ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ಗ್ರಾಹಕರ ಮೇಲೆ ಬೌನ್ಸರ್​ಗಳಿಂದ ಹಲ್ಲೆ, ಮತ್ತೊಂದೆಡೆ ಬೈಕ್ ವೀಲಿಂಗ್ ಮಾಡ್ತಿದ್ದ ಪುಂಡರಿಂದ ಸವಾರನಿಗೆ ಬೆದರಿಕೆ

ಅಶೋಕನಗರದಲ್ಲಿರುವ ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ಸ್ನೇಹಿತರು, ತಡರಾತ್ರಿವರೆಗೂ ಪಬ್​​ನಲ್ಲಿ ಮದ್ಯ ಸೇವನೆ ಮಾಡಿದ್ದು ಕುಡಿದ ಅಮಲಿನಲ್ಲಿ ಬೌನ್ಸರ್​ಗಳ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ರಸ್ತೆಯಲ್ಲಿ ವೀಲಿಂಗ್ ಮಾಡಿದ ಪುಂಡರು ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದಲ್ಲದೆ ನಡುರಸ್ತೆಯಲ್ಲೇ ಚಾಕು ತೋರಿಸಿ ಧಮ್ಕಿ ಹಾಕಿ, ಕಾರೊಂದಕ್ಕೆ ಒದ್ದಿದ್ದಾರೆ.

ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ಗ್ರಾಹಕರ ಮೇಲೆ ಬೌನ್ಸರ್​ಗಳಿಂದ ಹಲ್ಲೆ, ಮತ್ತೊಂದೆಡೆ ಬೈಕ್ ವೀಲಿಂಗ್ ಮಾಡ್ತಿದ್ದ ಪುಂಡರಿಂದ ಸವಾರನಿಗೆ ಬೆದರಿಕೆ
ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ಗ್ರಾಹಕರ ಮೇಲೆ ಬೌನ್ಸರ್​ಗಳಿಂದ ಹಲ್ಲೆ
Follow us
Shivaprasad
| Updated By: ಆಯೇಷಾ ಬಾನು

Updated on: Jul 25, 2024 | 11:32 AM

ಬೆಂಗಳೂರು, ಜುಲೈ.25: ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಕುಡಿದ ಅಮಲಿನಲ್ಲಿ ಗ್ರಾಹಕರ ಮೇಲೆ ಪಬ್ ಬೌನ್ಸರ್​ಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅಶೋಕನಗರದ ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ನಡೆದಿದೆ. ಮತ್ತೊಂದೆಡೆ ವೀಲಿಂಗ್ (Wheeling) ಮಾಡುತ್ತ ಇತರೆ ವಾಹನ ಸವಾರರಿಗೆ ತೊಂದರೆ ಕೊಡುವ ಪುಂಡರ ಹಾವಳಿ ಹೆಚ್ಚಾಗಿದೆ.

ಬೆಂಗಳೂರಿನ ಅಶೋಕನಗರದಲ್ಲಿರುವ ಆರ್ಬರ್ ಬ್ರೀವಿಂಗ್ ಪಬ್​ನಲ್ಲಿ ಗಲಾಟೆ ನಡೆದಿದೆ. ಆರ್ಬರ್ ಬ್ರೀವಿಂಗ್ ಪಬ್​ಗೆ ಹೋಗಿದ್ದ ಸ್ನೇಹಿತರು, ತಡರಾತ್ರಿವರೆಗೂ ಪಬ್​​ನಲ್ಲಿ ಮದ್ಯ ಸೇವನೆ ಮಾಡಿದ್ದು ಕುಡಿದ ಅಮಲಿನಲ್ಲಿ ಬೌನ್ಸರ್​ಗಳ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ 6-8 ಜನ ಬೌನ್ಸರ್​​ಗಳು ರಾಡ್, ಹೆಲ್ಮೆಟ್​​ನಿಂದ ಹಲ್ಲೆ ಮಾಡಿದ್ದಾರೆ. ಗಲಾಟೆ ಆಗುವಾಗಲೇ ಸ್ಥಳಕ್ಕೆ ಆಶೋಕನಗರ ಪೊಲೀಸರು ಆಗಮಿಸಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಗಲಾಟೆ ವೇಳೆ ಹಲ್ಲೆಗೊಳಗಾದ ಓರ್ವ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಯ ವಿಡಿಯೋ ಪೊಲೀಸ್ ಆಯುಕ್ತರಿಗೆ ಟ್ಯಾಕ್ ಮಾಡಿ ದೂರು ನೀಡಲಾಗಿದೆ. ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರು; ಅಂಗಾಂಗ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದ ವ್ಯಕ್ತಿ

ಬೆಂಗಳೂರಿನಲ್ಲಿ ಹದ್ದು ಮೀರುತ್ತಿರುವ ಡೆಡ್ಲಿ ವೀಲರ್ಸ್ ಹಾವಳಿ

ಇನ್ನು ಮತ್ತೊಂದೆಡೆ ಸಿಲ್ಕ್ ಬೋರ್ಡ್ ಸಮೀಪದ ಮಾರೇನಹಳ್ಳಿ ಬಳಿ ಪುಂಡರು ವೀಲಿಂಗ್ ಮಾಡಿದ್ದು ಇದರಿಂದ ಸಹ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ತೊಂದರೆಗೆ ಒಳಗಾದ ವಾಹನ ಸವಾರರು ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್‌ ಮಾಡಿ ದೂರು ದಾಖಲಿಸಿದ್ದಾರೆ.

ಇನ್ನು ರಸ್ತೆಯಲ್ಲಿ ವೀಲಿಂಗ್ ಮಾಡಿದ ಪುಂಡರು ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದಲ್ಲದೆ ನಡುರಸ್ತೆಯಲ್ಲೇ ಧಮ್ಕಿ ಹಾಕಿ, ಕಾರೊಂದಕ್ಕೆ ಒದ್ದಿದ್ದಾರೆ. ತ್ರಿಬಲ್ ರೈಡಿಂಗ್ ವೀಲಿಂಗ್ ಮಾಡಿದಲ್ಲದೆ ಚಾಕು ತೋರಿಸಿ ಕಾರು ಚಾಲಕನಿಗೆ ಧಮ್ಕಿ ಹಾಕಿದ್ದಾರೆ. ಎರಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರು ಜನ ಪುಂಡರು ಈ ಕೃತ್ಯ ಎಸಗಿದ್ದಾರೆ.

ಕಾರು ಚಾಲಕನಿಗೆ ಧಮ್ಕಿ ಹಾಕಿದ ಬಳಿಕ ಮತ್ತೆ ವ್ಹೀಲಿಂಗ್ ಶುರು ಮಾಡಿಕೊಂಡು ಹೋಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್‌ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ