Video: ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್‌ ಪೇಮೆಂಟ್‌ ಓಕೆ, ರೈಲಿನಲ್ಲಿ ಮಂಗಳಮುಖಿಯ ಡಿಜಿಟಲ್‌ ಭಿಕ್ಷಾಟನೆ

ಇತ್ತೀಚಿಗೆ ಭಿಕ್ಷಾಟನೆ ಕೂಡಾ ಡಿಜಿಟಲೀಕರಣವಾಗುತ್ತದೆ. ಹೌದು ಕ್ಯೂಆರ್‌ ಕೋಡ್‌ ಹಿಡಿದು ಭಿಕ್ಷೆ ಬೇಡುವ ಹಲವಾರು ಭಿಕ್ಷುಕರು ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಂಗಳಮುಖಿಯೊಬ್ಬರು ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಚಿಲ್ಲರೆ ಹಣ ಇಲ್ಲಾಂದ್ರೆ ಆನ್‌ಲೈನ್‌ ಪೇಮೆಂಟ್‌ ಕೂಡಾ ನಡೆಯುತ್ತೇ ಎಂದು ಆನ್‌ಲೈನ್‌ ಹಣವನ್ನು ಸ್ವೀಕಾರ ಮಾಡುವ ಮೂಲಕ ಭಿಕ್ಷೆ ಬೇಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Video: ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್‌ ಪೇಮೆಂಟ್‌ ಓಕೆ, ರೈಲಿನಲ್ಲಿ ಮಂಗಳಮುಖಿಯ ಡಿಜಿಟಲ್‌ ಭಿಕ್ಷಾಟನೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2024 | 5:55 PM

ಇದು ಡಿಜಿಟಲ್‌ ಯುಗ. ಎಲ್ಲೆಡೆ ಯುಪಿಐ ವಹಿವಾಟಿನದ್ದೇ ಕಾರುಬಾರು. ಪ್ರಸ್ತುತ ನಮ್ಮ ಭಾರತದಲ್ಲಿ ಡಿಜಿಟಲೀಕರಣ ಹೆಚ್ಚು ಹೆಚ್ಚು ಪ್ರಗತಿಯನ್ನು ಪಡೆಯುದ್ದು, ಹೆಚ್ಚಿನ ವ್ಯಾಪಾರ ವಹಿವಾಟುಗಳು ನಗದು ರಹಿತವಾಗಿಯೇ ನಡೆಯುತ್ತಿದೆ. ತಳ್ಳು ಗಾಡಿಯಿಂದ ಹಿಡಿದು ಮಾಲ್‌ಗಳವರೆಗೂ ಎಲ್ಲಾ ವ್ಯಾಪಾರ ವಹಿವಾಟು ಈಗ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಬದಲಾಗಿದೆ. ಈಗ ಭಿಕ್ಷಾಟನೆ ಕೂಡಾ ಡಿಜಿಟಲ್‌ ಮಯವಾಗಿದ್ದು, ಕ್ಯೂಆರ್‌ ಕೋಡ್‌ ಭಿಕ್ಷೆ ಬೇಡಿದ ಭಿಕ್ಷುಕರು ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಮಂಗಳಮುಖಿಯೊಬ್ಬರು ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್‌ ಪೇಮೆಂಟ್‌ ಆನ್‌ಲೈನ್‌ ಪೇಮೆಂಟ್‌ ಮಾಡಿದ್ರೂ ನಡೆಯುತ್ತೇ ಎಂದು ಆನ್‌ಲೈನ್‌ ಮೂಲಕ ಹಣವನ್ನು ಸ್ವೀಕಾರ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಮುಂಬೈನಲ್ಲಿ ನಡೆದಿದ್ದು, ಇಲ್ಲಿನ ಲೋಕಲ್‌ ಟ್ರೈನ್‌ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು, ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್‌ ಕೋಡ್‌ ಸ್ಕಾನ್‌ ಮಾಡಿಸಿ ಹಣವನ್ನು ಪಡೆದಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು mumbairailusers ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮುಂಬೈನ್‌ ಲೋಕಲ್‌ ಟ್ರೈನ್‌ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್‌ ಕೋಡ್‌ ತೋರಿಸಿ ಹಣ ಪಾವತಿ ಮಾಡಿ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬಯಲು ಶೌಚಕ್ಕೆ ಹೋದವನ ಮೇಲೆ ದೈತ್ಯ ಹೆಬ್ಬಾವು ಅಟ್ಯಾಕ್, ಎದೆ ಝಲ್‌ ಎನಿಸುವ ದೃಶ್ಯ ವೈರಲ್‌

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಜುಲೈ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಮ್ಮ ಡಿಜಿಟಲ್‌ ಇಂಡಿಯಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಭಿಕ್ಷಾಟನೆಯೂ ಡಿಜಿಟಲೀಕರಣವಾಗಿದೆಯೇʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ