ಅಭಿನವ ಹಾಲಶ್ರೀ ಸ್ವಾಮಿಯನ್ನು ನಗರದ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು
ನಿನ್ನೆ ಒಡಿಶಾದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಹಿರೇಹಡಗಲಿ ಹಾಲುಮಠದ ಅಭಿನವ ಹಾಲಶ್ರೀ ಸ್ವಾಮಿಯನ್ನು ಇಂದು ನಗರದ 19 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಸ್ವಾಮಿ ಮೂರನೇ ಆರೋಪಿಯಾಗಿದ್ದಾರೆ.
ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಅವಳ ತಂಡದ ವಂಚನೆಗಳ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ನಿನ್ನೆ ಒಡಿಶಾದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಹಿರೇಹಡಗಲಿ ಹಾಲುಮಠದ ಅಭಿನವ ಹಾಲಶ್ರೀ ಸ್ವಾಮಿಯನ್ನು (Abhinava Halashri Swamy) ಇಂದು ನಗರದ 19 ನೇ ಎಸಿಎಂಎಂ ನ್ಯಾಯಾಲಯದಲ್ಲಿ (19th ACMM Court) ಹಾಜರುಪಡಿಸಲಾಯಿತು. ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಸ್ವಾಮಿಯನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕೆಂಬ ಮನವಿಯನ್ನು ಸಿಸಿಬಿ ಪೊಲೀಸರು ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೈಂದೂರು ಅಸೆಂಬ್ಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಸ್ಥಳೀಯ ಉದ್ಯಮಿ ಗೋವಿಂದ ಬಾಬು ಪೂಜಾರಿ ಎನ್ನುವವರಿಂದ 5 ಕೋಟಿ ರೂ. ಹಣವನ್ನು ಪೀಕಿರುವರೆಂದು ಉದ್ಯಮಿ ದೂರು ಸಲ್ಲಿಸಿದ ಬಳಿಕ ಚೈತ್ರಾ ಕುಂದಾಪುರ ಮತ್ತು ಅಕೆಯ ಕೆಲ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos