
Viral Video : ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ನಿಯೋಜಿಸಲಾದ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕ್ಯಾಪ್ಟನ್ ಶಿವಾ ಚೌಹಾಣ್. ಈ ಕುರಿತು ಉದ್ಯಮಿ ಆನಂದ ಮಹೀಂದ್ರಾ ಟ್ವೀಟ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅನೇಕರು ಶಿವಾ ಅವರಿಗೆ ಗೌರವದಿಂದ ಮೆಚ್ಚುಗೆ ಸೂಚಿಸುತ್ತಿದ್ಧಾರೆ ಮತ್ತು ಅಭಿನಂದಿಸುತ್ತಿದ್ದಾರೆ.
ಸಿಯಾಚಿನ್ನಲ್ಲಿ ಯುದ್ಧ ಸಂಬಂಧಿ ಚಟುವಟಿಕೆಗಳನ್ನು ನಿರ್ವಹಿಸಲು ಮೊದಲ ಸಲ ಮಹಿಳಾ ಅಧಿಕಾರಿಯನ್ನು ನಿಯೋಜಿಸಲಾದ ವಿಷಯವನ್ನು ಎಎನ್ಐ ತನ್ನ ಟ್ವೀಟ್ನಲ್ಲಿ ಹಂಚಿಕೊಂಡಿದೆ. ಜನವರಿ 2ರಂದು ಎಎನ್ಐನ ವಿಡಿಯೋ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಆನಂದ ಮಹೀಂದ್ರಾ.
ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಶಿವಾ ಶಕ್ತಿ! ಶಿವಾ ಅವರ ಯಶಸ್ಸು ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸೋಣ. ಅವರು ಲಿಂಗತಾರತಮ್ಯವನ್ನು ಸಿಯಾಚನ್ನ ಹಿಮದ ಆಳದಲ್ಲಿ ಹೂತುಹಾಕುವಂತಾಗಲಿ ಎಂದಿದ್ಧಾರೆ ಆನಂದ ಮಹೀಂದ್ರಾ. ನೂರಾರು ಜನರು ಈ ವಿಡಿಯೋಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು
ಇಂಥ ಧೈರ್ಯಶಾಲಿಯನ್ನು ಹೆತ್ತ ಪೋಷಕರಿಗೆ ಸೆಲ್ಯೂಟ್, ದೇವರು ಇವರೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಅನೇಕರು. ಈ ಹುದ್ದೆಯನ್ನೇರಿದ ಅವರಿಗೆ, ಅವರ ಕುಟುಂಬದ ಧೈರ್ಯಕ್ಕೆ ಸೆಲ್ಯೂಟ್! ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:19 pm, Wed, 4 January 23