AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಆರ್ಥಿಕ ಬಿಕ್ಕಟ್ಟು ಸ್ನೇಹಿತರ ಸಹಕಾರದಿಂದ ಸರಿಯಾಗುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ, ಭಾನುವಾರ ಮಾನಸಿಕ ದುರ್ಬಲತೆ, ಪ್ರೇಮದಲ್ಲಿ ಕೋಪ, ವಿದ್ಯಾಭ್ಯಾಸಕ್ಕೆ ತೊಡಕು ಇವು ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿಮ್ಮ ಆರ್ಥಿಕ ಬಿಕ್ಕಟ್ಟು ಸ್ನೇಹಿತರ ಸಹಕಾರದಿಂದ ಸರಿಯಾಗುವುದು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 20, 2025 | 1:10 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ಸಿದ್ಧ, ಕರಣ: ಭದ್ರ, ಸೂರ್ಯೋದಯ – 06:17 am, ಸೂರ್ಯಾಸ್ತ – 06:46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:13 – 18:46, ಯಮಘಂಡ ಕಾಲ 12:32 – 14:05, ಗುಳಿಕ ಕಾಲ 15:39 – 17:13

ತುಲಾ ರಾಶಿ: ಮನೋನಿಗ್ರಹ ಸಾಧ್ಯವಿಲ್ಲದ ಕಷ್ಟದಿಂದ ದುರಭ್ಯಾಸ ಬೆಳೆಸಿಕೊಳ್ಳುವ ಸಾಧ್ಯತೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಹೊಸ ಒಪ್ಪಂದಗಳು ಲಾಭದಾಯಕವಾಗಿ ತೋರುತ್ತಿದ್ದರೂ ಆತುರಾತುರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ವ್ಯಕ್ತಿ ನಿಮ್ಮ ಸಂಬಂಧದ ಮಧ್ಯೆ ಬರಬಹುದು. ನೆರೆಹೊರೆಯವರು ಸಂಬಂಧದಲ್ಲಿ ಗೊಂದಲ ಉಂಟುಮಾಡಲು ಯತ್ನಿಸಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆ ಆಗಬಹುದು. ಹಳೆಯ ಘಟನೆಗಳು ಹತಾಶೆ ಮಾಡಬಹುದು. ನಿಮ್ಮ ಹರುಷಕ್ಕೆ ಹತ್ತರು ದಾರಿಗಳಿವೆ. ನಿಮ್ಮ ಇಂದಿನ ಉದ್ಯಮಕ್ಕೆ ಕೆಲವು ಅನಗತ್ಯ ಸಲಹೆಗಳು ಬರಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡುವ ಸನ್ನಿವೇಶವು ಬರಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು.

ವೃಶ್ಚಿಕ ರಾಶಿ: ಮೋಜಿಗಾಗಿ ದೂರ ಪ್ರಯಾಣ, ನಿರಾಶೆಯಿಂದ ಹಿಂದಿರುಗುವಿರಿ. ಭವಿಷ್ಯದ ಬಗ್ಗೆ, ಮಕ್ಕಳ ಬಗ್ಗೆ ಯೋಚನೆ ಅಧಿಕವಿರುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ಆರೋಗ್ಯ ಸುಧಾರಿಸಲು ಸಾಕಷ್ಟು ಸಮಯ ನಿಮಗೆ ಸಿಗುತ್ತದೆ. ಮಕ್ಕಳಿಂದ ಸಂತೋಷದ ಸುದ್ದಿ ಬರಬಹುದು. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಳೆ ಸ್ನೇಹಿತರೊಂದಿಗೆ ಇಂದು ಭೇಟಿಯಾಗುವ ಅವಕಾಶವಿದೆ. ವೈವಾಹಿಕ ಜೀವನದ ಬಗ್ಗೆ ಹೊಸ ಹಿತವಚನಗಳು ನಿಮ್ಮ ಮನಸ್ಸನ್ನು ತಂಪು ಮಾಡಬಹುದು. ಇಂದು ನೀವು ಖರೀದಿಸುವ ವಸ್ತುವಿಗೆ ಹೆಚ್ಚು ಹಣವನ್ನು ಕೊಟ್ಟು ಸಂಪತ್ತನ್ನು ಹಾಳುಮಾಡಿಕೊಳ್ಳುವಿರಿ. ಅಪರಿಚಿತರ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡುವಿರಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸಿ. ಹಿನ್ನಡೆಯಾದ ಕಾರ್ಯಕ್ಕೆ ಬೇಸರ ಬೇಡ. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ.

ಧನು ರಾಶಿ: ಭೂಮಿಗೆ ಸಂಬಂಧಿಸಿದಂತೆ ಆತ್ಮೀಯರ ಜೊತೆ ಕಲಹ. ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಹೇಳಿಕೊಳ್ಳುವಿರಿ. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಅತ್ಯಂತ ಪ್ರಭಾವಿ ಜನರ ಬೆಂಬಲದಿಂದ ನಿಮ್ಮ ನೈತಿಕ ಸ್ಥೆರ್ಯವನ್ನು ಹೆಚ್ಚಿಸುತ್ತದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಸ್ವಲ್ಪ ಸಮಯವನ್ನು ನಿಮಗಾಗಿ ಇಡುವಿರಿ. ನೀವು ಕೆಟ್ಟ ಸಮಯದಲ್ಲಿರುವವರನ್ನು ದೂರವಿರಿಸುವಿರಿ. ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಕಡಿಮೆ ಇರುವುದು. ನಿಮ್ಮ ಇಂದಿನ ಪ್ರಯತ್ನವು ನೂರಕ್ಕೆ ನೂರರಷ್ಟು ಇದ್ದರೂ ಫಲವು ಪೂರ್ಣವಾಗಿ ಸಿಗದಿರುವುದು ನಿಮಗೆ ಚಿಂತೆಯಾಗಬಹುದು. ವ್ಯವಹಾರದಲ್ಲಿ ನಿಮಗೆ ವಿಶ್ವಾಸವು ಸಾಲದು. ಯಾರ ಬಳಿಯೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ನಿಮ್ಮ ಎಲ್ಲ ಶ್ರಮದಾಯಕ ಯೋಜನೆ ಅಂತಿಮವಾಗಿ ಫಲವನ್ನು ನೀಡಲಿದೆ.

ಮಕರ ರಾಶಿ: ಸುಖಭೋಗವನ್ನು ಅನುಭವಿಸುವ ಮನಃಸ್ಥಿತಿ ಇರಲಿದೆ. ಇಂದು ಕುಟುಂಬದ ಜೊತೆ ದಿನದ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ಒಳ್ಳೆಯ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ನೀವು ಕೆಲವು ಗಂಭೀರ ತೊಂದರೆಗಳನ್ನು ಎದುರಿಸಲು ಸಾಧ್ಯತೆಯಿರುವುದರಿಂದ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಸೌಂದರ್ಯದಿಂದ ನಿಮ್ಮನ್ನು ಮರೆಯುವ ಸಾಧ್ಯತೆ ಇದೆ. ವಿಶೇಷವಾಗಿ ಕೋಪವನ್ನು, ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ನೀವು ಪ್ರಾಮುಖ್ಯತೆ ನೀಡುವ ಸಂಬಂಧಗಳಿಗೆ ಸಮತೋಲನ ಅಗತ್ಯ ಹಾಗೂ ಸಣ್ಣ ಬೆಳವಣಿಗೆಯೂ ಭವಿಷ್ಯದ ಬದಲಾವಣೆಗಳಿಗೆ ದಾರಿ. ಹಿಂದೆ ಕೂಡಿಟ್ಟ ಹಣವು ಕೈ ಸೇರುವ ಸುದಿನ. ಸ್ತ್ರೀಯರಿಗೆ ಶರೀರಪೀಡೆ. ತುರ್ತು ಚಿಕಿತ್ಸೆಯ ಅಗತ್ಯ ಕಾಣಿಸಬಹುದು. ಇಂದು ನೀವಾಡುವ ಮಾತಿನಿಂದ ಕಲಹವಾಗಬಹುದು. ಅನರ್ಥಕ್ಕೆ ಅವಕಾಶ ಮಾಡಿಕೊಡದೇ ಸರಿಯಾಗಿರಿ. ಅಧಿಕ ಹಣವನ್ನು ನೀವು ಕೊಡಬೇಕಾಗಬಹುದು. ಕಾರ್ಯವಿಧಾನದ ಬದಲಾವಣೆಯಿಂದ ನಿಮಗೆ ಸಂತೋಷವಾಗಲಿದೆ.

ಕುಂಭ ರಾಶಿ: ಅನಿರೀಕ್ಷತ ಧನಲಾಭವನ್ನು ಹೂಡಿಕೆ ಮಾಡುವಿರಿ. ಆಪ್ತರ ಹೆಸರನಲ್ಲಿ ಯಾರಿಗಾದರೂ ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಿ. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ. ಜೀವನದ ನೆಮ್ಮದಿಗಾಗಿ ಮನಸ್ಸನ್ನು ಬಲಪಡಿಸಿಕೊಳ್ಳಿ. ನಿಮ್ಮ ಆರ್ಥಿಕ ಬಿಕ್ಕಟ್ಟು ಸ್ನೇಹಿತರ ಸಹಕಾರದಿಂದ ಸರಿಯಾಗುವುದು. ನಿಮ್ಮ ನಂಬಿಕೆಗೆ ದ್ರೋಹವುಂಟಾದೀತು. ನೀವು ತೆಗೆದುಕೊಳ್ಳುವ ನಿರ್ಧಾರವು ತಪ್ಪಾದೀತು ಎಂಬ ಆತಂಕವು ಇರಲಿದೆ. ರೋಗಬಾಧೆಯಿಂದ ನೀವು ಖಿನ್ನರಾಗುವಿರಿ. ಯಾವ ವಿಚಾರಕ್ಕೂ ಗೊಂದಲವಾಗುವಂತೆ ಇರುವುದು ಬೇಡ. ಇನ್ನೊಬ್ಬರ ನಿರ್ಧಾರಗಳನ್ನು ನಿಯಂತ್ರಿಸುವ ಮೂಲಕ ನೀವು ಮೆಚ್ಚುಗೆಯನ್ನು ಪಡೆಯುವುದಿಲ್ಲ.

ಮೀನ ರಾಶಿ: ಸಾಲ ಬಾಧೆಯ ಜೊತೆ ಅರ್ಥನಾಶದಿಂದ ಚಿಂತೆ ಹೆಚ್ಚು. ಹೀಗಿದ್ದರೂ ಚಿತ್ತ ತಾಳ್ಮೆಯನ್ನು ಬಿಡದಿರಲಿ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ. ಉಪಕಾರಕ್ಕೆ ಸುಫಲದ ಪ್ರಾಪ್ತಿ. ಕೆಲಸದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಮತ್ತು ಮನೆಯಲ್ಲಿ ಬೇಜವಾಬ್ದಾರಿ. ಇದರಿಂದ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಇಂದು ನೀವು ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ತಮ್ಮ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುವುದು ಉತ್ತಮ. ನಿಮ್ಮ ವ್ಯಕ್ತಿತ್ವವು ಇತರರಿಗೆ ಇಷ್ಟವಾಗುವುದು. ಇಂದು ವ್ಯಾಪಾರದಲ್ಲಿ ಧನ ಲಾಭವು ಆಗಲಿದ್ದು ಅದು ನಿಮ್ಮ ಮೇಲೆ‌ ಸತ್ಪರಿಣಾಮವನ್ನು ಬೀರಬಹುದು. ಅನಗತ್ಯ ವಿಚಾರಗಳ ಬಗ್ಗೆ ಆಲೋಚನೆ, ಆಸಕ್ತಿಯು ಹೆಚ್ಚಾಗುವುದು. ದಾಂಪತ್ಯದಲ್ಲಿ ಪ್ರೀತಿಯು ಹೆಚ್ಚಾಗಬಹುದು. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ.