದಾರೆ. ಈವರೆಗೆ 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ 3 ಅವಧಿಯಲ್ಲಿ ತೆರಿಗೆ ಪಾವತಿ ಮಾಡಲಾಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಮಾರ್ಚ್ ತಿಂಗಳವರೆಗೆ 4ನೇ ತ್ರೈಮಾಸಿಕ ತೆರಿಗೆ ಪಾವತಿಸಲಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಬಲವಾಗಿದೆ. ವಿಜಯ್ ದೇವರಕೊಂಡ ಜೊತೆ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
