
Viral Video : ಹೀಗೊಂದು ಅನಿರೀಕ್ಷಿತ ಸಂತೋಷ ನೆಟ್ಟಿಗರ ಮನಸ್ಸನ್ನು ಸೂರೆಗೊಳ್ಳುತ್ತಿದೆ. ಫುಡ್ ಡೆಲಿವರಿ ಮಾಡಲು ಬಂದ ಝೊಮ್ಯಾಟೋ ಡೆಲಿವರಿ ಏಜೆಂಟ್ರನ್ನು ಟೆರೇಸಿಗೆ ಆಹ್ವಾನಿಸಿ ಅವರಿಂದಲೇ ಕೇಕ್ ಮಾಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ ಬೆಂಗಳೂರಿನ ಈ ಯುವಕರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ಕಿಶನ್ ಶ್ರೀವತ್ಸ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ‘ನಾವು ಡಿಸೆಂಬರ್ 31ರ ರಾತ್ರಿ 11ಕ್ಕೆ ಫುಡ್ ಆರ್ಡರ್ ಮಾಡಿದೆವು. ಆರ್ಡರ್ ತಲುಪಿದಾಗ ಸರಿಯಾಗಿ 12 ಗಂಟೆ. ಹಾಗಾಗಿ ಡೆಲಿವರಿ ಏಜೆಂಟ್ ಅವರಿಗೆ ಕೇಕ್ ಕಟ್ ಮಾಡಲು ಹೇಳಿ ಅವರೊಂದಿಗೆ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದೆವು’ ಎಂದು ನೋಟ್ ಬರೆದಿದ್ದಾರೆ ಕಿಶನ್.
ಇದನ್ನೂ ಓದಿ : ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು
ಗ್ರಾಹಕರು ಕೇಕ್ ಕಟ್ ಮಾಡಲು ಹೇಳಿದಾಗ ಡೆಲಿವರಿ ಏಜೆಂಟ್ ಸಂಕೋಚ ಪಡುತ್ತಾರೆ. ಆದರೆ ಯುವಕರು ಅವರನ್ನು ಒತ್ತಾಯಿಸಿ ಕೇಕ್ ಕಟ್ ಮಾಡಿಸುತ್ತಾರೆ. ಜೊತೆಗೆ ಪರಸ್ಪರ ಕೇಕ್ ಕೂಡ ತಿನ್ನಿಸುತ್ತಾರೆ. ಈ ವಿಡಿಯೋ ಅನ್ನು ಜನವರಿ 1 ರಂದು ಪೋಸ್ಟ್ ಮಾಡಲಾಗಿದೆ. ಈತನಕ 32,000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಆಶ್ಚರ್ಯಕರ! ಈ ನಡೆಯು ಅತ್ಯುತ್ತಮವಾಗಿದೆ. ಹೀಗೆ ಸಂತೋಷವನ್ನು ಹಂಚುತ್ತಲೇ ಇರಿ. ಇದು ಎಂದಾದರೂ ಯಾವುದಾದರೂ ರೂಪದಲ್ಲಿ ಮರಳುತ್ತದೆ ಎಂದು ಒಬ್ಬರು ಹೇಳಿದ್ದಾರೆ. ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಾಯಿತು, ಹೀಗೆಯೇ ಮುಂದುವರಿಯಿರಿ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ