Holi 2023: ಟ್ರಾಫಿಕ್​​ ನಿಯಮ ಉಲ್ಲಂಘಿಸಿ ಹೀಗೊಂದು ರೊಮ್ಯಾನ್ಸ್​​ , ವೈರಲ್​ ವಿಡಿಯೋ ಇಲ್ಲಿದೆ ನೋಡಿ

ಹೋಲಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ಜೋಡಿಯೊಂದು ಬೈಕ್‌ನಲ್ಲಿ ರೊಮ್ಯಾನ್ಸಿಂಗ್ ಸ್ಟಂಟ್ ಮಾಡುತ್ತಾ ಜಾಲಿ ರೈಡ್​​ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

Holi 2023: ಟ್ರಾಫಿಕ್​​ ನಿಯಮ ಉಲ್ಲಂಘಿಸಿ ಹೀಗೊಂದು ರೊಮ್ಯಾನ್ಸ್​​ , ವೈರಲ್​ ವಿಡಿಯೋ ಇಲ್ಲಿದೆ ನೋಡಿ
ವೈರಲ್ ವೀಡಿಯೋ
Image Credit source: Twitter

Updated on: Mar 08, 2023 | 10:34 AM

ಹೋಲಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ಜೋಡಿಯೊಂದು ಮೋಟಾರು ಬೈಕ್‌ನಲ್ಲಿ ರೊಮ್ಯಾನ್ಸಿಂಗ್ ಸ್ಟಂಟ್ ಮಾಡುತ್ತಾ ಜಾಲಿ ರೈಡ್​​ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗಾ ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಬೈಕ್ ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇಂತಹ ಘಟನೆ ಇದೇನೂ ಮೊದಲಲ್ಲ. ಪ್ರೇಮಿಗಳ ದಿನದಂದು ಜೋಡಿಗಳ ರೊಮ್ಯಾನ್ಸಿಂಗ್ ಸ್ಟಂಟ್​​ ಸಾಕಷ್ಟು ಸುದ್ದಿಯಾಗಿತ್ತು.

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಜೋಡಿಗಳ ರೊಮ್ಯಾನ್ಸಿಂಗ್ ಸ್ಟಂಟ್​​ನ್ನು ಹಿಂಬದಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಚಿತ್ರೀಕರಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡುಗಿ ಕುಳಿತಿರುವುದು ಮತ್ತು ವ್ಯಕ್ತಿ ವಾಹನವನ್ನು ಚಲಾಯಿಸುತ್ತಿರುವುದನ್ನು ವೈರಲ್ ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ನಾಯಿ ಮರಿಯನ್ನು ಕಿಡ್ನಾಪ್ ಮಾಡಲು ಬಂದ ಯುವಕನಿಗೆ ಕಾದಿತ್ತು ಶಾಕ್, ಅಯ್ಯೋ ಈ ದೊಡ್ಡ ಸೈನ್ಯ ಎಲ್ಲಿತ್ತು?

ಫೆಬ್ರವರಿಯಲ್ಲಿ ಇದೇ ರೀತಿಯ ಘಟನೆ ಅಜ್ಮೀರ್ ನಗರದಲ್ಲಿ ದಂಪತಿಗಳು ಮೋಟಾರ್‌ಬೈಕ್‌ನಲ್ಲಿ ಕಿಸ್ಸಿಂಗ್ ಸ್ಟಂಟ್ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿ ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಯುವಕ ಬೈಕ್ ಚಲಾಯಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ. ದಾರಿಹೋಕರು ಈ ವಿಡಿಯೋ ತೆಗೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:32 am, Wed, 8 March 23