Men Not Allowed: ಭಾರತದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲ
ಸಾಮಾನ್ಯವಾಗ ಮಹಿಳೆಯರಿಗೆ ಕೆಲವು ದೇವಾಲಯಗಳಿಗೆ ಪ್ರವೇಶವಿಲ್ಲ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ಎಂದಾದರೂ ಪುರುಷರಿಗೆ ಪ್ರವೇಶವಿಲ್ಲದ ದೇವಾಲಗಳ ಬಗ್ಗೆ ಕೇಳಿದ್ದೀರಾ? ಭಾರತದ ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದ್ದು,ಪುರುಷರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಶಬರಿಮಲೆ ವಿವಾದ ಸಂಭವಿಸಿದಾಗ ಹಲವಾರು ಪ್ರತಿಭಟನೆಗಳು ಮತ್ತು ಪ್ರಕರಣಗಳು ನಡೆದವು. ಕಟ್ಟಾ ಸ್ತ್ರೀವಾದಿಗಳಿಂದ ಹಿಡಿದು ಸಮಾನತೆಯ ಬೆಂಬಲಿಗರವರೆಗೂ ಈ ಕೂಗು ಜೋರಾಗಿ ಕೇಳಿಬರುತ್ತಿತ್ತು. ಸಾಮಾನ್ಯವಾಗ ಮಹಿಳೆಯರಿಗೆ ಕೆಲವು ದೇವಾಲಯಗಳಿಗೆ ಪ್ರವೇಶವಿಲ್ಲ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ಎಂದಾದರೂ ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ತಿಳಿದಿದ್ದೀರಾ? ಭಾರತದ ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದ್ದು,ಪುರುಷರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆ ದೇವಾಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳು:
ಅಟ್ಟುಕಲ್ ಭಗವತಿ ದೇವಸ್ಥಾನ:
ಅಟ್ಟುಕಲ್ ದೇವಾಲಯವು ತಿರುವನಂತಪುರಂ ನಗರದ ಹೃದಯಭಾಗದಲ್ಲಿರುವ ಅಟ್ಟುಕಲ್‌ನಲ್ಲಿದೆ, ಆದಿಶಕ್ತಿಯ ಅವತಾರಗಳಲ್ಲಿ ಒಂದಾದ ಭದ್ರಕಾಳಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಅಟ್ಟುಕಲ್ ಪೊಂಗಲ್ ಹಬ್ಬದ ಸಮಯದಲ್ಲಿ ಲಕ್ಷಾಂತರ ಮಹಿಳೆಯರು ಒಟ್ಟಾಗಿ ಸೇರುತ್ತಾರೆ.ಈ ಉತ್ಸವದ ಸಮಯದಲ್ಲಿ, ದೇವಾಲಯದ ಆವರಣದೊಳಗೆ ಪುರುಷರಿಗೆ ಪ್ರವೇಶವಿಲ್ಲ.
ಕಾಮಾಕ್ಯ ದೇವಾಲಯ:
ಕಾಮಾಕ್ಯ ದೇವಾಲಯವು ಅಸ್ಸಾಂನ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಈ ದೇವಾಲಯವು ಕಾಮಾಕ್ಯ ದೇವಿಯ ಋತುಚಕ್ರವನ್ನು ಮತ್ತು ಆಕೆಯ ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಆಚರಿಸುತ್ತದೆ. ಪ್ರತಿ ವರ್ಷ ಅಂಬುಬಾಚಿ ಮೇಳದ ಸಮಯದಲ್ಲಿ, ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ ಮತ್ತು ಆ ಅವಧಿಯಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ.
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ಚಕ್ಕುಲತುಕಾವು ದೇವಸ್ಥಾನ:
ಆಲಪ್ಪುಳದ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿರುವ ಚಕ್ಕುಲತುಕಾವು ಭಗವತಿ ದೇವಸ್ಥಾನವು ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ವಾರ್ಷಿಕ ‘ನಾರಿ ಪೂಜೆ’ ಉತ್ಸವದಲ್ಲಿ, ಪುರುಷರು ದೇವಾಲಯದ ಪ್ರದೇಶವನ್ನು ಪ್ರವೇಶಿಸುವಂತಿಲ್ಲ.
ಸಂತೋಷಿ ಮಾತಾ ದೇವಸ್ಥಾನ:
ಸಂತೋಷಿ ಮಾತಾ ದೇವಾಲಯವು ಜೋಧಪುರ ನಗರದಿಂದ 10 ಕಿ.ಮೀ ದೂರದಲ್ಲಿರುವ ಲಾಲ್ ಸಾಗರ್‌ನಲ್ಲಿದೆ. ದೇವತೆ ಸಂತೋಷಿ ಮಾತೆಗೆ ಅರ್ಪಿತವಾಗಿರುವ ದೇವಾಲಯವಿದು. ಈ ದೇವಾಲಯದೊಳಗೆ ಪುರುಷರಿಗೆ ಪ್ರವೇಶವಿಲ್ಲ. ದಂತಕಥೆಗಳ ಪ್ರಕಾರ ಶುಕ್ರವಾರದಂದು ದೇವಾಲಯದ ಶಕ್ತಿಯು ಹೆಚ್ಚಾಗುತ್ತದೆ ಎಂದು ನಂಬಿಕೆ ಇದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ