ಈ ಬಣ್ಣ ನೋಡಿ ಗೂಳಿಗಷ್ಟೇ ಅಲ್ಲ.. ನಾಯಿಗೂ ಸಿಟ್ಟು ಬರುತ್ತೆ..! ರಸ್ತೆಯಲ್ಲಿ ನಡೆಯುವಾಗ ಎಚ್ಚರ!

ಕೆಂಪು ಬಣ್ಣ ಕಂಡಾಕ್ಷಣ ಗೂಳಿ ಅಟ್ಟಿಸಿಕೊಂಡು ಬರುತ್ತದೆ. ಇದರಂತೆ ನಾಯಿಗಳಿಗೂ ಕೂಡ ಕೆಲವೊಂದು ಬಣ್ಣ ಕಂಡಾಕ್ಷಣ ದಾಳಿಗೆ ಮುಂದಾಗುತ್ತವೆ. ಅದರಿಂದ ನಾಯಿಗೆ ಯಾವ ಬಣ್ಣ ಕಂಡರೆ ಸಿಟ್ಟು ಬರುತ್ತದೆ? ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ಬಣ್ಣ ನೋಡಿ ಗೂಳಿಗಷ್ಟೇ ಅಲ್ಲ.. ನಾಯಿಗೂ ಸಿಟ್ಟು ಬರುತ್ತೆ..! ರಸ್ತೆಯಲ್ಲಿ ನಡೆಯುವಾಗ ಎಚ್ಚರ!
Follow us
|

Updated on:Sep 05, 2024 | 11:17 AM

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರ ಹಿಂದೆ ಹಲವು ಕಾರಣಗಳಿವೆ ಎನ್ನುತ್ತಾರೆ ಸಂಶೋಧಕರು. ಇದೀಗ ಸಂಶೋಧನೆಯೊಂದರಲ್ಲಿ ಆಘಾತಕಾರಿ ವಿಷಯ ಹೊರಬಿದಿದ್ದು, ಕೆಲವು ಬಣ್ಣಗಳಿಂದ ಗೂಳಿಗಷ್ಟೇ ಅಲ್ಲ.. ನಾಯಿಗೂ ಸಿಟ್ಟು ಬರುತ್ತೆಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಕೆಂಪು ಬಣ್ಣ ಕಂಡಾಕ್ಷಣ ಗೂಳಿ ಅಟ್ಟಿಸಿಕೊಂಡು ಬರುತ್ತದೆ. ಇದರಂತೆ ನಾಯಿಗಳಿಗೂ ಕೂಡ ಕೆಲವೊಂದು ಬಣ್ಣ ಕಂಡಾಕ್ಷಣ ದಾಳಿಗೆ ಮುಂದಾಗುತ್ತವೆ. ಅದರಿಂದ ನಾಯಿಗೆ ಯಾವ ಬಣ್ಣ ಕಂಡರೆ ಸಿಟ್ಟು ಬರುತ್ತದೆ? ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇದನ್ನೂ ಓದಿ: Richest Dog: 3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು

ಕೆಂಪು ಬಣ್ಣವನ್ನು ಕಂಡರೆ ನಾಯಿ ಕೋಪಗೊಂಡು ಹಿಂಬಾಲಿಸಿಕೊಂಡು ಬರಬಹುದು ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದಲ್ಲದೇ ನಾಯಿಗಳು ಕಪ್ಪು ಬಣ್ಣವನ್ನು ಕೂಡ ಇಷ್ಟಪಡುವುದಿಲ್ಲ. ಹಾಗಾಗಿ ಕಪ್ಪು ಬಣ್ಣ ಕಂಡರೆ ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ. ಕಪ್ಪು ಬಣ್ಣ, ವಸ್ತುಗಳು ಅಥವಾ ನೆರಳುಗಳು ನಿಗೂಢವಾದದ್ದನ್ನು ಪ್ರತಿನಿಧಿಸುತ್ತವೆ. ಈ ಕಾರಣದಿಂದಾಗಿ ನಾಯಿಗಳು ಕಪ್ಪು ಬಣ್ಣ ಕಂಡಾಕ್ಷಣ ಕೋಪಗೊಳ್ಳುತ್ತದೆ ಎಂದು ತಿಳಿದುಬಂದಿದೆ. ಆದರೆ ಇದು ಎಲ್ಲಾ ನಾಯಿಗಳಿಗೂ ಅನ್ವಯಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Thu, 5 September 24