Viral: ಪ್ರೀತಿ ಮಾರಾಟಕ್ಕಿದೆ…. ಕಿಸ್​​ಗೆ 110 ರೂ., ಅಪ್ಪುಗೆಗೆ 11 ರೂ., ಇದು ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌

Street Girlfriends In China: ಈ ಜಗತ್ತಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದ್ರೂ ಸಿಗುತ್ತೆ. ಆದ್ರೆ ಈ ದುಡ್ಡಿನಿಂದ ಪ್ರೀತಿ ಪ್ರೇಮವನ್ನು ಕೊಂಡುಕೊಳ್ಳಲು ಮಾತ್ರ ಸಾಧ್ಯವಿಲ್ಲ ಅನ್ನೋ ಮಾತಿದೆ. ಆದ್ರೆ ಈ ಒಂದು ದೇಶದಲ್ಲಿ ಪ್ರೀತಿ ಕೂಡಾ ದುಡ್ಡಿಗೆ ಮಾರಾಟಕ್ಕಿದ್ದು, ಇಲ್ಲಿ ದುಡ್ಡು ಕೊಟ್ರೆ ನಿಮಗೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ ಕೂಡಾ ಸಿಗ್ತಾಳೆ. ಹೌದು ಸಿಂಗಲ್ಸ್‌ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಮೊರೆ ಹೋಗಬಹುದು.

Viral: ಪ್ರೀತಿ ಮಾರಾಟಕ್ಕಿದೆ.... ಕಿಸ್​​ಗೆ 110 ರೂ., ಅಪ್ಪುಗೆಗೆ 11 ರೂ., ಇದು ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 30, 2024 | 6:24 PM

ಈ ಪ್ರೇಮಿಗಳನ್ನು ನೋಡಿದಾಗ ಕೆಲವೊಬ್ಬ ಸಿಂಗಲ್ಸ್‌ಗಳಿಗೆ ನನಗೊಂದು ಗರ್ಲ್‌ಫ್ರೆಂಡ್‌ ಇರ್ತಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ, ಅದ್ಯಾವಾಗ ನನ್ಗೆ ಗರ್ಲ್‌ಫ್ರೆಂಡ್‌ ಸಿಕ್ತಾಳೋ ಅಂತ ಅಂದುಕೊಳ್ಳುತ್ತಾರೆ. ಇಂತಹ ಸಿಂಗಲ್ಸ್‌ ಹುಡುಗರ ಬೇಜಾರನ್ನು ದೂರ ಮಾಡಲು ಚೀನಾದಲ್ಲಿ ಬಾಡಿಗೆಗೂ ಕೂಡಾ ಗರ್ಲ್‌ಫ್ರೆಂಡ್‌ ಸಿಕ್ತಾಳೆ. ಹೌದು ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌ ಜೋರಾಗುತ್ತಿದ್ದು, ರಸ್ತೆಗಳಲ್ಲಿ ಸ್ಟಾಲ್‌ ಹಾಕಿ ಕುಳಿತು ಯುವತಿಯರು ಪ್ರೀತಿಯನ್ನು ಮಾರಾಟ ಮಾಡುತ್ತಿದ್ದಾರೆ. ಸಿಂಗಲ್ಸ್‌ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಮೊರೆ ಹೋಗಬಹುದು. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿಯ ಪ್ರಕಾರ, ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌ ಚೀನಾದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಒಬ್ಬಂಟಿ ಯುವಕರು ಇದಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಿಂಗಲ್ಸ್‌ ಯುವಕರಿಗೆ ನನಗೂ ಒಂದು ಗೆಳತಿ ಬೇಕು, ಆಕೆಯನ್ನು ತಬ್ಬಿಕೊಳ್ಳಬೇಕು, ಆಕೆಗೆ ಸಿಹಿ ಮುತ್ತನ್ನು ನೀಡ್ಬೇಕು ಅಂದ್ರೆ ಈ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಮೊರೆ ಹೋಗಬಹುದು. ಚೀನಾದ ಶೆನ್ಜೆನ್‌ ನಗರದ ಬೀದಿ ಬೀದಿಯಲ್ಲೂ ಸ್ಟಾಲ್‌ ಹಾಕಿ ಕೂರುವ ಸ್ಟ್ರೀಲ್‌ ಗರ್ಲ್‌ಫ್ರೆಂಡ್‌ಗಳು ಪ್ರೀತಿಯನ್ನೇ ಮಾರಾಟಕ್ಕೆ ಇಟ್ಟಿದ್ದು, ಒಂಟಿತನವನ್ನು ಹೋಗಲಾಡಿಸಲು ಬಯಸುವ ಪುರುಷರು ಅವರ ಬಳಿ ಹೋಗುತ್ತಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್, ಪ್ರಿಯತಮೆಯನ್ನು ಎತ್ತಿಕೊಂಡು ಹೋಗಿ ಜಾರಿ ಬಿದ್ದ ಪ್ರೇಮಿ

ಇಲ್ಲಿ ವಿವಿಧ ಸೇವೆಗೆ ವಿವಿಧ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಅಪ್ಪುಗೆಗೆ 11 ರೂಪಾಯಿ (1 ಯುವಾನ್)‌, ಕಿಸ್‌ಗೆ 110 ರೂ. (10 ಯುವಾನ್)‌, ಜೊತೆಯಾಗಿ ಫಿಲ್ಮ್‌ ನೋಡಲು 150 ರೂ. (15 ಯುವಾನ್)‌ ಪಾವತಿಸಬೇಕಾಗುತ್ತದೆ. ಯಾರಾದರೂ ಮನೆಕೆಲಸಗಳನ್ನು ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಜೊತೆಯಾಗಿ ಮಾಡಲು ಬಯಸಿದೆ ಅವರು 2000 ರೂ. (20 ಯುವಾನ್)‌ ಪಾವತಿ ಮಾಡಬೇಕಾಗುತ್ತದೆ. ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಪ್ರೀತಿಯನ್ನೂ ಮಾರಾಟಕ್ಕೆ ಇಟ್ಟಾಯ್ತು, ಇನ್ನೇನೇನು ನಡೆಯುತ್ತೋ ದೇವ್ರೇ ಬಲ್ಲ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ