AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು!

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು!

ಸುಷ್ಮಾ ಚಕ್ರೆ
|

Updated on: Jan 06, 2026 | 9:39 PM

Share

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಿಂದ 14 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಹಿಳೆಯರು ಕದ್ದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳತನವು 14 ನಿಮಿಷಗಳ ಕಾಲ ನಡೆಯಿತು. ಆ ಮಹಿಳೆಯರು ಯಾರಿಗೂ ಗೊತ್ತಾಗದಂತೆಯೇ ಕಳ್ಳತನ ಮಾಡಿದ್ದರು. ಆದರೆ, ಸಿಸಿಟಿವಿಯಲ್ಲಿ ಅವರ ಕಳ್ಳತನ ಸೆರೆಯಾಗಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಪ್ರಯಾಗ್‌ರಾಜ್, ಜನವರಿ 6: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಅಂಗಡಿಯಿಂದ ಮೂವರು ಮಹಿಳೆಯರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಈ ಕಳ್ಳತನವು 14 ನಿಮಿಷಗಳ ಕಾಲ ನಡೆಯಿತು. ಆ ಮಹಿಳೆಯರು ಯಾರಿಗೂ ಗೊತ್ತಾಗದಂತೆಯೇ ಕಳ್ಳತನ ಮಾಡಿದ್ದರು. ಆದರೆ, ಸಿಸಿಟಿವಿಯಲ್ಲಿ ಅವರ ಕಳ್ಳತನ ಸೆರೆಯಾಗಿದೆ.

ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ ಗಾಜಿನ ಕೌಂಟರ್ ಎದುರು ಕುಳಿತಿದ್ದ ಮೂವರು ಮಹಿಳೆಯರು ಚಿನ್ನದ ಕಿವಿಯೋಲೆಗಳನ್ನು ನೋಡುತ್ತಿದ್ದರು. ಆಗ ಒಬ್ಬ ಮಹಿಳೆ ಸೇಲ್ಸ್​​ನವರ ಗಮನವನ್ನು ಬೇರೆಡೆಗೆ ಸೆಳೆಯುತ್ತಾಳೆ. ಆಗ ಒಬ್ಬಳು ಮಹಿಳೆ ಗಾಜಿನ ಕೌಂಟರ್ ಒಳಗಿನಿಂದ ಆಭರಣಗಳ ಪೆಟ್ಟಿಗೆಯನ್ನು ತೆಗೆದುಕೊಂಡು ಅದನ್ನು ಇನ್ನೊಬ್ಬಳಿಗೆ ನೀಡುತ್ತಾಳೆ. ಅವಳು ಅದನ್ನು ತನ್ನ ಶಾಲಿನೊಳಗೆ ಮರೆಮಾಡುತ್ತಾಳೆ. ಈ ವಿಷಯ ಅಲ್ಲಿದ್ದವರ ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ, ಒಂದು ಟ್ರೇ ಫುಲ್ ಆಭರಣ ನಾಪತ್ತೆಯಾಗಿದ್ದರಿಂದ ಸಿಸಿಟಿವಿ ಪರಿಶೀಲಿಸಿದಾಗ ಈ ಕಳ್ಳತನ ಬಯಲಾಗಿದೆ. ಆ ಮಹಿಳೆಯರನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ