
ಚೆನ್ನೈ, ಡಿಸೆಂಬರ್ 18: ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗುವ ಮುನ್ನ ಸಾವಿರ ಸಲ ಯೋಚನೆ ಮಾಡ್ತೇನೆ. ಮೊದಲು ನಮ್ಮ ಬಳಿ ಎಷ್ಟು ಹಣ ಇದೆ ಎಂದು ನೋಡಿ ಕೊಳ್ಳುತ್ತೇವೆ. ಇಲ್ಲೊಬ್ಬ ಅನಿವಾಸಿ ಭಾರತೀಯ ಬಾಲಕನು (NRI boy) ಚೆನ್ನೈನ ರೆಸ್ಟೋರೆಂಟ್‌ವೊಂದಕ್ಕೆ (Chennai restaurant) ತೆರಳಿ, ಒಂದಲ್ಲ ಆರೇಳು ಐಟಂ ಆರ್ಡರ್ ಮಾಡಿ ಹೊಟ್ಟೆ ತುಂಬಾ ತಿಂದಿದ್ದಾನೆ. ಬಿಲ್ ತಂದು ಟೇಬಲ್ ಮೇಲೆ ಇಟ್ಟಾಗ ಬಿಲ್ ನೋಡಿ ಶಾಕ್ ಆಗಿದ್ದಾನೆ. ಈ ಕುರಿತಾದ ಸ್ಟೋರಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
deepaimsi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಾಲಕನ ರಿಯಾಕ್ಷನ್ ವಿಡಿಯೋವನ್ನು ಈತನ ತಾಯಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 7 ರಂದು ಗೀತಮ್ ರೆಸ್ಟೋರೆಂಟ್‌ನ ಬಿಲ್ ನೋಡಿ ಅನಿವಾಸಿ ಭಾರತೀಯ ಹುಡುಗನು ಶಾಕ್ ಆಗಿರುವುದನ್ನು ನೋಡಬಹುದು. ಈ ಪುಟ್ಟ ಹುಡುಗನು ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್‌ನಿಂದ ಹೊರ ಬಂದ ಬಳಿಕ ಬಿಲ್ ನೋಡಿದ್ದಾನೆ. ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಹಲವು ಫುಡ್‌ಗಳ ಹೆಸರನ್ನು ಹೇಳುತ್ತಾ ಹೋಗುತ್ತಾನೆ. ಈ ಬಿಲ್‌ನಲ್ಲಿ ಬೇಬಿ ಕಾರ್ನ್ ಮಂಚೂರಿಯನ್, ಬೋಂಡಾ, ದಹಿ ಪಾಪ್ಡಿ, ವಿಶೇಷ ಫಲೂಡಾ, ಇಡ್ಲಿ, ಪನೀರ್ ಮಸಾಲಾ ದೋಸೆ, ವೆಜ್ ನೂಡಲ್ಸ್ ಹೀಗೆ ಖಾದ್ಯಗಳು ಸೇರಿರುವುದನ್ನು ಕಾಣಬಹುದು. ಈ ಎಲ್ಲಾ ಐಟಂಗಳ ಬೆಲೆಯನ್ನು ಹೇಳುತ್ತಾ, ಕೊನೆಗೆ ಒಟ್ಟು ಮೊತ್ತ 30 ನ್ಯೂಜಿಲೆಂಡ್ ಡಾಲರ್ (1,502 ರೂ.) ಆಗಿದೆ ಎಂದು ತಿಳಿದು ಶಾಕ್ ಆಗಿದ್ದಾನೆ. ನ್ಯೂಜಿಲೆಂಡ್ ನಲ್ಲಿ ಕೇವಲ 2-3 ಐಟಂಗಳಿಗೆ 200 ಡಾಲರ್ ಇರುತ್ತದೆ. ಆದರೆ ಭಾರತದಲ್ಲಿ ಆಹಾರದ ಮೇಲಿನ ದರಗಳು ಕಡಿಮೆಯಿದೆ ಎಂದು ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ:ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು
ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬಿಲ್ ನೋಡಿದ ಬಳಿಕ ಈತನ ಮುಖದಲ್ಲಿನ ಖುಷಿ ನೋಡಿ ಎಂದಿದ್ದಾರೆ. ಮತ್ತೊಬ್ಬರು, ಇವನು ಮತ್ತೆಂದೂ ವಿದೇಶಕ್ಕೆ ಹೋಗಲ್ಲ ಎಂದು ಅನಿಸ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಪುಟ್ಟ ಬಾಲಕನಿಗೆ ಭಾರತೀಯ ಸ್ಯಾಲರಿ ಸ್ಲಿಪ್ ಅನ್ನು ತೋರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 18 December 25