Video: ಮೋದಿ, ಎಲಾನ್ ಮಸ್ಕ್ ಓಣಂ ಹಬ್ಬಕ್ಕೆ ಕೇರಳಕ್ಕೆ ಬಂದ್ರೆ ಹೇಗಿರುತ್ತೆ? ಹೇಗಿದೆ ನೋಡಿ AI ವಿಡಿಯೋ
ಕೆಲ ದಿನಗಳ ಹಿಂದೆ ಜಾಗತಿಕ ನಾಯಕರು ಫ್ಯಾಶನ್ ಶೋ ನಲ್ಲಿ ಭಾಗವಹಿಸಿದರೆ ಹೇಗಿರುತ್ತೆ ಎಂಬುದನ್ನು ತೋರಿಸುವ AI ವಿಡಿಯೋವನ್ನು ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರಧಾನಿ ಮೋದಿ, ಗಾಂಧೀಜಿ, ಎಲೋನ್ ಮಾಸ್ಕ್, ಕಿಮ್ ಜಾಂಗ್ ಉನ್ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಓಣಂ ಹಬ್ಬದಲ್ಲಿ ಪಾಲ್ಗೊಂಡ್ರೆ ಹೇಗಿರುತ್ತೆ ಎಂಬುದನ್ನು ತೋರಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಈ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಆರ್ಟಿಷಿಶೀಯಲ್ ಇಂಟೆಲಿಜೆನ್ಸ್ ಕೂಡಾ ಒಂದು. ಈ ಒಂದು ತಂತ್ರಜ್ಞಾನದಿಂದ ಸಾಧ್ಯವಿಲ್ಲದ್ದನ್ನೂ ಸಾಧ್ಯವಾಗಿಸುವ ಪ್ರಯತ್ನ ನಡೆಯುತ್ತಿರುತ್ತದೆ. ಕೆಲದಿನಗಳ ಹಿಂದೆ ಜಾಗತಿಕ ನಾಯಕರುಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರೆ ಹೇಗಿರುತ್ತೆ ಎಂಬ ಎಐ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಪ್ರಧಾನಿ ಮೋದಿ, ಗಾಂಧೀಜಿ, ಎಲಾನ್ ಮಸ್ಕ್, ಕಿಮ್ ಜಂಗ್ ಉನ್ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಓಣಂ ಹಬ್ಬದಲ್ಲಿ ಪಾಲ್ಗೊಂಡ್ರೆ ಹೇಗಿರುತ್ತೆ ಎಂಬುದನ್ನು ತೋರಿಸುವ ಆರ್ಟಿಷಿಶಿಯಲ್ ಇಂಟೆಲಿಜೆನ್ಸ್ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ರಾಹುಲ್ (rahulbkannikara) ಎಂಬವರು ಪ್ರಧಾನಿ ಮೋದಿ, ಗಾಂಧಿಜೀ, ಎಲೋನ್ ಮಾಸ್ಕ್ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಓಣಂ ಹಬ್ಬದಲ್ಲಿ ಭಾಗಿಯಾದ್ರೆ ಹೇಗಿರುತ್ತದೆ ಎಂಬುದನ್ನು ತೋರಿಸುವ ಸುಂದರ AI ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪ್ರಧಾನಿ ಮೋದಿ, ಗಾಂಧೀಜಿ, ಎಲೋನ್ ಮಾಸ್ಕ್, ಕಿಮ್ ಜಂಗ್ ಉನ್ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಓಣಂ ಹಬ್ಬದಲ್ಲಿ ಪಾಲ್ಗೊಂಡ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪ್ರೀತಿ ಮಾರಾಟಕ್ಕಿದೆ…. ಕಿಸ್ಗೆ 110 ರೂ., ಅಪ್ಪುಗೆಗೆ 11 ರೂ., ಇದು ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೋದಿಯವರ ಲುಕ್ ತುಂಬಾನೇ ಚೆನ್ನಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಷ್ಟು ಅದ್ಭುತವಾಗಿದೆ ಈ ದೃಶ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Wed, 31 July 24