Viral Video: ನಾನು, ನೀನು, ಹಿಂದಿರುವವರು ಯಾರು? ಶ್ವಾನಗಳ ಜೊತೆ ಸೈಕಲ್ ಸವಾರಿ
ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ತುಂಬಾನೇ ಆತ್ಮೀಯವಾಗಿರುತ್ತವೆ. ಅಂತಹ ಸಾಕಷ್ಟು ವಿಡಿಯೋಗಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಅಗಾಗ್ಗೆ ನೋಡುತ್ತಿರುತ್ತೇವೆ. ಮಕ್ಕಳೊಂದಿಗೆ ಸೇರಿ ತಾವು ಮಕ್ಕಳಾಗುವ ಶ್ವಾನಗಳು ಪುಟಾಣಿ ಮಕ್ಕಳ ಉತ್ತಮ ಸ್ನೇಹಿತ ಅಂದ್ರೆ ತಪ್ಪಗಲಾರದು. ಈ ನಿಷ್ಕಲ್ಮಶ ಮನಸ್ಸಿನ ಸ್ನೇಹಿತರ ಸುಂದರ ಬಾಂಧವ್ಯದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಬಾಲಕಿಯೊಬ್ಬಳು ಶ್ವಾನಗಳ ಜೊತೆಗೆ ಸೈಕಲ್ ಸವಾರಿ ಮಾಡಿದ್ದಾಳೆ. ಈ ಕ್ಯೂಟೆಸ್ಟ್ ವಿಡಿಯೋ ನೋಡುಗರ ಮೊಗದಲ್ಲಿ ಕಿರು ನಗೆಯನ್ನು ತರಿಸಿದೆ.
ಮನೆಯ ಮುದ್ದಿನ ಶ್ವಾನಗಳು ಮಕ್ಕಳೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತವೆ. ಪುಟ್ಟ ಮಕ್ಕಳು ಕೂಡಾ ಅಷ್ಟೇ, ತಮ್ಮ ಮುಗ್ಧ ಮನಸ್ಸಿನ ಸ್ನೇಹಿತರೊಂದಿಗೆ ಆಟವಾಡುತ್ತಾ ಸಮಯ ಕಳೆಯಲು ಬಹಳನೇ ಇಷ್ಟಪಡುತ್ತಾರೆ. ಅದರಲ್ಲೂ ಈ ಪುಟ್ಟ ಮಕ್ಕಳು ತಮ್ಮ ಬಳಿ ಎಷ್ಟೇ ಆಟಿಕೆಗಳಿದ್ದರೂ ಕೂಡಾ ಮನೆಯ ಬೆಕ್ಕು ಮತ್ತು ನಾಯಿಗಳೊಂದಿಗೆ ಆಟವಾಡಲು ಇಷ್ಟಪಡುತ್ತಾರೆ. ಮಕ್ಕಳೊಂದಿಗೆ ಸೇರಿ ತಾವು ಮಕ್ಕಳಾಗಿ ಆಟವಾಡುವ ಈ ಮುದ್ದು ಗೆಳೆಯರ ಗೆಳೆತನವನ್ನು ನೋಡುವುದೇ ಒಂದು ರೀತಿಯ ಆನಂದ. ಈ ನಿಷ್ಕಲ್ಮಶ ಮನಸ್ಸಿನ ಸ್ನೇಹಿತರ ಸುಂದರ ಬಾಂಧವ್ಯದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಬಾಲಕಿಯೊಬ್ಬಳು ಶ್ವಾನಗಳ ಜೊತೆಗೆ ಸೈಕಲ್ ಸವಾರಿ ಮಾಡಿದ್ದಾಳೆ. ಈ ಮುದ್ದಾದ ವಿಡಿಯೋ ಪ್ರಾಣಿ ಪ್ರಿಯರ ಮನಗೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಶ್ವಾನಗಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಸೈಕಲ್ ಸವಾರಿ ಹೊರಟಿರುವ ಮುದ್ದಾದ ದೃಶ್ಯವನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು @TheFigen_ ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸೋ ಬ್ಯುಟಿಫುಲ್ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
So beautiful.pic.twitter.com/jJYJVId3fk
— Figen (@TheFigen_) January 29, 2024
ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಆಕೆಯ ಮನೆಯ ಮೂರು ಶ್ವಾನಗಳನ್ನು ಸೈಕಲ್ ಮೇಲೆ ಕೂರಿಸಿಕೊಂಡು, ಮನೆಯ ಸುತ್ತಲೂ ಸವಾರಿ ಮಾಡಿದ್ದಾಳೆ. ಶ್ವಾನಗಳು ಕೂಡಾ ಸೈಕಲ್ ಸವಾರಿಯನ್ನು ಬಹಳ ಎಂಜಾಯ್ ಮಾಡುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಾರತದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲ
ಜನವರಿ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 56 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼತುಂಬಾ ಮುದ್ದಾದ ದೃಶ್ಯʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯವನ್ನು ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲದುʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮುದ್ದಿನ ಸ್ನೇಹಿತರು ಜೊತೆಯಾಗಿ ಸೈಕಲ್ ಅಲ್ಲಿ ಶಾಲೆಗೆ ಹೋಗುತ್ತಿದ್ದಾರೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಅನೇಕರು ಈ ಮುದ್ದಾದ ವಿಡಿಯೋಗೆ ಮನಸೋತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Wed, 31 January 24