Viral:ವಿಚಿತ್ರ ನಂಬಿಕೆ… ಮಗು ಬೆಳ್ಳಗೆ ಸುಂದರವಾಗಿ ಹುಟ್ಟಲು ಇಲ್ಲಿನ ಗರ್ಭಿಣಿ ಮಹಿಳೆಯರು ನಾಯಿ ತಲೆ ಬುರುಡೆ ತಿನ್ನಬೇಕಂತೆ!

| Updated By: ಅಕ್ಷತಾ ವರ್ಕಾಡಿ

Updated on: Sep 05, 2024 | 12:12 PM

ಗರ್ಭಿಣಿಯರ ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದಂತೆ ಹಲವಾರು ಮೂಢನಂಬಿಕೆಗಳಿವೆ. ಕೇಸರಿ ಹಾಲು ಕುಡಿದ್ರೆ ಮಗು ಸುಂದರವಾಗಿ ಹುಟ್ಟುತ್ತೆ, ಕೂಸು ಹುಟ್ಟುವ ಮುನ್ನ ಮಗುವಿಗೆ ಉಡುಗೊರೆಗಳನ್ನು ಖರೀದಿಸಬಾರದು ಅಂತೆಲ್ಲಾ ನಮ್ಮ ಕಡೆ ಹೇಳುತ್ತಾರೆ. ಅದೇ ರೀತಿ ಇಲ್ಲೊಂದು ದೇಶದಲ್ಲಿ ವಿಚಿತ್ರ ನಂಬಿಕೆಯನ್ನು ಪಾಲಿಸಲಾಗುತ್ತಿದ್ದು, ಮಗು ಬೆಳ್ಳಗೆ ಸುಂದರವಾಗಿ ಹುಟ್ಟಬೇಕೆಂದರೆ ಇಲ್ಲಿನ ಜನ ಗರ್ಭಿಣಿ ಮಹಿಳೆಯರಿಗೆ ನಾಯಿಯ ತಲೆ ಬುರುಡೆಯನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ. ಈ ವಿಚಿತ್ರ ನಂಬಿಕೆ ಇರುವುದಾದರೂ ಎಲ್ಲಿ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Viral:ವಿಚಿತ್ರ ನಂಬಿಕೆ...  ಮಗು ಬೆಳ್ಳಗೆ ಸುಂದರವಾಗಿ ಹುಟ್ಟಲು ಇಲ್ಲಿನ ಗರ್ಭಿಣಿ ಮಹಿಳೆಯರು  ನಾಯಿ ತಲೆ ಬುರುಡೆ ತಿನ್ನಬೇಕಂತೆ!
Follow us on

ಇಂದಿಗೂ ಗರ್ಭಿಣಿ, ಬಾಣಂತಿ ಹಾಗೂ ಶಿಶುವಿಗೆ ಸಂಬಂಧಪಟ್ಟ ಪದ್ಧತಿಗಳು, ಮೂಡ ನಂಬಿಕೆಗಳು ಅನೇಕ ಇವೆ. ಕೆಲವೊಂದು ನಂಬಿಕೆಗಳನ್ನು ಮಗು ಹಾಗೂ ಬಾಣಂತಿಯ ಸುರಕ್ಷತೆಗಾಗಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಮಾತ್ರವಲ್ಲದೇ ವಿದೇಶಿ ಸಂಸ್ಕೃತಿಯಲ್ಲೂ ಕೆಲವೊಂದು ಮೂಢನಂಬಿಕೆಗಳನ್ನು ಇಂದಿಗೂ ಪಾಲಿಸುತ್ತಾರೆ. ನಮ್ಮ ಕಡೆ ಗರ್ಭಿಣಿ ಮಹಿಳೆಯರು ಕೇಸರಿ ಹಾಲು ಕುಡಿದ್ರೆ ಮಗು ಸುಂದರವಾಗಿ ಹುಟ್ಟಿತ್ತೆ ಎಂದು ಹೇಳುವಂತೆ ಈ ಒಂದು ದೇಶದಲ್ಲಿ ಮಗು ಬೆಳ್ಳಗೆ ಸುಂದರವಾಗಿ ಹುಟ್ಟಬೇಕೆಂದರೆ ನಾಯಿಯ ತಲೆ ಬುರುಡೆಯನ್ನು ತಿನ್ನುವಂತೆ ಗರ್ಭಿಣಿ ಮಹಿಳೆಯರಿಗೆ ಸಲಹೆಯನ್ನು ನೀಡುತ್ತಾರೆ. ಈ ವಿಚಿತ್ರ ನಂಬಿಕೆ ಇರುವುದಾದರೂ ಎಲ್ಲಿ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಈ ವಿಚಿತ್ರ ನಂಬಿಕೆ ಇರುವುದಾದರೂ ಎಲ್ಲಿ ಗೊತ್ತಾ?

ನಮ್ಮ ಭಾರತದಲ್ಲಿ ಗರ್ಭಿಣಿ, ಬಾಣಂತಿ ಮತ್ತು ಶಿಶುವನ್ನು ನೋಡಿಕೊಳ್ಳಲು ಕೆಲವು ಪದ್ಧತಿ ಮತ್ತು ಸಲಹೆಗಳನ್ನು ಪಾಲಿಸುವಂತೆ, ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿಯೂ ಕೂಡಾ ಗರ್ಭಿಣಿ ಮಹಿಳೆಯರಿಗೆ ಸಂಬಂಧಿಸಿದ ನಂಬಿಕೆಗಳಿಗೆ. ಹೌದು ನಮ್ಮ ಕಡೆ ಮಗು ಸುಂದರವಾಗಿ ಹುಟ್ಟಲು ಬಾದಮಿ, ಕೇಸರಿ ಹಾಲು ಕುಡಿಯಲು ಸಲಹೆ ನಿಡುವಂತೆ ಚೀನಾದಲ್ಲಿ ಮಗು ಸುಂದರವಾಗಿ ಹುಟ್ಟಲು ನಾಯಿಯ ತಲೆ ಬುಡರುಡೆಯನ್ನು ತಿನ್ನಲು ಸಲಹೆ ನೀಡುತ್ತಾರೆ. ಇದು ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಒಂದು ವಿಚಿತ್ರ ಪದ್ಧತಿಯಾಗಿದೆ. ಇಲ್ಲಿನ ನಂಬಿಕೆಯ ಪ್ರಕಾರ ಗರ್ಭಿಣಿ ಮಹಿಳೆಯರು ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿನ್ನುವುದರಿಂದ ಉತ್ತಮ ಬೆಳವಣಿಗೆಯ ಜೊತೆಗೆ ಮಗು ಬೆಳ್ಳಗೆ, ಸುಂದರವಾಗಿ ಜನಿಸುತ್ತದೆ. ಜೊತೆಗೆ ಇದು ಮಗುವಿನ ಮೇಲೆ ಧನಾತ್ಮಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆಯಂತೆ.

ಇದನ್ನೂ ಓದಿ: ಈ ಬಣ್ಣ ನೋಡಿ ಗೂಳಿಗಷ್ಟೇ ಅಲ್ಲ.. ನಾಯಿಗೂ ಸಿಟ್ಟು ಬರುತ್ತೆ..! ರಸ್ತೆಯಲ್ಲಿ ನಡೆಯುವಾಗ ಎಚ್ಚರ!

ಸಂಶೋಧಕರಾದ ಕ್ಸಾಂಡರ್‌ ಲೀ ಅವರ ಪ್ರಕಾರ ಗರ್ಣಿಣಿ ಮಹಿಳೆಯರು ಬಿಳಿ ಬಣ್ಣದ ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿಂದರೆ ಮಗು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಜನಿಸುತ್ತದೆ. ಈ ಬಗ್ಗೆ ಚೀನಾದ ಪುರಾತನ ಸಾಹಿತ್ಯಗಳಲ್ಲಿ ಒಂದಾದ ತೈಚಾಂಶುದಲ್ಲಿಯೂ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಚೀನಾದಲ್ಲಿ ಇನ್ನೊಂದು ವಿಚಿತ್ರ ನಂಬಿಕೆಯನ್ನು ಪಾಲಿಸಲಾಗುತ್ತಿದ್ದು, ಗರ್ಭಿಣಿಯರು ಸಂಜೆ ನಂತರ ಊಟ ಮಾಡುವಾಗ ಅವರು ಚಿಕ್ಕ ಬಟ್ಟಲಿನಲ್ಲಿಯೇ ಅನ್ನವನ್ನು ತಿನ್ನಬೇಕು, ಇದರಿಂದ ಮಗುವಿನ ತಲೆಯು ಚಿಕ್ಕದಾಗಿ ಮತ್ತು ಸುಂದರವಾಗಿರುತ್ತದೆ ಎಂಬ ನಂಬಿಕೆಯೂ ಇದೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ