ರಾತ್ರಿ ವೇಳೆ ಕಾರಿನ ಮೇಲೆ ಕಾಮ ಜೋಡಿಯ ಮುತ್ತು-ಅಪ್ಪುಗೆ ಇತ್ಯಾದಿ… ಕನ್ನಡಿಗ ಐಪಿಎಸ್ ಸಜ್ಜನರ್​ ಏನಂದರು?​​

|

Updated on: Oct 17, 2023 | 1:53 PM

Hyderabad: ಕಾರಿನ ಮೇಲೆ ಕಾಮ ಜೋಡಿಯ ಮುತ್ತು-ಅಪ್ಪು ವೀಡಿಯೋ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಒಂದು ರೇಂಜ್‌ನಲ್ಲಿ ಕಿಡಿಕಾರಿದ್ದಾರೆ. ಕೆಲವರು ಈ ಜೋಡಿ ತಮ್ಮ ಫೇವರಿಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ರೀತಿನೀತಿ ಇಲ್ಲದವರು ಎಂದು ಜರಿದಿದ್ದಾರೆ. ಇನ್ನು ಈ ವಿದ್ಯಮಾನದ ಬಗ್ಗೆ ಆರ್‌ಟಿಸಿ ಎಂಡಿ, ಕನ್ನಡಿಗ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ರಾತ್ರಿ ವೇಳೆ ಕಾರಿನ ಮೇಲೆ ಕಾಮ ಜೋಡಿಯ ಮುತ್ತು-ಅಪ್ಪುಗೆ ಇತ್ಯಾದಿ... ಕನ್ನಡಿಗ ಐಪಿಎಸ್ ಸಜ್ಜನರ್​ ಏನಂದರು?​​
ಕಾರಿನ ಮೇಲೆ ಕಾಮ ಜೋಡಿ: ಕನ್ನಡಿಗ ಐಪಿಎಸ್ ಸಜ್ಜನರ್​ ಏನಂದರು?​​
Follow us on

ಸ್ವಾತಂತ್ರ್ಯದ ಅರ್ಥ ಬದಲಾಗುತ್ತಿದೆ. ಸ್ವೇಚ್ಚಾಚಾರ ಮನೆ ಮಾಡಿದೆ. ಯಾರಿಗೆ ಏನು ಇಷ್ಟವೋ ಹಾಗೆ ಬದುಕಬಹುದು ಎಂಬ ಭಾವನೆ ಬೇರೂರುತ್ತಿದೆ ಎಲ್ಲರಲ್ಲಿ. ಇತ್ತೀಚೆಗೆ ಹೈದರಾಬಾದಿನಲ್ಲಿ ಇಂತಹದ್ದೇ ಘಟನೆ ನಡೆದಿದೆ.

ಹೈದರಾಬಾದ್‌ನ ಪಿವಿ ನರಸಿಂಹರಾವ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ರಾತ್ರಿ ಪ್ರಯಾಣದ ವೇಳೆ ಇದ್ದಕ್ಕಿದ್ದಂತೆ ಉದ್ರೇಕಗೊಂಡಿದ್ದಾರೆ. ನಾಲ್ಕು ಜನರ ಮಧ್ಯೆ ತಾವು ಇದ್ದೇವೆ ಎಂಬುದರ ಪರಿವೆಯೂ ಇಲ್ಲದೆ, ಅಸಭ್ಯವಾಗಿ ರೊಮ್ಯಾನ್ಸ್​​ನಲ್ಲಿ ತೊಡಗಿದೆ ಆ ಕಾಮ ಜೋಡಿ. ಇದ್ದಕ್ಕಿದ್ದಂತೆ ಕಾರಿನ ಛಾವಣಿಯಿಂದ ಆ ಎರಡು ದೇಹಗಳು ಮೇಲಕ್ಕೆ ಬಂದವು. ಪ್ರಣಯ ಮಾಡುತ್ತಾ, ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಾ, ಜಗತ್ತಿನ ಜ್ಞಾನವೇ ಇಲ್ಲದವರಂತೆ ಮೈಮರೆತು ಎಲ್ಲರ ಮುಂದೆ ಅಪ್ಪುಗೆ, ಮುತ್ತು ಕೊಟ್ಟುಕೊಂಡಿದ್ದಾರೆ. ಇದನ್ನೆಲ್ಲ ಪಕ್ಕದ ಕಾರಿನಲ್ಲಿ ಹೋಗುತ್ತಿದ್ದವರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ, ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ರೇಂಜ್‌ನಲ್ಲಿ ಕಿಡಿಕಾರಿದ್ದಾರೆ. ಕೆಲವರು ಈ ಜೋಡಿ ತಮ್ಮ ಫೇವರಿಟ್ ಎಂದು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ರೀತಿನೀತಿ ಇಲ್ಲದವರು ಎಂದು ಜರದಿದ್ದಾರೆ. ಇನ್ನು ಈ ವಿದ್ಯಮಾನದ ಬಗ್ಗೆ ಆರ್‌ಟಿಸಿ ಎಂಡಿ, ಕನ್ನಡಿಗ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಪ್ರತಿಕ್ರಿಯಿಸಿದ್ದಾರೆ.

ಕಾರಿನ ಮೇಲೆ ಕಾಮ ಜೋಡಿ – ವೈರಲ್ ವಿಡಿಯೋಗೆ ಐಪಿಎಸ್​ ‘ಸಜ್ಜನ’ ಪ್ರತಿಕ್ರಿಯೆ..

ಇಂದಿನ ಸಮಾಜದಲ್ಲಿ ನಡೆಯುವ ಅರಿವುಗೇಡಿ ವಿದ್ಯಮಾನಗಳ ಬಗ್ಗೆ ಸಾಮಾನ್ಯವಾಗಿ ಸ್ಪಂದಿಸುವ ಐಪಿಎಸ್ ಸಜ್ಜನರ್, ವೈರಲ್ ಆಗುತ್ತಿರುವ ಈ ವಿಡಿಯೋಗೂ ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಪೋಸ್ಟ್ ಮಾಡಿ.. ‘ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕೆ ಯುವ ಜನತೆ ಇತರರಿಗೆ ತೊಂದರೆ ಕೊಡಲು ಈ ರೀತಿ ವರ್ತಿಸುವುದು ಸರಿಯಲ್ಲ. ಸ್ವಾತಂತ್ರ್ಯ ಒತ್ತಟ್ಟಿಗಿರಲಿ, ಮೊದಲು ಇತರರ ಭಾವನೆಗಳನ್ನು ಗೌರವಿಸಿ.. ಯುವಜನತೆ ಜನತೆಗೆ ತೊಂದರೆ ಕೊಡಬಾರದು. ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳಲ್ಲಿ ಈ ಕೃತ್ಯಗಳನ್ನು ಎಸಗುವುದು ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ಟ್ವೀಟ್ ಎಕ್ಸ್​ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ