Video: ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್, ಪ್ರಿಯತಮೆಯನ್ನು ಎತ್ತಿಕೊಂಡು ಹೋಗಿ ಜಾರಿ ಬಿದ್ದ ಪ್ರೇಮಿ

ಲೋಕದ ಅರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ರೊಮ್ಯಾನ್ಸ್‌ ಮಾಡುತ್ತಾ ನೆಟ್ಟಿಗರು ಕೆಂಗಣ್ಣಿಗೆ ಗುರಿಯಾದ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ನಡುರಸ್ತೆಯಲ್ಲಿ ರೊಮ್ಯಾನ್ಸ್‌ ಮಾಡಲು ಹೋಗಿ ಪ್ರೇಮ ಪಕ್ಷಿಗಳು ಜಾರಿ ಬಿದ್ದು ಪಜೀತಿಗೆ ಸಿಲುಕಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗಿದ್ದು, ಪ್ರೀತಿಲಿ ಬೀಳೋದಂದ್ರೆ ಇದೇ ಇರ್ಬೇಕು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

Video: ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್, ಪ್ರಿಯತಮೆಯನ್ನು ಎತ್ತಿಕೊಂಡು ಹೋಗಿ ಜಾರಿ ಬಿದ್ದ ಪ್ರೇಮಿ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 30, 2024 | 3:37 PM

ಪ್ರೀತಿಯಲ್ಲಿ ಬಿದ್ದವರಿಗೆ ಲೋಕದ ಪರಿಜ್ಞಾನವೇ ಇರುವುದಿಲ್ಲ ಅಂತಾರೆ. ಕೆಲವು ಪ್ರೇಮಿಗಳು ಈ ಮಾತು ನಿಜ ಅಂದು ಆಗಾಗ್ಗೆ ತೋರಿಸಿಕೊಡುತ್ತಿರುತ್ತಾರೆ. ಹೌದು ಕೆಲ ಪ್ರೇಮ ಪಕ್ಷಿಗಳು ಅಕ್ಕಪಕ್ಕ ಜನರಿರುತ್ತಾರೆ ಎಂಬುದನ್ನು ಕೂಡಾ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡ್ತಾ ಇತರರಿಗೂ ಮುಜುಗರ ಉಂಟುಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ನಡುರಸ್ತೆಯಲ್ಲಿ ರೊಮ್ಯಾನ್ಸ್‌ ಮಾಡಲು ಹೋಗಿ ಕೊನೆಗೆ ಇಬ್ಬರೂ ಪಜೀತಿಗೆ ಸಿಲುಕಿದ್ದಾರೆ. ಹೌದು ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಎತ್ತಾಕೊಂಡು ಹೋಗುವಾಗ ಕಾಲು ಜಾರಿ ನಡುರಸ್ತೆಯಲ್ಲಿಯೇ ದೊಪ್ಪನೆ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Ghar Ke Kalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ನಡು ರಸ್ತೆಯಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ರೊಮ್ಯಾನ್ಸ್‌ ಮಾಡ್ತಾ ಆ ಯುವಕ ತನ್ನ ಗರ್ಲ್‌ಫ್ರೆಂಡ್‌ ಅನ್ನು ಎತ್ತಾಕೊಂಡು ಓಡಿ ಹೋಗುವಾಗ ಕಾಲು ಜಾರಿದ ಪರಿಣಾಮ ಆ ಇಬ್ಬರೂ ದೊಪ್ಪನೆ ಕೆಳಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಮಕ್ಕಳ ಮುಂದೆಯೇ ಅಮ್ಮನಿಗೆ ಅವಮಾನ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದ ಗ್ರಾಮಸ್ಥರು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಜುಲೈ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ ಪ್ರೀತಿಲಿ ಬೀಳೋದಂದ್ರೆ ಇದೇ ಇರ್ಬೇಕುʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರೀತಿ ಕುರುಡಲ್ವಾ ಹಾಗಾಗಿ ಅವನು ಎಡವಿ ಬಿದ್ದʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ