ಮನರಂಜನೆ ಎಲ್ಲರಿಗೂ ಬೇಕು. ಆದರೆ ಕೆಲವು ಮನರಂಜನೆಗಳು ಜೀವಕ್ಕೇ ಕುತ್ತು ತರುತ್ತವೆ. ಅಂತಹವುಗಳಲ್ಲಿ ಸರ್ಕಸ್ (Circus) ಅಥವಾ ಸ್ಟಂಟ್ (Stunt) ಕೂಡ ಒಂದು. ಜನರನ್ನು ಮನರಂಜಿಸಲು ನಡೆಸುವ ಸರ್ಕಸ್ಗಳು ಅಪಾಯವನ್ನು ಸೆರಗಿಗೆ ಕಟ್ಟಿಕೊಂಡು ಮಾಡುವ ಸಾಹಸವಾಗಿದೆ. ಎಷ್ಟೇ ತರಬೇತಿ ಪಡೆದಿದ್ದರೂ ಕೂಡ ಕೆಲವೊಮ್ಮೆ ಸ್ಟಂಟ್ಗಳು ಅಪಾಯವನ್ನು ತಂದೊಡ್ಡುತ್ತವೆ. ಅಂತಹದ್ದೇ ಒಂದು ಘಟನೆ ಜರ್ಮನಿ (Geramany) ಯಲ್ಲಿ ನಡೆದಿದೆ. ವೃತ್ತಿ ಪರ ಸ್ಟಂಟ್ ಮಾಸ್ಟರ್ ಒಬ್ಬರು ಸರ್ಕಸ್ ವೇಳೆ ಆಯತಪ್ಪಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಘಟನೆ ನಡೆದಿದೆ. ಈ ಮೈ ಜುಮ್ ಎನ್ನಿಸುವ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜರ್ಮನಿಯ ಡ್ಯೂಸ್ಬರ್ಗ್ನಲ್ಲಿ ನಡೆಯುತ್ತಿದ್ದ ಸರ್ಕಸ್ನಲ್ಲಿ ವೃತ್ತಿಪರ ಸ್ಕೇಟರ್ ಲುಕಾಸ್ಜ್ ಮಾಲೆವ್ಸ್ಕಿ ಸ್ಟಂಟ್ ಸ್ಟಂಡ್ ಮಾಡುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಲುಕಾಸ್ಜ್ ಮಾಲೆವ್ಸ್ಕಿ ಹಾರಿ ಹಗ್ಗವನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಹಗ್ಗ ಕೈಗೆ ಸಿಗದೆ ಮುಂದೆ ಹಾರಿದ್ದಾರೆ. ಇದರಿಂದ ಎದುರು ದಿನ ಸ್ಟೇಜ್ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಜತೆಯಲ್ಲಿದ್ದವರು ಬಂದು ಅವರನ್ನು ಎತ್ತಿದ್ದಾರೆ. ಅದೃಷ್ಟವಶಾತ್ ಲುಕಾಸ್ಜ್ ಮಾಲೆವ್ಸ್ಕಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ ಎಂದು ವರದಿಯಾಗಿದೆ. ಈ ದೃಶ್ಯದ ವಿಡಿಯೋವನ್ನು ಯುಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ದಿಗಿಲುಗೊಂಡಿದ್ದಾರೆ. ಸದ್ಯ ಯುಟ್ಯೂಬ್ನಲ್ಲಿ ಹಂಚಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ;
India Republic Day; ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ರಚಿಸಿ ಶುಭ ಕೋರಿದ ಗೂಗಲ್
Viral video; ಮನೆಯ ಗೋಡೆ ಹತ್ತಿದ ಹೆಬ್ಬಾವು; ಬದುಕಿದೆಯಾ ಬಡಜೀವವೇ ಎಂದುಕೊಂಡ ಬೆಕ್ಕು