AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಬಳಿಕ ಮನೆ ಬಾಗಿಲು ಮುರಿದು ಕಳ್ಳತನ

ಖದೀಮ ಮನೆಗೆ ನುಗ್ಗಿ ನಿಂಬೆ ಹಣ್ಣು ಹಿಡಿದು ಪೂಜೆ ಮಾಡಿ ಬಳಿಕ ಬಾಗಿಲು ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆದ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು|

Updated on:Jul 28, 2024 | 11:57 AM

Share

ಮೈಸೂರು, ಜುಲೈ,28: ಜಿಲ್ಲೆಯ ಜೆಪಿ ನಗರದ ಎರಡನೇ ಹಂತದಲ್ಲಿ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಮನೆ ಬೀಗ ಮುರಿದು ಕಳ್ಳ (Theft) ಕೈ ಚಳಕ ತೋರಿಸಿದ್ದಾನೆ. ಪೊಲೀಸರ ಮನೆಯಲ್ಲೇ ಕಳ್ಳ ಕಳ್ಳತನ ಮಾಡಿದ್ದಾನೆ. ಇನ್ನು ಕಳ್ಳ ಮನೆಯಲ್ಲಿರುವಾಗಲೇ ಮನೆಗೆ ಮನೆ ಮಾಲೀಕ ವಾಪಾಸಾಗಿದ್ದು ಮಾಲೀಕನನ್ನು ಕಂಡು ಗಾಬರಿಗೊಂಡ ಕಳ್ಳ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾನೆ.

ಇನ್ನು ಎಸ್ಕೇಪ್ ಆಗುವ ಭರದಲ್ಲಿ ಕಳ್ಳತನಕ್ಕೆ ಬಳಸಿದ ಕಬ್ಬಿಣದ ರಾಡ್, ಸಲಾಕೆ, ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್​ಗಳನೆಲ್ಲಾ ಬಿಟ್ಟು ಪರಾರಿಯಾಗಿದ್ದಾನೆ. ಮನೆ ಮಾಲೀಕ ಮನೆಯೊಳಗೆ ಹೋಗಿ ನೋಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ಘಟನೆ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

ಕಳ್ಳತನ ಮಾಡುವಾಗಲೂ ಭಕ್ತಿ ಮೆರೆದ ಚಾಲಾಕಿ ಕಳ್ಳ

ಇನ್ನು ಈ ಚಾಲಾಕಿ ಕಳ್ಳರು ಬಾಗಿಲು ಒಡೆಯೋ ಮುನ್ನ ನಿಂಬೆಹಣ್ಣ ಹಿಡಿದು ನಮಸ್ಕಾರ ಮಾಡಿ ಪೂಜೆ ಮಾಡಿದ ಬಳಿಕ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯ ಹಾಸಿಗೆ ಮೇಲೆ ವೈದ್ಯಕೀಯ ಉಪಕರಣಗಳ ಹಿಡಿದು ಗದ್ದಲ ಸೃಷ್ಟಿಸಿದ ಮಾನಸಿಕ ಅಸ್ವಸ್ಥ

ಎಸ್.ಟಿ.ಪಿ ಟ್ಯಾಂಕ್​ಗೆ ಬಿದ್ದು ಬಾಲಕಿ ಸಾವು

ಎಸ್ ಟಿ ಪಿ ಟ್ಯಾಂಕಿಗೆ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ದೊಡ್ಡತೋಗೂರಿನ ಸೆಲೆಬ್ರಿಟಿ ಪ್ಯಾರಡೈಸ್ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಡಾರ್ಜಿಲಿಂಗ್ ಮೂಲದ ಎಲೀನ ಲೆಪ್ಚ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಆಟವಾಡುತ್ತ ಟ್ಯಾಂಕಿನ ಬಳಿ ಹೋಗಿದ್ದ ಮಗು ಒಳಗೆ ಬಿದ್ದು ಸಾವನ್ನಪ್ಪಿದೆ.

2 ಜಡೆ ಹಾಕಿಲ್ಲವೆಂದು ಕೂದಲಿಗೆ ಕತ್ತರಿ!

2 ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ, ಸಹಶಿಕ್ಷಕಿ ಪವಿತ್ರಾ ಅಮಾನುಷ ಕೃತ್ಯ ಎಸಗಿದ್ದು, ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Sun, 28 July 24