ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರು; ಅಂಗಾಂಗ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದ ವ್ಯಕ್ತಿ

ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಚಂದ್ರು ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ನಾಲ್ವರ ಬದುಕಿಗೆ ಬೆಳಕಾಗಿದ್ದಾರೆ. ಚಂದ್ರು ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಚಂದ್ರು ಅವರಿಗೆ ಜು.19ರಂದು ಬೆಳಗ್ಗೆ ಹೆಬ್ಬಾಳ್ ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಬಳಿ ಅಪಘಾತವಾಗಿತ್ತು.

ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದ್ರು; ಅಂಗಾಂಗ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದ ವ್ಯಕ್ತಿ
ಮೆದುಳು ನಿಷ್ಕ್ರಿಯ ಹಿನ್ನೆಲೆ ಅಂಗಾಂಗ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದ್ರು
Follow us
| Updated By: ಆಯೇಷಾ ಬಾನು

Updated on: Jul 25, 2024 | 10:56 AM

ಮೈಸೂರು, ಜುಲೈ.25: ಅಪಘಾತದಲ್ಲಿ (Accident) ತಲೆಗೆ ಗಂಭೀರ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆ ಅಂಗಾಂಗ ದಾನ (Organ Donation) ಮಾಡಿ ಚಂದ್ರು ಎನ್ನುವವರು ನಾಲ್ವರ ಬಾಳಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೈಸೂರಿನ ಕೂರ್ಗಳ್ಳಿ ನಿವಾಸಿಯಾಗಿದ್ದ ಚಂದ್ರು (39) ಅವರಿಗೆ ಜು.19ರಂದು ಬೆಳಗ್ಗೆ ಹೆಬ್ಬಾಳ್ ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಬಳಿ ಅಪಘಾತವಾಗಿತ್ತು.

ಬೈಕ್‌ನಲ್ಲಿ ಹೋಗುವಾಗ ಎಲ್‌ಪಿಜಿ ತುಂಬಿದ್ದ ಟ್ರಕ್ ನಡುವೆ ಅಪಘಾತ ಸಂಭವಿಸಿತ್ತು. ಚಂದ್ರುಗೆ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಿದುಳು ನಿಷ್ಕ್ರಿಯ ಹಿನ್ನೆಲೆ ಅಂಗಾಂಗ ದಾನ ಮಾಡಿದ್ದಾರೆ. ಚಂದ್ರುನ ಯಕೃತ್ತು, ಮೂತ್ರಪಿಂಡ ಕಾರ್ನಿಯಾಗಳ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಚಂದ್ರು ಮೃತ ದೇಹಕ್ಕೆ ಅಪೋಲೋ ಆಸ್ಪತ್ರೆ ಸಿಬ್ಬಂದಿ ಸೆಲ್ಯೂಟ್ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ; ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು

ಬುಲೆರೋ ವಾಹನ ಡಿಕ್ಕಿ.. ಪತಿ ಸಾವು.. ಪತ್ನಿಗೆ ಗಾಯ

ಚಿತ್ರದುರ್ಗದ ಚಳ್ಳಕೆರೆ ಬಳಿ ಬುಲೆರೋ ವಾಹನ ಡಿಕ್ಕಿಯಾಗಿ, ಬೈಕ್​ನಲ್ಲಿದ್ದ ಪತಿ ಮೃತಪಟ್ಟರೇ, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. 20 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ ಕೊಂಡ್ಲಹಳ್ಳಿಯಿಂದ ಹಿರಿಯೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಪತಿ ಸಮೀವುಲ್ಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಅಫ್ರಿನಾಗೆ ಗಾಯವಾಗಿದ್ದು, ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಸ್ನೇಹಿತನನ್ನೇ ಕೊಲೆಗೈದಿದ್ದ ನಾಲ್ವರ ಅರೆಸ್ಟ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಸ್ನೇಹಿತನನ್ನೇ ಕೊಲೆಗೈದಿದ್ದ ಹಂತಕರನ್ನ ನಂದಗುಡಿ ಪೊಲೀಸರು‌ ಬಂಧಿಸಿದ್ದಾರೆ. ಕೋಲಾರ ಮೂಲದ ಪ್ರವೀಣ್, ಪ್ರಜ್ವಲ್, ಪ್ರಭು, ಅಶೋಕ್ ಜೈಲುಪಾಲಾಗಿದ್ದಾರೆ. ಕಳೆದ ಜೂನ್12ರಂದು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೋಲಾರ ಮೂಲದ ಭಾರ್ಗವ್​​​ನನ್ನು ಕೊಲೆಗೈದಿದ್ದರು. ಆರೋಪಿ ಪ್ರವೀಣ್ & ಭಾರ್ಗವ್ ನಡುವೆ ಕೆಲಸದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ದ್ವೇಷದಿಂದ ಭಾರ್ಗವ್​​​​​ ಪ್ರಯಾಣಿಸ್ತಿದ್ದ ಕಾರು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ