Video: ಶಾಲೆಗೆ ಬರಲು ಒಲ್ಲೆ ಎಂದ ಹುಡುಗನನ್ನು ಎತ್ಕೊಂಡು ಹೋದ ಸಹಪಾಠಿಗಳು
ಈಗಿನ ಖಾಸಗಿ ಅಥವಾ ಕಾನ್ವೆಂಟ್ ಶಾಲೆಗೆ ಹೋಲಿಸಿದ್ರೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಬಾಲ್ಯವೇ ಚಂದ. ಆದರೆ ಇದೀಗ ವೈರಲ್ ಆಗಿರುವ ದೃಶ್ಯವನ್ನು ನೀವು ಸರ್ಕಾರಿ ಶಾಲೆಯಲ್ಲಿ ಮಾತ್ರ ಕಾಣಲು ಸಾಧ್ಯ. ಹೌದು, ಶಾಲೆಗೆ ಹೋಗಲು ನಿರಾಕರಿಸಿದ ಹುಡುಗನನ್ನು ಸಹಪಾಠಿಗಳು ಎತ್ಕೊಂಡು ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ಲಿಪಿಂಗ್ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಮಕ್ಕಳು (children) ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸುವ ಪ್ರಯತ್ನಗಳನ್ನು ಮಾಡ್ತಾರೆ. ಆದರೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಹೆತ್ತವರು ಈ ವಿಷ್ಯದಲ್ಲಿ ಮುದ್ದು ಮಾಡೋ ಮಾತೇ ಇಲ್ಲ ಬಿಡಿ. ಶಾಲೆಗೆ ಹೋಗಲ್ಲ ಎಂದಾಗ ಬೆನ್ನಿಗೆ ಗೂಸಾ ಬೀಳೋದಂತೂ ಪಕ್ಕಾ. ಶಾಲಾ ದಿನಗಳ (school days) ಇಂತಹ ನೆನಪುಗಳೇ ಚಂದ. ಆದರೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಾಲಕನು ಸ್ಕೂಲ್‌ಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದು, ಮನೆಗೆ ಬಂದ ಈತನ ಸಹಪಾಠಿಗಳು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.
ಶಾಲೆಗೆ ಬರಲ್ಲ ಎಂದ ಹುಡುಗ, ಮುಂದೇನಾಯ್ತು ನೋಡಿ
ಸಂಗು ರೈನಾ (Sangu raina) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿರುವ ಬಾಲಕನ ಮನೆಗೆ ನುಗ್ಗಿದ್ದಾರೆ ಸಹಪಾಠಿಗಳು. ಆ ಬಳಿಕ ಹುಡುಗನ ಕೈಕಾಲು ಹಿಡಿದು ಶಾಲೆಗೆ ಎತ್ತ್ಕೊಂಡು ಹೋಗಿದ್ದು, ಮನೆಯವರು ಈ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಆದರೆ ಸಹಪಾಠಿಗಳು ಕೈಕಾಲು ಹಿಡಿದು ಎತ್ಕೊಂಡು ಹೋಗುತ್ತಿದ್ದಂತೆ ಈ ಬಾಲಕನು ಜೋರಾಗಿ ಅಳುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನನ್ನ ಬಾಲ್ಯದ ನೆನಪು ನನ್ನ ಕಣ್ಣ ಮುಂದೆ ಬಂತು. ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎಂದಿದ್ದಾರೆ. ಇನ್ನೊಬ್ಬರು, ಪ್ರೈವೇಟ್ ಸ್ಕೂಲ್ ಮಕ್ಕಳನ್ನು ಕರ್ಕೊಂಡು ಹೋಗೋದಕ್ಕೆ ಬಸ್ ಬಂದ್ರೆ, ನಮ್ಮ ಸರ್ಕಾರಿ ಮಕ್ಕಳನ್ನು ಕರ್ಕೊಂಡು ಹೋಗೋಕೆ ಶಿಕ್ಷಕರೇ ಬರ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾವು ಸಣ್ಣವರು ಇದ್ದಾಗ ನಮ್ಮ ದೋಸ್ತನನ್ನು ಹೀಗೆ ಕರ್ಕೊಂಡು ಬಂದಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Thu, 20 November 25




