ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ; ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು

ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಸಿಟಿ ಸ್ಕ್ಯಾನ್ ಕಂಡು ವೈದ್ಯರು ಬೆಚ್ಚಿಬಿದ್ದಿದ್ದಾರೆ. ಈತನ ಹೊಟ್ಟೆಯಲ್ಲಿ 9 ಸೆಂ.ಮೀ ಉದ್ದದ ಗಾಜಿನ ತುಂಡು ಕಂಡು ಬಂದಿದ್ದು, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗಾಜಿನ ತುಂಡನ್ನು ಹೊರತೆಗೆದಿದ್ದಾರೆ.

ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ;  ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು
Follow us
ಅಕ್ಷತಾ ವರ್ಕಾಡಿ
|

Updated on:Jul 25, 2024 | 10:37 AM

ಸಾಮಾನ್ಯವಾಗಿ ಹೊಟ್ಟೆ ನೋವು ಬಂದರೆ ಹೊಟ್ಟೆ ಕೆಟ್ಟಿರಬಹುದು ಎಂದು ಮನೆಮದ್ದುಗಳಿಂದ ಹೊಟ್ಟೆ ನೋವು ಗುಣ ಪಡಿಸುವವರೇ ಹೆಚ್ಚು. ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುವವರು ತೀರಾ ಕಡಿಮೆ. ಇದೀಗ ಅಂತದ್ದೇ ಘಟನೆಯೊಂದು ಭಾರೀ ಸುದ್ದಿಯಲ್ಲಿದೆ. ರಷ್ಯಾದ ವ್ಯಕ್ತಿಯೊಬ್ಬರು ಕಳೆದ 9 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು,ಇದಕ್ಕಾಗಿ ವರ್ಷಗಳಿಂದ ಮನೆಮದ್ದುಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿಗಷ್ಟೇ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಆತನ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಒಳಪಡಿಸಿದ ವೈದ್ಯರು ತನ ಸಿಟಿ ಸ್ಕ್ಯಾನ್ ಕಂಡು ಬೆಚ್ಚಿಬಿದ್ದಿದ್ದಾರೆ.

ವ್ಯಕ್ತಿಯ ಹೆಸರು ಬಹಿರಂಗವಾಗಿಲ್ಲ ಆದರೆ ಆತನಿಗೆ 53 ವರ್ಷ ಎಂದು ಹೇಳಲಾಗಿದೆ. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, ರಷ್ಯಾದ ಕಿರೋವ್ ಕ್ಲಿನಿಕಲ್ ಆಸ್ಪತ್ರೆಗೆ ದಾಖಲಾದ ರೋಗಿಯು ದೀರ್ಘಕಾಲದವರೆಗೆ ಪಕ್ಕೆಲುಬುಗಳ ಅಡಿಯಲ್ಲಿ ದೇಹದ ಬಲಭಾಗದಲ್ಲಿ ತೀವ್ರವಾದ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಿರುವುದಾಗಿ ವೈದ್ಯರಿಗೆ ತಿಳಿಸಿದ್ದಾರೆ. ಆದರೆ ನೋವಿನ ಬಗ್ಗೆ ವೈದ್ಯರ ಬಳಿ ಹೋಗಲೇ ಇಲ್ಲ. ಅಂತಿಮವಾಗಿ 9 ವರ್ಷಗಳ ನಂತರ ಅವರು ವೈದ್ಯರ ಬಳಿಗೆ ಹೋಗಲು ನಿರ್ಧರಿಸಿದ್ದರು, ಈ ವೇಳೆ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಸಿಟಿ ಸ್ಕ್ಯಾನ್​​​ನಲ್ಲಿ ಯಕೃತ್ತಿನ ಬಲಭಾಗದಲ್ಲಿ ಚೂಪಾದ ವಸ್ತು ಸಿಕ್ಕಿಕೊಂಡಿರುವುದು ಕಂಡುಬಂದಿದೆ.

ಇದನ್ನೂ ಓದಿ: ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಸಿಎ ಪಾಸ್​​​; ವಿಡಿಯೋ ವೈರಲ್​​

ಯಕೃತ್ತಿನಲ್ಲಿ 9 ಸೆಂ.ಮೀ ಉದ್ದದ ಗಾಜಿನ ತುಂಡು

ಯಾವಾಗ ಗಾಯವಾಯಿತು ಎಂದು ವೈದ್ಯರು ರೋಗಿಯನ್ನು ಕೇಳಿದಾಗ, ರೋಗಿಯು ತನಗೆ ಯಾವುದೇ ಗಾಯದ ಬಗ್ಗೆ ನೆನಪಿಲ್ಲ, ಯಾವುದೇ ಚೂಪಾದ ವಸ್ತುವು ಚುಚ್ಚಿದ್ದು ನೆನಪಿಲ್ಲ ಎಂದು ಹೇಳಿದ್ದಾರೆ. ನಂತರ, ವೈದ್ಯರು ರೋಗಿಯ ಮೇಲೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ 9 ಸೆಂ.ಮೀ ಉದ್ದದ ಗಾಜಿನ ತುಂಡನ್ನು ಯಕೃತ್ತಿನಿಂದ ಹೊರತೆಗೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 am, Thu, 25 July 24