ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 1.5 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇದೀಗ ಚಿನ್ನ ಅಕ್ರಮ ಸಾಗಾಟ ಹೆಚ್ಚಾಗತೊಡಗಿದೆ. ಬುಧವಾರವಷ್ಟೇ ದುಬೈಯಿಂದ ಬಂದ ವ್ಯಕ್ತಿಯೊಬ್ಬನಿಂದ 40 ಐಫೋನ್ ಹಾಗೂ 5 ಆ್ಯಪಲ್ ವಾಚ್ಗಳನ್ನು ವಶಕ್ಕೆ ಪಡೆದಿದ್ದ ಕಸ್ಟಮ್ಸ್ ಅಧಿಕಾರಿಗಳು, ಇಂದು 1.68 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಬೆಂಗಳೂರು, ಜುಲೈ 25: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.68 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನವನ್ನು ಜಪ್ತಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ಚಿನ್ನ ಸಾಗಿಸುತ್ತಿದ್ದದ್ದ ಮುರ್ತಾಜಿಮ್, ಶೇಖ್ ಮೊಹಮ್ಮದ್ ಇಮ್ರಾನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ದುಬೈನಿಂದ ಬೆಂಗಳೂರಿಗೆ EK 564 ವಿಮಾನದಲ್ಲಿ ಬಂದಿದ್ದರು.
ಆರಪಿಗಳು ವಿದೇಶದಿಂದ ಬಟ್ಟೆಗಳಲ್ಲಿ ಮರೆಮಾಚಿ ಚಿನ್ನ ತಂದಿದ್ದರು. ಸದ್ಯ ಇಬ್ಬರನ್ನೂ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ದುಬೈಯಿಂದ ಬಂದ ವ್ಯಕ್ತಿಯೊಬ್ಬರ ಬ್ಯಾಗ್ನಲ್ಲಿ ಬರೋಬ್ಬರಿ 40 ಐಫೋನ್ ಹಾಗೂ 5 ಆ್ಯಪಲ್ ವಾಚ್ಗಳು ಕಂಡುಬಂದು ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಪ್ರಕರಣ ಬುಧವಾರವಷ್ಟೇ ವರದಿಯಾಗಿತ್ತು. ಇದೀಗ ಅದರ ಬೆನ್ನಲ್ಲೇ 1.68 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.
ಹಿಟ್ ಆ್ಯಂಡ್ ರನ್: ವೃದ್ಧ ಗಂಭೀರ
ಬೆಂಗಳೂರಿನ ಭಾಷ್ಯಂ ಸರ್ಕಲ್ ಸಮೀಪದ ರಸ್ತೆಯಲ್ಲಿ ಪಾದಚಾರಿ ವಯೋವೃದ್ಧರೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ವಾಹನ ಸವಾರ ಪರಾರಿಯಾಗಿದ್ದಾನೆ. 94 ವರ್ಷದ ರಾಜನ್ ಎಂಬವರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ತಲೆಗೆ ಏಟಾಗಿದೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಸ್ಟೇಬಲ್ ಮಲ್ಲಿಕಾರ್ಜುನ್ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜನ್ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದರು.
ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಬಂದವನಿಂದ 40 ಐಪೋನ್, 5 ಆ್ಯಪಲ್ ವಾಚ್ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು
ಅಪಘಾತದ ದೃಶ್ಯ ಏರಿಯಾದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಬುಧವಾರ ಬೆಳಗ್ಗೆ 10:40 ರ ವೇಳೆಗೆ ಅಪಘಾತ ಸಂಭವಿಸಿತ್ತು. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಳುವಿಗೆ ಚಿಕಿತ್ಸೆ ಮುಂದುವರಿದಿದೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ