
ಕೊವಿಡ್ ವ್ಯಾಕ್ಸಿನೇಶನ್ ಕುರಿತಾಗಿ ಕೆಲವರು ಭಯಗೊಂಡಿದ್ದಾರೆ. ಹೀಗಾಗಿ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸಲು ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಆಟೋ ರಿಕ್ಷಾದ ವಿಭಿನ್ನ ವಿನ್ಯಾಸ ವೈರಲ್ ಆಗಿದೆ. ವ್ಯಾಕ್ಸಿನ್ ಪ್ರಾಮುಖ್ಯತೆಯ ಕುರಿತಾಗಿ ತಿಳಿಹೇಳುವ ಉದ್ದೇಶದಿಂದ ಕಲಾವಿದ ಆಟೋ ರಿಕ್ಷಾವನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಕೊರೊನಾ ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿನ್ಯಾಸಗೊಳಿಸಿದ ಕಲೆಗಾರನಿಗೆ ನೆಟ್ಟಿಗರು ಮೆಚ್ಚುಗೆ ಹೊರಹಾಕಿದ್ದಾರೆ.
ಚೆನ್ನೈ ಮೂಲದ ಗೌತಮ್ ಹೆಸರಿನ ಕಲೆಗಾರ ವ್ಯಾಕ್ಸಿನ್ ವಿನ್ಯಾಸದಿಂದ ಆಟೋ ರಿಕ್ಷಾವನ್ನು ವಿಭಿನ್ನ ಶೈಲಿಯಲ್ಲಿ ರೆಡಿ ಮಾಡಿದ್ದಾರೆ. ತುಂಬಾ ಜನರು ವ್ಯಾಕ್ಸಿನ್ ಕುರಿತಾಗಿ ಭಯ ಹೊಂದಿದ್ದಾರೆ. ಆದರೆ ಅವರು ವ್ಯಾಕ್ಸಿನ್ ಪ್ರಾಮುಖ್ಯತೆಯನ್ನು ತಿಳಿಯಬೇಕಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಗಮನಿಸುವಂತೆ, ಆಟೋ ರಿಕ್ಷಾವನ್ನು ತಿಳಿನೀಲಿ ಬಣ್ಣದಲ್ಲಿ ಪೇಂಟಿಂಗ್ ಮಾಡಲಾಗಿದೆ. ಆಟೋದ ಮೇಲೆ ಕೊರೊನಾ ವ್ಯಾಕ್ಸಿನ್ ನೀಡುವ ಸಿರಿಂಜ್ಗಳ ಅಳವಡಿಕೆ ಮಾಡಲಾಗಿದೆ. ಬಣ್ಣದ ಪೇಪರ್, ಬಾಟಲ್ಗಳನ್ನು ಬಳಸಿ ಆಟೋರಿಕ್ಷಾವನ್ನು ವಿನ್ಯಾಸಗೊಳಿಸಲಾಗಿದೆ.
ಫೋಟೋವನ್ನು ಹಂಚಿಕೊಳ್ಳಲಾಗುತ್ತಿದ್ದಂತೆಯೇ 400ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Coronavirus cases in India: ದೇಶದಲ್ಲಿ 50,040 ಹೊಸ ಕೊವಿಡ್ ಪ್ರಕರಣ ಪತ್ತೆ, 1258 ಮಂದಿ ಸಾವು
ಬೆಂಗಳೂರಿಗರ ಅನುಕೂಲಕ್ಕಾಗಿ ಜನಸಂಪರ್ಕ ದಿನ: ಸಿಲಿಕಾನ್ ಸಿಟಿ ಖಾಕಿ ಪಡೆಯ ಹೊಸ ಪ್ರಯತ್ನ