ಈಗಿನ ಕಾಲದಲ್ಲಿ ಮನೆ ಖರೀದಿ ಮಾಡಿದ್ರೆ ವೈ-ಫೈ ಫ್ರೀ ಅಂದ್ರೆ ನಂಬಬಹುದು ಆದರೆ ವೈಫನ್ನೇ ಫ್ರೀಯಾಗಿ ಕೊಡ್ತೀನಿ ಅಂದ್ರೆ ನಂಬಲು ಸಾಧ್ಯವೇ?. ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಯುತ್ತಿರುವುದೇ ಹೀಗೆ, ಉಚಿತ ಭರವಸೆಗಳನ್ನು ನೀಡಿ ಮನೆ ಅಥವಾ ಆಸ್ತಿಯನ್ನು ಖರೀದಿ ಮಾಡಿಸುವ ಬಗೆ ಇದು. ಯಾವುದೇ ರಿಯಲ್ ಎಸ್ಟೇಟ್ ಕಂಪನಿ ಇಂತಹ ಜಾಹೀರಾತನ್ನು ಏಕೆ ನೀಡುತ್ತಿದೆ ಎಂಬುದು ಎಲ್ಲರ ಮನಸ್ಸಿನಲ್ಲಿ ಉದ್ಭವವಾಗಿರುವ ಗೊಂದಲವಾಗಿದೆ. ಏಕೆಂದರೆ ರಾತ್ರೋರಾತ್ರಿ ಚೀನಾದ ರಿಯಲ್ ಎಸ್ಟೇಟ್ ಬಿಸಿನೆಸ್ನಲ್ಲಿ ಬಿರುಗಾಳಿ ಎದ್ದಿದೆ.
ಚೀನಾದಲ್ಲಿ ಅನೇಕ ಕಂಪನಿಗಳು ದಿವಾಳಿಯಾಗಿವೆ, ಇದು ಚೀನಾದ ಆರ್ಥಿಕತೆ ಮೇಲೂ ಪರಿಣಾಮ ಬೀರಿವೆ. ಅನೇಕ ಉದ್ಯಮಿಗಳ ಕಾರ್ಯನಿರ್ವಾಹಕರು ಜೈಲು ಪಾಲಾಗಿದ್ದಾರೆ. ಕೆಲವರು ರಾತ್ರೋ ರಾತ್ರಿ ಊರು ಬಿಟ್ಟು ತೆರಳಿದ್ದಾರೆ.
ಹೀಗಾಗಿ ಚೀನಾದ ಪ್ರಾಪರ್ಟಿ ಡೆವಲಪರ್ಗಳು ಎಷ್ಟು ಹತಾಶರಾಗಿದ್ದಾರೆ ಎಂದರೆ ಅವರು ಆಸ್ತಿಯನ್ನು ಮಾರಾಟ ಮಾಡಲು ಚಿತ್ರವಿಚಿತ್ರ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಟಿಯಾಂಜಿನ್ ಮೂಲದ ಕಂಪನಿ ಎಲ್ಲಾ ಮಿತಿಗಳನ್ನು ದಾಟಿದೆ. ಕಂಪನಿಯು ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಹಾಕಿದೆ.
ಮತ್ತಷ್ಟು ಓದಿ: Viral Video: ನಾನು, ನೀನು, ಹಿಂದಿರುವವರು ಯಾರು? ಶ್ವಾನಗಳ ಜೊತೆ ಸೈಕಲ್ ಸವಾರಿ
ಮನೆ ಖರೀದಿಸಿ ಹೆಂಡತಿಯನ್ನು ಉಚಿತಾಗಿ ಪಡೆಯಿರಿ ಎಂದು ಬರೆಯಲಾಗಿದೆ. ಕೆಲವೊಂದು ಕಂಪನಿಗಳು ಮನೆ ಖರೀದಿಸಿದರೆ ಚಿನ್ನದ ಗಟ್ಟಿಯನ್ನು ನೀಡುವುದಾಗಿ ಹೇಳಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ